ಕನ್ನಡಪ್ರಭ ವಾರ್ತೆ ಬೆಂಗಳೂರು
‘ನಾವು ಯಾರ ಹಾರವನ್ನೂ ಕೇಳುತ್ತಿಲ್ಲ. ದುಡಿತಕ್ಕೆ ತಕ್ಕ ಪ್ರತಿಫಲ ಕೇಳುತ್ತಿದ್ದೇವೆ. ಹಾರ ಕೊಡಲು ಅವರೇನು ರಾಜರಲ್ಲ’ ಎಂದು ಆಶಾ ಕಾರ್ಯಕರ್ತೆಯರು, ಗಣ್ಯರು ತಿರುಗೇಟು ನೀಡಿದ್ದಾರೆ. ಮಾಸಿಕ ಗೌರವ ಧನವನ್ನು ₹15,000ಕ್ಕೆ ಹೆಚ್ಚಿಸಬೇಕು ಎಂಬುದೂ ಸೇರಿ ಬೇಡಿಕೆಗಳು ಈಡೇರುವವರೆಗೂ 90 ದಿನವಾದರೂ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಸಂವಿಧಾನ ದಿನಾಚರಣೆ ಕುರಿತು ಮೈಸೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲೇ ಸಚಿವ ನರೇಂದ್ರಸ್ವಾಮಿ ಅವರು ಇಂಥ ಮಾತುಗಳನ್ನಾಡಿರುವುದು ವಿಪರ್ಯಾಸ. ನಾವು ಯಾವ ಹಾರವನ್ನೂ ಕೇಳುತ್ತಿಲ್ಲ. ದುಡಿತಕ್ಕೆ ತಕ್ಕ ಪ್ರತಿಫಲ ಕೇಳುತ್ತಿದ್ದೇವೆ. ಹೆಣ್ಣುಮಕ್ಕಳನ್ನು ಅವಮಾನಿಸುವುದು ಅತ್ಯಂತ ಕೀಳು ಅಭಿರುಚಿಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೊರೋನಾದಲ್ಲಿ ಕಾಪಾಡಿದಿರಿ:
ಕಲಾವಿದರಾದ ಮಾಳವಿಕಾ ಅವಿನಾಶ್, ಅವಿನಾಶ್, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಯಶವಂತ್, ಸಿಐಟಿಯು ರಾಜ್ಯ ಕಾರ್ಯದರ್ಶಿ ವರಲಕ್ಷ್ಮಿ, ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಮನಮೋಹನ್, ನಿವೃತ್ತ ಉಪನ್ಯಾಸಕ ಪ್ರೊ.ಚಂದ್ರಶೇಖರ್ ತಾಳ್ಯ, ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್ ಮತ್ತಿತರರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.
ಹಾರ ಕೊಡಲು ನೀವೇನೂ
ಆಶಾ ಕಾರ್ಯಕರ್ತೆಯರಿಗೆ ಕಂಠೀಹಾರ ಕೊಡಲು ನೀವೇನೂ ರಾಜರಲ್ಲ. ನಿಮ್ಮನ್ನು ಅಧಿಕಾರಕ್ಕೆ ತರುವವರು ಜನರು ಎಂದು ಸಚಿವ ನರೇಂದ್ರ ಸ್ವಾಮಿ ಅವರನ್ನು ನಟಿ ತಾರಾ ತರಾಟೆಗೆ ತೆಗೆದುಕೊಂಡರು.
----
ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ದುಡಿಯುವ ಹೆಣ್ಣು ಮಕ್ಕಳನ್ನು ಇಂತಹ ಸ್ಥಿತಿಗೆ ದೂಡಿರುವುದು ಪ್ರಜಾಪ್ರಭುತ್ವಕ್ಕೆ ನಾಚಿಕೆ ತರುವಂತಹ ವಿಚಾರ. ಇದು ಅತ್ಯಂತ ಹೃದಯಹೀನ ಅನಾಗರಿಕ ಲಕ್ಷಣವಾಗಿದೆ.
===
ಸರ್ಕಾರ ತಪ್ಪು ಮಾಡುತ್ತಿದೆ. 9 ದಿನಗಳವರೆಗೂ ಹೋರಾಟ ಮುಂದುವರೆಸುವ ಪರಿಸ್ಥಿತಿ ಸೃಷ್ಟಿ ಮಾಡಿದೆ. ಮುಖ್ಯಮಂತ್ರಿಗಳು ನಿಮ್ಮನ್ನು ಸೋದರಿ ಎನ್ನುವುದು ಕೇವಲ ಬಾಯಿ ಮಾತಿಗೆ ಎನ್ನುವಂತಿದೆ.-ಜಾಣಗೆರೆ ವೆಂಕಟರಾಮಯ್ಯ, ಪತ್ರಕರ್ತ.
==ನೀವು ಎಲ್ಲ ಕಷ್ಟವನ್ನೂ ದಿಟ್ಟವಾಗಿ ಎದುರಿಸಿದ್ದೀರಿ. ಸರ್ಕಾರ ಹೋರಾಟವನ್ನು ಬುದ್ಧಿಯಿಂದ ನೋಡುವ ಬದಲು ಹೃದಯದಿಂದ ನೋಡಬೇಕು. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ.
-ಡಾ। ವಸುಂಧರಾ ಭೂಪತಿ, ಸಾಹಿತಿ.