ಆರ್ಯವೈಶ್ಯ ಸಂಘದ ಪದಾಧಿಕಾರಿಗಳ ಪದಗ್ರಹಣ

KannadaprabhaNewsNetwork |  
Published : Sep 01, 2024, 01:50 AM IST
ಹೊಸಪೇಟೆಯಲ್ಲಿ ಶುಕ್ರವಾರ ಆರ್ಯವೈಶ್ಯ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಂಘದ ನೂತನ ಅಧ್ಯಕ್ಷ ಕಾಕುಬಾಳ ರಾಜೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಎಲ್ಲ ಸಮಾಜ ಹಾಗೂ ನಮ್ಮ ಸಮಾಜದ ಆರ್ಥಿಕ ದುರ್ಬಲರ ಶೈಕ್ಷಣಿಕ ಪ್ರಗತಿಗೆ ಉಚಿತವಾಗಿ ತರಬೇತಿ ನೀಡುವುದು.

ಹೊಸಪೇಟೆ: ಸಮಾಜದ ಎಲ್ಲ ಹಂತದ ಜನರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಸಂಘ ಯೋಜನೆ ರೂಪಿಸಿ ಸಮಾಜವನ್ನು ಸಂಘಟಿಸುವ ಕಾರ್ಯಯೋಜನೆ ರೂಪಿಸುವೆ ಎಂದು ಆರ್ಯವೈಶ್ಯ ಸಂಘದ ನೂತನ ಅಧ್ಯಕ್ಷ ಕಾಕುಬಾಳ ರಾಜೇಂದ್ರ ಹೇಳಿದರು.

ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ನೂತನವಾಗಿ ಆಯ್ಕೆಯಾದ ಆರ್ಯವೈಶ್ಯ ಸಂಘದ ಪದಾಧಿಕಾರಿಗಳ ಪದಗ್ರಹಣದ ಆನಂತರ ನಾಮನಿರ್ದೇಶಿತ ಹಾಗೂ ವಿಶೇಷ ಆಹ್ವಾನಿತರ ಪರಿಚಯಿಸಿ ಮಾತನಾಡಿದ ಅವರು, ಎಲ್ಲ ಸಮಾಜ ಹಾಗೂ ನಮ್ಮ ಸಮಾಜದ ಆರ್ಥಿಕ ದುರ್ಬಲರ ಶೈಕ್ಷಣಿಕ ಪ್ರಗತಿಗೆ ಉಚಿತವಾಗಿ ತರಬೇತಿ ನೀಡುವುದು ಹಾಗೂ ವಾಸವಿ ಅಕಾಡೆಮಿ ಮೂಲಕ ಕೌಶಲ್ಯ ತರಬೇತಿ ನೀಡಲು ಕ್ರಮ ವಹಿಸಲಾಗುವುದು. ದೇವಸ್ಥಾನಕ್ಕೆ ಬರುವ ದಾರಿ ಸರಿಪಡಿಸುವುದು ಹಾಗೂ ವಾಸವಿ ಕಲ್ಯಾಣ ಮಂಟಪದ ನವೀಕರಣ ಸೇರಿದಂತೆ ಸಂಘಟನಾತ್ಮಕವಾಗಿ ಬೆಳೆಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಪದಾಧಿಕಾರಿಗಳು:

ಕಾಕುಬಾಳ ರಾಜೇಂದ್ರ (ಅಧ್ಯಕ್ಷ), ಭೂಪಾಳ ಪ್ರಹ್ಲಾದ್ (ಪ್ರಧಾನ ಕಾರ್ಯದರ್ಶಿ), ಕಾಕುಬಾಳ ಶ್ರೀನಿವಾಸ (ಖಜಾಂಚಿ), ಅರಳಿಹಳ್ಳಿ ಬದ್ರಿನಾಥ, ಜಿ, ಸಂಜೀವ್ ಶೆಟ್ಟಿ, ಪಿ. ಪಾಂಡುರಂಗ ಶೆಟ್ಟಿ (ಉಪಾಧ್ಯಕ್ಷರು), ಜೆ.ಎಸ್. ರಮೇಶ್ ಗುಪ್ತ, ಸತ್ಯನಾರಾಯಣ ಶೆಟ್ಟಿ, ಸೌದ್ರಿ ನರೇಂದ್ರ (ಸಹ ಕಾರ್ಯದರ್ಶಿ), ನಾಗರಾಜ ಶೆಟ್ಟಿ (ಸಹ ಖಜಾಂಚಿ) ಹಾಗೂ ಆಡಳಿ ಮಂಡಳಿಯ ನಿರ್ದೇಶಕರಾಗಿ ನರಸಿಂಹಮೂರ್ತಿ ಬಟ್ಟೆಪಾಟೆ, ಗೌತಮ್‌ ಪತ್ತಿಕೊಂಡ, ಪಿ. ಬದ್ರಿನಾರಾಯಣ, ಪಿ. ಶಿವಶಂಕರ, ಪಿ. ಸಂತೋಷ್, ಎಚ್.ಎಸ್. ಪ್ರಕಾಶ್, ಎಸ್. ಸತೀಶ್ ಗುಪ್ತ, ಜೆ.ಎಸ್. ತಿಪ್ಪೇಸ್ವಾಮಿ ಶೆಟ್ಟಿ, ಪಿ. ಮಂಜುನಾಥ, ಪಿ. ವೆಂಕಟೇಶ್ , ಡಿ. ಬದ್ರಿನಾಥ ಶೆಟ್ಟಿ, ಚಿನ್ನಿ ರಾಂಕುಮಾರ್, ತಲ್ಲಂ ಗಣೇಶ್, ವಿ.ಆರ್. ಪ್ರವೀಣ್, ಮಂಜುನಾಥ ಹಿಟ್ನಾಳ್, ಶ್ರೀನಿವಾಸ ಮಂಚಿಕಟ್ಟಿ, ವೆಂಕಟೇಶ್ ಬಾಬು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಲಿಯಾಕತ್ ಅಲಿ ಘೋಷಿಸಿದರು.

ಹಿರಿಯ ಸದಸ್ಯರಾದ ಭೂಪಾಳ ರಾಘವೇಂದ್ರ ಶೆಟ್ಟಿ ಪ್ರಮಾಣವಚನ ಬೋಧಿಸಿದರು. ಸಮಾಜದ ಹಿರಿಯರು, ಮಾಜಿ ಆಡಳಿತ ಮಂಡಳಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ