ಗಣೇಶ ಹಬ್ಬಕ್ಕೆ ಮೂರ್ತಿಗಳ ಸಿದ್ಧತೆಯಲ್ಲಿ ಕಲಾವಿದರು

KannadaprabhaNewsNetwork |  
Published : Sep 02, 2024, 02:03 AM IST
೧ಕೆಎಲ್‌ಆರ್-೧-೨ಕೋಲಾರದ ಗಣಪತಿ ತಯಾರಕರಾದ ಗೌರಮ್ಮ. | Kannada Prabha

ಸಾರಾಂಶ

ಕಲಿತಿರುವ ಕಲೆ ಬಿಡಬಾರದೆಂದು ಹಬ್ಬದ ಸಮಯದಲ್ಲಿ ಮಾತ್ರ ಕೆಲವು ಕುಟುಂಬಗಳು ಗಣೇಶ ಮೂರ್ತಿ ತಯಾರು ಮಾಡುತ್ತವೆ. ಬೇರೆ ಸಮಯದಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಾರೆ. ಗಣೇಶ ಮೂರ್ತಿ ತಯಾರಿಕೆಗೆ ಜಾಗ ಮತ್ತು ಮಣ್ಣಿನ ಸಮಸ್ಯೆ ಎದುರಿದೆ ಎನ್ನುತ್ತಾರೆ ಮೂರ್ತಿ ತಯಾರಕರು

ಕನ್ನಡಪ್ರಭ ವಾರ್ತೆ ಕೋಲಾರಗಣೇಶ ಹಬ್ಬ ಹತ್ತಿರ ಬರುತ್ತಿದ್ದಂತೆ ಕೋಲಾರದಲ್ಲಿ ವಿವಿಧ ರೀತಿಯ ಗಣಪತಿ ಮೂರ್ತಿಗಳು ತಯಾರಾಗುತ್ತವೆ, ಅದರಲ್ಲೂ ನೈಸರ್ಗಿಕವಾಗಿ ಪರಿಸರ ಸ್ನೇಹಿ ಗಣಪತಿಗಳನ್ನು ಕೋಲಾರದಲ್ಲಿನ ಕಲಾವಿದರು ತಯಾರು ಮಾಡುವುದು ವಿಶೇಷ. ಕೋಲಾರ ನಗರದ ಗಾಂಧಿನಗರದಲ್ಲಿ ಭೀಮರಾಜ್ ಕುಟುಂಬ ಗಣೇಶೋತ್ಸವಕ್ಕೆ ಗಣೇಶ ಮೂರ್ತಿಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ. ಭೀಮರಾಜ್ ಕುಟುಂಬವು ಸುಮಾರು ೪೦ ವರ್ಷದಿಂದ ವಿವಿಧ ರೀತಿಯ ಮಣ್ಣಿನ ಗಣಪತಿ ಮೂರ್ತಿಗಳನ್ನು ವಿಭಿನ್ನ ರೀತಿಯಲ್ಲಿ ತಯಾರಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧಡೆಯಿಂದ ಗಣಪತಿ ಮೂರ್ತಿಗಳನ್ನು ತಯಾರು ಮಾಡಲು ಇವರಿಗೆ ಬೇಡಿಕೆಗಳು ಬರುತ್ತವೆ. ಪರಿಸರ ಸ್ನೇಹಿ ಮೂರ್ತಿ ತಯಾರಿಸುಮಾರು ೧೫ ಅಡಿ ಎತ್ತರದ ಪರಿಸರ ಸ್ನೇಹಿ ಗಣಪತಿಗಳನ್ನೂ ತಯಾರಿಸುತ್ತಾರೆ. ಕಳೆದ ವರ್ಷ ಪುನೀತ್ ರಾಜ್‌ಕುಮಾರ್ ಇರುವ ಗಣಪತಿ ಮೂರ್ತಿಯನ್ನು ಮಾಡಿ ರಾಘವೇಂದ್ರ ರಾಜಕುಮಾರ್ ಅವರ ಮನೆಗೂ ಕಳುಹಿಸಿಕೊಟ್ಟಿದ್ದೇವು, ಕಲಿತಿರುವ ಕಲೆ ಬಿಡಬಾರದು ಎಂದು ಹಬ್ಬದ ಸಮಯದಲ್ಲಿ ಮಾತ್ರ ನಮ್ಮ ಕುಟುಂಬದವರೇ ಮೂರ್ತಿ ತಯಾರು ಮಾಡುತ್ತೇವೆ. ಬೇರೆ ಸಮಯದಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತೇವೆ. ಜಾಗದ ಸಮಸ್ಯೆಯಿಂದ ಮನೆಯ ಪಕ್ಕದಲ್ಲಿರುವ ದೇವಸ್ಥಾನದ ಬಳಿಯೇ ನಮ್ಮ ಕುಟುಂಬದವರೇ ತಯಾರು ಮಾಡುತ್ತಿದ್ದೇವೆ ಎಂದು ಭೀಮರಾಜ್ ವಿವರಿಸಿದರು. ಸಾಕಷ್ಟು ಮಣ್ಣು ಸಿಗುತ್ತಿಲ್ಲ

ಮತ್ತೊಬ್ಬ ಗಣಪತಿ ತಯಾರಕರಾದ ಗೌರಮ್ಮ ಮಾತನಾಡಿ, ಸುಮಾರು ನಾಲ್ಕು ತಲೆಮಾರುಗಳಿಂದ ಗಣಪತಿ ಮೂರ್ತಿಗಳನ್ನು ನಮ್ಮ ಕುಟುಂಬದವರು ತಯಾರಿ ಮಾಡುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಎರಡೂವರೆ ಸಾವಿರ ಗಣಪತಿ ಬೊಂಬೆಗಳನ್ನು ಸಿದ್ಧಪಡಿಸುತ್ತೇವೆ. ಇತ್ತೀಚಿಗೆ ಎಲ್ಲಾ ಕೆರೆಗಳಲ್ಲೂ ನೀರು ತುಂಬಿರುವ ಕಾರಣ ಮೂರ್ತಿ ತಯಾರಿಕೆಗೆ ಮಣ್ಣೇ ಸಿಗುತ್ತಿಲ್ಲ. ಅಲ್ಲದೆ ಎಲ್ಲಾ ಕೆರೆಗಳಲ್ಲಿನ ಮಣ್ಣಿನಿಂದ ಗಣಪತಿ ತಯಾರು ಮಾಡಲು ಆಗಲ್ಲ ಎಂದರು.

ಸಂಕ್ರಾಂತಿ ಹಬ್ಬ ಮುಗಿದ ನಂತರ ಬೆಂಗಳೂರಿನ ಅಗರ ಕೆರೆಯಿಂದ ಒಂದು ಲೋಡಿಗೆ ೧೫ ಸಾವಿರ ರುಪಾಯಿ ಕೊಟ್ಟು ೫ ಲೋಡ್ ಮಣ್ಣು ತರಿಸುತ್ತೇವೆ. ಒಂದು ಲೋಡಿನ ಮಣ್ಣಿನಲ್ಲಿ ೫೦೦ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ತಯಾರು ಮಾಡಬಹುದು. ಹಬ್ಬ ಹತ್ತಿರ ಬರುತ್ತಿದ್ದಂತೆ ಮೂರ್ತಿಗಳಿಗೆ ಪೇಟಿಂಗ್ ಕೆಲಸ ಶುರು ಮಾಡುತ್ತೇವೆ. ಸುಮಾರು ೮ ಜನ ನಿರಂತರವಾಗಿ ಗಣಪತಿ ಮೂರ್ತಿ ತಯಾರಿಕೆಯ ಕೆಲಸದಲ್ಲಿ ತೊಡಗಿರುತ್ತೇವೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''