ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಕಲ್ಪತರು ಸಭಾಂಗಣದಲ್ಲಿ ಸಂಘದ ವತಿಯಿಂದ ನಡೆದ ಸುದ್ದಿಗೋಷ್ಠಿ ಉದೇಶಿಸಿ ಮಾತನಾಡಿದ ಅವರು ಅನಾದಿ ಕಾಲದಿಂದ ಪತ್ರ ಬರಹಗಾರ ವೃತ್ತಿಯನ್ನು ನಡೆಸಿಕೊಂಡು ಬರುತ್ತಿರುವವರು ಈಗ ಸಂಕಷ್ಠದಲ್ಲಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ ಪತ್ರ ಬರಹಗಾರರ ಒಕ್ಕೂಟ ವತಿಯಿಂದ ಸರ್ಕಾರದ ಗಮನ ಸೆಳೆಯಲು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಸಂದರ್ಭದಲ್ಲಿ ಡಿಸೆಂಬರ್ ೧೬ ರಂದು ಮಂಗಳವಾರ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾವೇರಿ ತಂತ್ರಾಂಶ ಒಂದು ಮತ್ತು ಎರಡರಲ್ಲಿ ಸರ್ಕಾರ ಮತ್ತೊಂದು ಬದಲಾವಣೆ ಮಾಡಲು ಹೊರಟಿದೆ. ಹೆಚ್ಚಿನ ಆಸ್ತಿ ವಿವರ ಬರೆಯಲು ಆಗುತ್ತಿಲ್ಲ. ಅಲ್ಲದೆ ಬೇರೆ ರಾಜ್ಯದಲ್ಲಿ ಇರುವಂತೆ ಪತ್ರ ಬರಹಗಾರರಿಗೂ ಕೂಡ ಲಾಗಿನ್ ನೀಡಬೇಕು, ಈಗಾಗಲೇ ನಮಗೆ ಸಾಕಷ್ಟು ಅನುಭವ ಇದ್ದು, ಪ್ರತಿ ವರ್ಷ ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳುತ್ತಿದ್ದೇವೆ. ಅನಧಿಕೃತ ಬರಹಗಾರರಿಗೆ ಕಡಿವಾಣ ಹಾಕಬೇಕು. ದಾಸ್ತ ವೇಜು ಬರಹಗಾರರಿಗೆ ಆಗುತ್ತಿರುವ ಅನ್ಯಾಯ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು, ಸೈಬರ್ ಸೆಚಿಟರ್‌ಗಳಲ್ಲಿ ಅಧಿಕೃತವಾಗಿ ಬೋರ್ಡ್‌ಗಳನ್ನು ಅಳವಡಿಸಿಕೊಂಡು ಪತ್ರಗಳು ತಯಾರು ಮಾಡುತ್ತಿದ್ದು, ಸ್ಥಳೀಯ ಸಂಸ್ಥೆಯ ಆಯುಕ್ತರು ಹಾಗೂ ತಹಸೀಲ್ದಾರ್ ಅವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ೧೬,೦೦೦ ಪತ್ರ ಬರಹಗಾರರಿದ್ದು ಸರ್ಕಾರ ಉದ್ಯೋಗ ಭದ್ರತೆ ಒದಗಿಸಿಲ್ಲ, ನೋಂದಾಣಿಯಾಗಿರುವ ಎಲ್ಲಾ ಪತ್ರ ಬರಹಗಾರರಿಗೂ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿ ನೀಡಬೇಕು, ಕಾವೇರಿ ತಂತ್ರಾಂಶದಲ್ಲಿ ನಿವೇಶನ ಕೊಳ್ಳುವವರು ಮಾರುವವರು ಹೊಣೆಗಾರರು ಎಂದು ಮಾಡಿದ್ದಾರೆ, ಈ ಖಾತೆ ಆದರದ ಮೇಲೆ ರಿಜಿಸ್ಟರ್ ಮಾಡಲಾಗುತ್ತಿದ್ದು, ಹಳೆಯ ದಾಖಲಾತಿ ರಿಜಿಸ್ಟರ್ ಸಂದರ್ಭದಲ್ಲಿ ತೋರಿಸುತ್ತಿಲ್ಲ. ಇದರಿಂದ ಮುದ್ರಾಂಕ ಶುಲ್ಕ ಸೋರಿಕೆ ಆಗುತ್ತಿದೆ. ೧೯೮೫ ರಿಂದ ಪತ್ರ ಬರಹಗಾರರಿಗೆ ಸಂಭಾವನೆ ಯನ್ನು ಹೆಚ್ಚಿಸಿಲ್ಲ, ಬೇರೆ ರಾಜ್ಯದಂತೆ ನಮ್ಮ ರಾಜ್ಯದಲ್ಲೂ ಕೂಡ ಪತ್ರ ಬರಹಗಾರರಿಗೆ ಲಾಗಿನ್ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪತ್ರ ಬರಹಗಾರರಾದ ಮಹೇಶ್, ರಮೇಶ್, ಬಸವಯ್ಯ, ವಿಜಯ್, ಮಂಜುಳಾ, ಕಲೀಲ್, ನಾಗೇಶ್ ಮತ್ತಿತರರು ಇದ್ದರು.---------------------------
ಕೋಟ್......ದಸ್ತಾವೇಜು ಬರಹಗಾರರಿಗೆ ಯಾವುದೇ ರೀತಿಯ ಭದ್ರತೆಗಳಿಲ್ಲ. ಜನರ ಹಾಗೂ ಇಲಾಖೆ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಬೇಡಿಕೆಗಳಿಗೆ ಸರ್ಕಾರಗಳು ಸ್ಪಂದಿಸಿಲ್ಲ. ಪರವಾನಿಗೆ ಪಡೆದ ಪತ್ರ ಬರಹಗಾರರಿಗೆ ಲಾಗಿನ್ ಕೊಟ್ಟು ಅನುಕೂಲ ಮಾಡಿಕೊಡಬೇಕು. 16ರಂದು ಹೋರಾಟದಲ್ಲಿ ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. - ಉಮೇಶ್ ಆರಾಧ್ಯ, ಉಮೇಶ್ ಆರಾಧ್ಯ. ತಾಲೂಕಾಧ್ಯಕ್ಷ