ಕನ್ನಡಪ್ರಭ ವಾರ್ತೆ ಮಂಡ್ಯ
೨೦೧೩ರಲ್ಲಿ ಜೆಡಿಎಸ್ ಪಕ್ಷದ ಸದಸ್ಯರಾಗಿ ೧೧ನೇ ವಾರ್ಡ್‌ನಿಂದ ಗೆಲುವು ಸಾಧಿಸಿ ಅಧ್ಯಕ್ಷ ಗದ್ದುಗೆಯನ್ನೂ ಏರಿದ್ದರು. ಒಪ್ಪಂದದಂತೆ ರಾಜೀನಾಮೆ ನೀಡುವಂತೆ ವರಿಷ್ಠರು ಸೂಚಿಸಿದಾಗ ಅದನ್ನು ಧಿಕ್ಕರಿಸಿದ್ದರು. ಸ್ವತಃ ಎಚ್.ಡಿ.ಕುಮಾರಸ್ವಾಮಿ ಹೇಳಿದರೂ ರಾಜೀನಾಮೆ ನೀಡಲು ನಿರಾಕರಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದರು. ಅಂದು ಅರುಣ್‌ಕುಮಾರ್ ವಿರುದ್ಧ ಬಹಿರಂಗವಾಗಿಯೇ ಕುಮಾರಸ್ವಾಮಿ ಕಿಡಿಕಾರಿದ್ದರು. ೨೦೧೮ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಎಂ.ಪಿ.ಅರುಣ್‌ಕುಮಾರ್ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದರು. ಅಂದು ನಗರ ಘಟಕದ ಅಧ್ಯಕ್ಷರಾಗಿದ್ದ ಎಚ್.ಆರ್.ಅರವಿಂದ್ ಅವರು ಪಕ್ಷದ ನಾಯಕರ ಮನವೊಲಿಸಿ ಎಂ.ಪಿ.ಅರುಣ್‌ಕುಮಾರ್ ಪರ ನಿಂತು ಬಿಜೆಪಿ ಟಿಕೆಟ್ ದೊರಕಿಸಿದ್ದರು. ಅಲ್ಲದೆ, ಅರುಣ್ ಪರ ನಿಂತು ಗೆಲುವಿಗೂ ಶ್ರಮಿಸಿದ್ದರು. ಇಂದು ಅದೇ ಅರುಣ್‌ಕುಮಾರ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಇದು ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ. ಯಾರೂ ಮಿತ್ರರಲ್ಲ ಎನ್ನುವುದನ್ನು ಸೂಚಿಸುತ್ತಿತ್ತು.