ಕನ್ನಡಪ್ರಭ ವಾರ್ತೆ ವಿಜಯಪುರ
ಕಲಾವಿದರು ಸಂಸ್ಕೃತಿಯ ರಾಯಬಾರಿಗಳು ಇದ್ದಂತೆ. ತಮ್ಮ ಕಲೆಯಿಂದ ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸುವ ಶಕ್ತಿ ಅವರಿಗೆ ಇದೆ ಎಂದು ಕಲಾವಿದ ಅಂಬಾದಾಸ ಜೋಶಿಯವರ ಪಾತ್ರ ದೊಡ್ಡದಿದೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಆನಂದ ಜೋಶಿ ಹೇಳಿದರು.ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಕಲಾವಿದರ ಬಳಗ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಅಂಬಾದಾಸ ಜೋಶಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುಪ್ರಸಾದರ ನಿರ್ದೇಶನ ಹಾಗೂ ಹಿರಿಯ ನಟ ನವರಸ ನಾಯಕ ಜಗ್ಗೇಶ ನಟಿಸಿದ ಹೊಸ ಚಿತ್ರ ರಂಗನಾಯಕ ಚಿತ್ರದಲ್ಲಿ ಅಭಿನಯಿಸಿ ಜನರಿಂದ ಮೆಚ್ಚುಗೆ ಪಡೆದ ಅಂಬಾದಾಸ ಜೋಶಿ ಅವರು ಸಕಲಕಲಾವಲ್ಲಭರು ಎಂದರು.ಇತಿಹಾಸ ತಜ್ಞ ಡಾ.ಆನಂದ ಕುಲಕರ್ಣಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರತಿಭಾನ್ವಿತರಿಗೆ ಕೊರತೆಯಿಲ್ಲ. ಅವರಿಗೆ ಅವಕಾಶ ನೀಡಿದರೆ ಪ್ರತಿಭೆ ತೋರಿಸಬಲ್ಲರು. ಅಂಬಾದಾಸರು ನಟನೆಯ ಮೂಲಕ ಜಿಲ್ಲೆಯ ಹೆಸರನ್ನು ತಂದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಅಂಬಾದಾಸ ಜೋಶಿ ಅವರು, ವಿಜಯಪುರ ಜಿಲ್ಲೆಯಲ್ಲಿ ಅನೇಕ ಕಲಾವಿದರರು ಇದ್ದಾರೆ. ಸುನೀಲ ಸುಧಾಕರ ಅವರು ಈ ಚಿತ್ರದಲ್ಲಿ ನಟಿಸುವುದರೊಂದಿಗೆ ನನಗೂ ಅವಕಾಶ ಮಾಡಿಕೊಟ್ಟರು. ಸಿಕ್ಕ ಅವಕಾಶ ಬಳಸಿಕೊಂಡು ಸಮಾಜಕ್ಕೆ ತಮ್ಮ ಕಲೆಯ ಪ್ರತಿಭೆ ತೋರಿಸಬೇಕು. ಕಲಾವಿದರಿಗೆ ಪ್ರೋತ್ಸಾಹ ಅವಶ್ಯ ಎಂದರು.ಈ ವೇಳೆ ಜಗದೀಶ ಗಲಗಲಿ, ವಿಶ್ವನಾಥ ಕುಲಕರ್ಣಿ, ಶೇಷರಾವ ಮಾನೆ, ಪ್ರಶಾಂತ ಚೌಧರಿ, ಅಮೋಘ ಶಿದ್ದ, ಸಂಪತ್ ಕುಲಕರ್ಣಿ, ದೇವಿಕಾ ತೊರಗಲ, ರೂಪಾ ಕುಲಕರ್ಣಿ, ಗೀತಾ ಕುಲಕರ್ಣಿ, ಕವಿತಾ ಅವದಾನಿ, ಸವಿತಾ ಎಸ್. ಕುಲಕರ್ಣಿ, ಈರಣ್ಣ ಪಟ್ಟಣಶೆಟ್ಟಿ ಜಿ.ಜಿ. ಕುಲಕರ್ಣಿ ಉಪಸ್ಥಿತರಿದ್ದರು.