ಸಂವಿಧಾನದ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ತಹಸೀಲ್ದಾರ್‌

KannadaprabhaNewsNetwork |  
Published : Feb 01, 2024, 02:01 AM IST
ಚಿತ್ತಾಪುರ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥದ ರಥಕ್ಕೆ ಅದ್ದೂರಿಯಾಗಿ ಸ್ವಾಗತವನ್ನು ಕೊರಿ ಪಟ್ಟಣದಲ್ಲಿ ಮೆರವಣೆಗೆ ನಂತರ ಅಂಬೇಡ್ಕರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತಹಸೀಲ್ದಾರ ಸೈಯದ ಷಾಷಾವಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವದಲ್ಲಿಯೇ ಅತೀ ದೊಡ್ಡ ಮತ್ತು ಅತ್ಯುತ್ತಮ ಗ್ರಂಥವಾಗಿರುವ ನಮ್ಮ ದೇಶದ ಸಂವಿಧಾನವು ಜಾರಿಗೆ ಬಂದು ೭೫ ವರ್ಷವನ್ನು ಪೂರೈಸಿದ್ದು ಇದರ ಮಹತ್ವವನ್ನು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಲು ಉದ್ದೇಶದಿಂದ ಸರ್ಕಾರವು ಹಮ್ಮಿಕೊಂಡಿರುವ ಜಾಥದ ರಥವು ತಾಲೂಕಿನಲ್ಲಿ ಸಾಗುತ್ತಿದ್ದು ಇದರ ಮಹತ್ವವನ್ನು ಅರಿತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಭಾರತ ದೇಶದ ಸಂವಿಧಾನವು ಪ್ರತಿಯೊಬ್ಬ ಪ್ರಜೆಯ ಏಕತೆಗೆ, ಭದ್ರತೆಗೆ, ಒಗ್ಗಟ್ಟಿಗೆ ಧಕ್ಕೆ ಬಾರದಂತೆ ಸರ್ವರಿಗೂ ಸಮಾನವಾದ ಹಕ್ಕನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದ್ದು ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ ಸೈಯದ ಷಾಷಾವಲ್ಲಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಜಾಗೃತಿ ಜಾಥಾದ ಮೆರವಣೆಗೆ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವದಲ್ಲಿಯೇ ಅತೀ ದೊಡ್ಡ ಮತ್ತು ಅತ್ಯುತ್ತಮ ಗ್ರಂಥವಾಗಿರುವ ನಮ್ಮ ದೇಶದ ಸಂವಿಧಾನವು ಜಾರಿಗೆ ಬಂದು ೭೫ ವರ್ಷವನ್ನು ಪೂರೈಸಿದ್ದು ಇದರ ಮಹತ್ವವನ್ನು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಲು ಉದ್ದೇಶದಿಂದ ಸರ್ಕಾರವು ಹಮ್ಮಿಕೊಂಡಿರುವ ಜಾಥದ ರಥವು ನಮ್ಮ ತಾಲೂಕಿನಲ್ಲಿ ಸಾಗುತ್ತಿದ್ದು ಇದರ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನುರ ಮಾತನಾಡಿ ಸರ್ಕಾರವು ಶಾಲೆಗಳಲ್ಲಿ ಸಂವಿಧಾನ ಪೀಠೀಕೆಯನ್ನು ಓದಿಸಬೇಕು ಎಂದು ಆದೇಶ ನೀಡಿದ ಆದರೆ ನಮ್ಮ ತಾಲೂಕಿನಲ್ಲಿ ಎಲ್ಲಾ ಶಾಲೆಗಳಲ್ಲೂ ಕಳೆದ ಮೂರು ವರ್ಷಗಳಿಂದ ಸಂವಿಧಾನ ಕುರಿತು ಮಕ್ಕಳಿಗೆ ಜಾಗೃತಿ ಹಾಗೂ ಸಂವಿಧಾನ ಪೀಠಿಕೆಯನ್ನು ಶಾಲೆಗಳಲ್ಲಿ ಓದಿಸುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಸಂವಿಧಾನ ಮಹತ್ವದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಹಾಗೂ ಶಾಲೆಗಳಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ರಂಗೊಲಿ ಸ್ಪರ್ಧೆ, ಪ್ರಭಂದ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಸನ್ಮಾನಿಸಲಾಯಿತು.

ಜಾಥದಲ್ಲಿ ಡಾ. ಬಿ.ಅರ್. ಅಂಬೇಡ್ಕರ್ ರವರ ವೇಷಧಾರಿಯಾಗಿ ಭಾಗವಹಿಸಿದ್ದ ಪಟ್ಟಣದ ಅಮನ್ ಸಚ್ಚಿನ್ ಕಾಶಿ ಗಮನ ಸೆಳೆದರು.

ತಾಲೂಕು ಅಧಿಕಾರಿಗಳಾದ ನೀಲಗಂಗಾ ಬಬಲಾದ, ಮನೊಜಕುಮಾರ ಗುರಿಕಾರ, ಮಲ್ಲಣ್ಣ ದೇಸಾಯಿ, ಚೇತನ ಗುರಿಕಾರ, ಪಿಎಸ್‌ಐ ಚಂದ್ರಾಮಪ್ಪ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಶರಣಪ್ಪ ನಾಟೀಕಾರ, ಆನಂದ ಕಲ್ಲಕ್ಕ, ರಾಜಣ್ಣ ಕರದಾಳ, ಜಗದೀಶ ಚವ್ವಾಣ, ಪಂಡಿತ್ ಶಿಂಧೆ, ಫಕ್ರೂದ್ದಿನ್, ಜಗನಾಥ ಮುಡಬೂಳಕರ್, ಮಲ್ಲಿಕಾರ್ಜುನ ಬೆಣ್ಣೂಕರ್, ನಾಗೇಂದ್ರ ಬುರ್ಲಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ