ಯುವ ಯೋಗ ಸಾಧಕಿ ಸಿಂಚನಾಗೆ ಏಷ್ಯಾ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Sep 04, 2026, 03:15 AM IST
ಚಿತ್ರ : 2ಎಂಡಿಕೆ4 : ಯುವಯೋಗಸಾಧಕಿ ಸಿಂಚನಾಳಿಗೆ ಏಷ್ಯಾ, ಇಂಡಿಯಾ ಬುಕ್ ಆಫ್ ರೆಕಾಡ್೯ ಪ್ರಶಸ್ತಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ಮದೆನಾಡಿನ ಯುವ ಯೋಗಸಾಧಕಿ ಸಿಂಚನಾಗೆ ಯೋಗ ಕ್ಷೇತ್ರದಲ್ಲಿ ಲಭಿಸಿರುವ ಏಷ್ಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆಯನ್ನು ನಗರದ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.

ಮಡಿಕೇರಿ : ಮದೆನಾಡಿನ ಯುವ ಯೋಗಸಾಧಕಿ ಸಿಂಚನಾಗೆ ಯೋಗ ಕ್ಷೇತ್ರದಲ್ಲಿ ಲಭಿಸಿರುವ ಏಷ್ಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆಯನ್ನು ನಗರದ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ನಗರದ ರೋಟರಿ ಸ ಆಯೋಜಿತ ಕಾರ್ಯಕ್ರಮದಲ್ಲಿ ಮದೆನಾಡಿನ ಬಿಜಿಎಸ್ ಶಾಲೆಯ 7 ನೇ ತರಗತಿ ವಿದ್ಯಾಥಿ೯ನಿ ಸಿಂಚನಾಳಿಗೆ ದೊರೆತ ಪ್ರತಿಷ್ಟಿತ ಪ್ರಶಸ್ತಿಗಳನ್ನು ಗಣ್ಯರು ಹಸ್ತಾಂತರಿಸಿದರು. ಕಳೆದ 3 ತಿಂಗಳಿನಲ್ಲಿ ತನ್ನ ಯೋಗಾಸನಕ್ಕಾಗಿ ಮದೆನಾಡಿನ ವಿದ್ಯಾಥಿ೯ನಿ ಸಿಂಚನಾಳಿಗೆ ಏಷ್ಯಾ ಬುಕ್ ಆಫ್ ರೆಕಾಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾಡ್ಸ್೯ ಪ್ರಶಸ್ತಿಗಳು ಲಭಿಸಿದ್ದವು. ಈ ಪ್ರಶಸ್ತಿಗಳನ್ನ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಸಿಂಚನಾಳಿಗೆ ಪ್ರದಾನ ಮಾಡಲಾಯಿತು.ಉದ್ಘಾಟಿಸಿ ಮಾತನಾಡಿದ ಯೋಗಭ್ಯಾಸಿ , ವಕೀಲ ಜಿ.ಆರ್.ರವಿಶಂಕರ್, ನಮ್ಮ ಶರೀರ, ಮನಸ್ಸು ಮತ್ತು ಆತ್ಮವನ್ನು ಒಂದೇ ಸೂತ್ರದಲ್ಲಿ ತರುವುದೇ ಯೋಗದ ಉದ್ದೇಶವಾಗಿದೆ ಎಂದರು.ಮಡಿಕೇರಿಯ ಯೋಗಗುರು ಕೆ.ಕೆ.ಮಹೇಶ್ ಕುಮಾರ್ ಮಾತನಾಡಿ, ಸಿಂಚನಾಳ ಸಾಧನೆ ಶ್ಲಾಘನೀಯವಾಗಿದ್ದು, ಈಕೆಯ ಯೋಗಸಿದ್ದಿ ಜಿಲ್ಲೆಯಲ್ಲಿಯೇ ಗಮನಾರ್ಹ ಎಂದರು.

ಸಿಂಚನಾಳ ತಾಯಿ ರೇಣುಕಾ ಕೀತಿ೯ ಮಾತನಾಡಿ, ಪ್ರತೀ ನಿತ್ಯ 1 ಗಂಟೆ ಯೋಗಾಭ್ಯಾಸ ಮಾಡುತ್ತಾ ಬಂದಿರುವ ಸಿಂಚನಾ, ಈ ಮೂಲಕ ಯೋಗವನ್ನು ಕಠಿಣ ರೀತಿಯ ಪರಿಶ್ರಮದಿಂದಲೂ ಒಲಿಸಿಕೊಂಡಿದ್ದಾಳೆ ಎಂದರು.

ಯೋಗಪಟು ಸಿಂಚನಾ ಮಾತನಾಡಿ, ಸೆ.25 ರಂದು ದೇವರಕೊಲ್ಲಿಯ ಶ್ರೀಚಾಮುಂಡೇಶ್ವರಿ ದೇವಾಲಯಯದಲ್ಲಿ ಮತ್ತೆ 3 ವಿಶ್ವದಾಖಲೆಯ ಯೋಗ ಪ್ರದಶ೯ನಕ್ಕೆ ಸಿದ್ದಳಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಮಾತನಾಡಿದರು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ಚೇತನ್ ಜಿ.ಡಿ. ವಂದಿಸಿದರು, ಮಿಸ್ಟಿ ಹಿಲ್ಸ್ ನಿರ್ದೇಶಕ ಪ್ರಸಾದ್ ಗೌಡ ನಿರ್ವಹಿಸಿದರು. ಸಿಂಚನಾಳ ತಂದೆ ಕೀರ್ತಕುಮಾರ್, ರೋಟರಿ ಜಿಲ್ಲೆಯ ಮಾಜಿ ಸಹಾಯಕ ಗವರ್ನರ್ ಗಳಾದ ಅನಿಲ್ ಹೆಚ್.ಟಿ, ದೇವಣಿರ ತಿಲಕ್, ಬಿ.ಕೆ. ರವೀಂದ್ರ ರೈ, ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಯಶೋಧರ್, ಮದೆಕೖಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಪಿ.ಧನಂಜಯ್, ಸಾಹಿತಿ ಬಿ.ಆರ್. ಜೋಯಪ್ಪ, ನಿವೃತ್ತ ಶಿಕ್ಷಕ ಎಂ.ಎಸ್. ಶಿವರಾಮ್ ಹಾಜರಿದ್ದು ಪ್ರಶಸ್ತಿ ಪ್ರಧಾನ ಮಾಡಿದರು. ಸಿಂಚನಾಳಿಂದ ಆಕರ್ಷಕ ಯೋಗ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕೃಷ್ಣಾರತಿಗೆ ರೈತರಿಂದ ಸಕಲ ಸಿದ್ಧತೆ
ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಇಂದು ಮನವಿ