ಜನಸೇವೆ ಮಾಡಲು ನಾನು ರಾಜಕಾರಣಕ್ಕೆ ಬಂದಿರುವುದು

KannadaprabhaNewsNetwork | Published : Sep 29, 2024 1:36 AM

ಸಾರಾಂಶ

ದೇಶ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಕೆಲಸ ಮಾಡಲು ನಾನು ಬದ್ದನಾಗಿದ್ದು, ಅದು ಅಸಾಧ್ಯ ಎನಿಸಿದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರನಾನು ರಾಜಕಾರಣಕ್ಕೆ ಬಂದಿರುವುದು ರಾಜಕೀಯ ಮಾಡುವುದಕ್ಕಲ್ಲ ಬದಲಾಗಿ ಜನಸೇವೆ ಮಾಡಬೇಕೆಂಬ ಉದ್ದೇಶದಿಂದ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಸಿ.ಎನ್. ಮಂಜುನಾಥ್ ಹೇಳಿದರು.ಪಟ್ಟಣದ ಪಿಎಲ್.ಡಿ ಸಮುದಾಯ ಭವನದಲ್ಲಿ ನಿವೃತ್ತ ಉಪನ್ಯಾಸಕ ದಿವಂಗತ ಕೆ.ಆರ್. ಲಕ್ಕೇಗೌಡ ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ನಡೆದ ಅವರ ಜೀವನ ಕಥನದ ವನಸುಮ ಎರಡನೇ ಆವೃತ್ತಿ ಬಿಡುಗಡೆ ಮತ್ತು ತಮಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಸದನಾಗಿದ್ದರು ನನ್ನ ಮೊದಲ ಆಧ್ಯತೆ ವೈದ್ಯ ವೃತ್ತಿಗೆ ನೀಡಲಿದ್ದು, ವಾರದಲ್ಲಿ ಎರಡು ದಿನ ಉಚಿತ ಸೇವೆ ಮಾಡುತ್ತಿದ್ದು, ಆ ಮೂಲಕ ದೇಶ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಕೆಲಸ ಮಾಡಲು ನಾನು ಬದ್ದನಾಗಿದ್ದು, ಅದು ಅಸಾಧ್ಯ ಎನಿಸಿದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುವುದು ಪ್ರಮುಖವಲ್ಲ ಅದರೊಂದಿಗೆ ಮನುಷ್ಯತ್ವ ಇರುವವರು ಹೆಚ್ಚಿಗೆ ಇರಬೇಕಿದ್ದು, ಕೆಲವರು ಜೀವಂತವಾಗಿದ್ದರು ಸತ್ತಂತೆ ಇರುತ್ತಾರೆ, ಆದರೆ ಕೆ.ಆರ್. ಲಕ್ಕೇಗೌಡರು ಸತ್ತಿದ್ದರೂ ನಮ್ಮ ನಡುವೆ ಬದುಕಿದ್ದಾರೆ ಎಂದರು.ಆದರ್ಶ ಶಿಕ್ಷಕರಾಗಿ, ಉತ್ತಮ ಪುರಸಭೆಯ ಸದಸ್ಯರಾಗಿ ಅದರ ಜತೆಗೆ ಸಮಾಜಮುಖಿಯಾಗಿದ್ದ ಅವರು ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದು, ಇಂತಹವರು ಸಾಧಕರು ಮತ್ತು ಸಮಾಜ ಸೇವಕರಿಗೆ ಮಾದರಿ ಎಂದರು.ಬೇರೆಯವರಿಗೆ ಸಹಾಯ ಮಾಡಿ ಸಂಕಷ್ಟದಲ್ಲಿರುವವರಿಗೆ ಹೆಗಲು ಕೊಡುವುದು ನಿಜವಾದ ಮನುಷ್ಯತ್ವ, ಅಂತಹ ಮಾನವೀಯತೆ ಬೆಳೆಸಿಕೊಂಡಿದ್ದ ಕೆ.ಆರ್. ಲಕ್ಕೇಗೌಡರು ನಮ್ಮ ನಡುವೆ ಇದ್ದ ಆದರ್ಶ ಪುರುಷ ಎಂದು ಪ್ರಶಂಸಿದರು.ಕೆ.ಆರ್. ಲಕ್ಕೇಗೌಡ ಅವರ ಸಂಸ್ಕಾರ ಅವರ ಕುಟುಂಬದವರಿಗೂ ಬಂದಿದ್ದು, ಇದು ಅನುಕರಣೀಯವಾಗಿದ್ದು, ಅವರು ಸಮಾಜದ ವೈದ್ಯರಾಗಿದ್ದರಲ್ಲದೆ ನೊಂದವರ ದನಿಯಾಗಿ ಬದುಕಿಗೆ ಆಸರೆಯಾಗಿದ್ದರೆ ಎಂದು ಅವರು ಬಣ್ಣಿಸಿದರು.ಸಮಾಜಮುಖಿ ಚಿಂತನೆ ಮತ್ತು ಪರೋಪಕಾರಿ ವ್ಯಕ್ತಿತ್ವ ಬೆಳೆಸಿಕೊಂಡವರು ಶಾಶ್ವತವಾಗಿ ಜೀವಿಸಲಿದ್ದು, ಅಂತಹವರ ಸಾಲಿಗೆ ಸೇರಿರುವ ಕೆ.ಆರ್. ಲಕ್ಕೇಗೌಡರು ಮಾನವೀಯತೆಯ ಪ್ರತೀಕ ಎಂದು ಪ್ರಶಂಸಿಸಿದ ಸಂಸದರು, ದೇಶದ ಜನಸಂಖ್ಯೆ ಮುಖ್ಯವಲ್ಲ ಮನುಷ್ಯತ್ವ ಇರುವವರ ಸಂಖ್ಯೆ ಪ್ರಮುಖ ಎಂದು ತಿಳಿಸಿದರು.ಕೆ.ಆರ್. ಲಕ್ಕೇಗೌಡರ ಯಶೋಗಾಥೆಯ ವನಸುಮ ಪುಸ್ತಕದ ಎರಡನೇ ಸಂಚಿಕೆಯನ್ನು ಬಿಡುಗಡೆ ಮಾಡಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ನಾಗರೀಕ ಸನ್ಮಾನ ಮಾಡಲಾಯಿತು.ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯಕ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಜಿಪಂ ಮಾಜಿ ಸದಸ್ಯರಾದ ಅಮಿತ್ ವಿ. ದೇವರಹಟ್ಟಿ, ಸಾ.ರಾ. ನಂದೀಶ್, ಎಂ.ಟಿ. ಕುಮಾರ್, ಪುರಸಭೆ ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಉಮೇಶ್, ಮಾಜಿ ಸದಸ್ಯ ಉಮಾಶಂಕರ್, ಲೇಖಕ ಡಾ. ದೀಪು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಜಿಲ್ಲಾ ಗ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಣ್ಣ, ಹುಣಸೂರು ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ಶ್ರೀರಂಗಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಸಂಜಯ್ ರಾಮೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಬಂಡಹಳ್ಳಿ ಕುಚೇಲ, ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ಸಾಮರಸ್ಯ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಪುರುಷೋತ್ತಮ್, ಕೆ.ಆರ್. ಲಕ್ಕೇಗೌಡರ ಪತ್ನಿ ಜಯಲಕ್ಷ್ಮಮ್ಮ, ಪುತ್ರರಾದ ಕೆ.ಎಲ್. ರಮೇಶ್, ಕೆ.ಎಲ್. ಜಗದೀಶ್, ಕೆ.ಎಲ್. ಹೇಮಂತ್, ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಎಚ್.ಡಿ. ಪ್ರಭಾಕರ ಜೈನ್, ಮುಖಂಡರಾದ. ಪುಟ್ಟರಾಜು, ಎಸ್.ಪಿ. ತಮ್ಮಯ್ಯ, ಗಣೇಶ್, ಎಚ್.ಆರ್. ಮಧುಚಂದ್ರ, ದಾಕ್ಷಾಯಿಣಿ. ರಾಜಲಕ್ಷ್ಮೀ, ಭಾಗ್ಯಮ್ಮ ಇದ್ದರು.

Share this article