ಮುಂಡರಗಿ: ಇಲ್ಲಿನ ತೋಂಟದಾರ್ಯ ಮಠದಲ್ಲಿ ಪ್ರತಿವರ್ಷದಂತೆ ಆಷಾಢ ಮಾಸದ ಪ್ರವಚನ ನಡೆಯಲಿದೆ. ಜು. 26ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಎಡೆಯೂರು ತೋಂಟದ ಸಿದ್ದಲಿಂಗೇಶ್ವರರ ಚರಿತಾಮೃತ ಪ್ರವಚನ ಜರುಗಲಿದೆ ಎಂದು ಪ್ರವಚನ ಸಮಿತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ ತಿಳಿಸಿದರು.
ಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾ, ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಐ.ಎಸ್. ಪೂಜಾರ ಆಗಮಿಸಲಿದ್ದಾರೆ.
ಶ್ರೀಮಠದ ಹಿರಿಯರಾದ ಕೊಟ್ರೇಶ ಅಂಗಡಿ ಮತನಾಡಿ, ಜು. 29ರಂದು ರಾತ್ರಿ 8 ಗಂಟೆಗೆ ಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ, ಆ. 2ರಂದು ಸಂಜೆ 7 ಗಂಟೆಗೆ ಪಂ. ಎಂ. ವೆಂಕಟೇಶ ಕುಮಾರ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದೆ. ಆ. 6ರಂದು ರಾತ್ರಿ 8 ಗಂಟೆಗೆ ಅಕ್ಕ ಅಂಗಾರ ತಂಗಿ ಬಂಗಾರ ಹಾಸ್ಯ ಪ್ರಧಾನವಾದ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.ಪ್ರವಚನ ಸಮಿತಿ ಕಾರ್ಯದರ್ಶಿ ಶರಣಪ್ಪ ಕುಬಸದ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಸಯ್ಯ ಗಿಂಡಿಮಠ, ಖಜಾಂಚಿ ಶಿವಕುಮಾರ ಬೆಟಗೇರಿ, ವೇದಿಕೆ ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಹಿರಿಯರಾದ ಈಶಣ್ಣ ಬೆಟಗೇರಿ, ಪಾಲಾಕ್ಷಿ ಗಣದಿನ್ನಿ, ಎಚ್. ವಿರುಪಾಕ್ಷಗೌಡ, ದೇವಪ್ಪ ರಾಮೇನಹಳ್ಳಿ, ಗಿರೀಶಗೌಡ ಪಾಟೀಲ, ಶಿವಯೋಗಿ ಕೊಪ್ಪಳ, ಅಶೋಕ ಅಣ್ಣೀಗೇರಿ, ಪವನ್ ಚೋಪ್ರಾ, ಸುರೇಶ ನಾಯಕ, ಪರಮೇಶ್ವರಪ್ಪ ಕಣಗಿನಹಾಳ, ಡಿ.ಜಿ. ಪೂಜಾರ, ಸದಾಶಿವಯ್ಯ ಕಬ್ಬೂರಮಠ ಉಪಸ್ಥಿತರಿದ್ದರು.