ಇಂದು ವಿಶೇಷಚೇತನರಿಗಾಗಿ ಸಹಾಯಕ ಅಗತ್ಯ ಸಾಧನಗಳ ಮೌಲ್ಯಮಾಪನ ಶಿಬಿರ

KannadaprabhaNewsNetwork |  
Published : Sep 25, 2026, 01:30 AM IST
24ಕೆಡಿವಿಜಿ3-ದಾವಣಗೆರೆಯಲ್ಲಿ ಗುರುವಾರ ಅಂಗವಿಕಲರ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಪೋಪಟಲಾಲ್ ಜೈನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಡ್ಡಿನಹಳ್ಳಿಯ ಕಾಂಪೋಸಿಟ್ ರೀಜನಲ್ ಸೆಂಟರ್, ಪ್ರಧಾನ ಮಂತ್ರಿ ದಿವ್ಯಾಂಗಜನ್- ವ್ಯೋಶ್ರಿ ಕೇಂದ್ರ (ಪಿಎಂಡಿವಿಕೆ), ಎಎಲ್‌ಐಎಂಸಿಒದಿಂದ ನಗರದ ಎಸ್‌.ಎಸ್‌. ಬಡಾವಣೆ ಎ ಬ್ಲಾಕ್‌ನ ಲಕ್ಷ್ಮೀ ಫ್ಲೋರ್ ಮಿಲ್ ಹಿಂಭಾಗದ ಅಂಗವಿಕಲರ ಆಶಾಕಿರಣ ಟ್ರಸ್ಟ್‌ ಭಾವೈಕ್ಯತಾ ವಿಶೇಷ ವಸತಿಯುತ ಶಾಲೆಯಲ್ಲಿ ಸೆ.25ರಂದು ಸಹಾಯಕ ಅಗತ್ಯ ಸಾಧನಗಳ ಮೌಲ್ಯಮಾಪನ ಶಿಬಿರ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಪೋಪಟಲಾಲ್‌ ಜೈನ್ ತಿಳಿಸಿದ್ದಾರೆ.

- ತಿಂಗಳಲ್ಲೇ ಸಲಕರಣೆ ವಿತರಣೆಗೆ ಸಿಆರ್‌ಸಿ ಕೇಂದ್ರ ಕ್ರಮ: ಪೋಪಟಲಾಲ್‌ ಜೈನ್ ಮಾಹಿತಿ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಡ್ಡಿನಹಳ್ಳಿಯ ಕಾಂಪೋಸಿಟ್ ರೀಜನಲ್ ಸೆಂಟರ್, ಪ್ರಧಾನ ಮಂತ್ರಿ ದಿವ್ಯಾಂಗಜನ್- ವ್ಯೋಶ್ರಿ ಕೇಂದ್ರ (ಪಿಎಂಡಿವಿಕೆ), ಎಎಲ್‌ಐಎಂಸಿಒದಿಂದ ನಗರದ ಎಸ್‌.ಎಸ್‌. ಬಡಾವಣೆ ಎ ಬ್ಲಾಕ್‌ನ ಲಕ್ಷ್ಮೀ ಫ್ಲೋರ್ ಮಿಲ್ ಹಿಂಭಾಗದ ಅಂಗವಿಕಲರ ಆಶಾಕಿರಣ ಟ್ರಸ್ಟ್‌ ಭಾವೈಕ್ಯತಾ ವಿಶೇಷ ವಸತಿಯುತ ಶಾಲೆಯಲ್ಲಿ ಸೆ.25ರಂದು ಸಹಾಯಕ ಅಗತ್ಯ ಸಾಧನಗಳ ಮೌಲ್ಯಮಾಪನ ಶಿಬಿರ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಪೋಪಟಲಾಲ್‌ ಜೈನ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ರಿಂದ ಸಂಜೆ 4.30 ಗಂಟೆವರೆಗೆ ನಡೆಯುವ ಶಿಬಿರದಲ್ಲಿ ಪಾಲ್ಗೊಳ್ಳುವ ವಿಶೇಷ ಚೇತನರು, ದೃಷ್ಟಿಹೀನರಿಗೆ ಯಾವೆಲ್ಲಾ ಅಗತ್ಯ ಸಾಧನಾ ಸಲಕರಣೆಗಳು ಬೇಕಾಗುತ್ತವೆಂದು ಗುರುತಿಸಲಾಗುವುದು. ಅಂತಹವರಿಗೆ ಮುಂದಿನ ದಿನಗಳಲ್ಲಿ ವಡ್ಡಿನಹಳ್ಳಿ ಸಿಆರ್‌ಸಿ ಕೇಂದ್ರದಲ್ಲಿ ಅವುಗಳನ್ನು ವಿತರಿಸಲಾಗುವುದು ಎಂದರು.

ಸಿಆರ್‌ಸಿ ಕೇಂದ್ರದ ಪ್ರಭಾರ ನಿರ್ದೇಶಕ ಕೆ.ಮಾರುತಿ ಕೃಷ್ಣಗೌಡ, ಸಹಾಯಕ ಪ್ರಾಧ್ಯಾಪಕ ಥಾಮರೈ ಸೆಲ್ವನ್, ಆದರ್ಶ ಸಿಂಗ್ ಶಿಬಿರಾರ್ಥಿಗಳ ಮೌಲ್ಯಮಾಪನ ಮಾಡುವರು. ಅಗತ್ಯ ಸಾಧನಾ ಸಲಕರಣೆಗಳನ್ನು ನೀಡುವುದರಿಂದ ಚಲನಶೀಲತೆ, ಶ್ರವಣ ಸಾಮರ್ಥ್ಯ, ಜ್ಞಾನಾತ್ಮಕ ಸಾಮರ್ಥ್ಯ, ಕಲಿಕಾ ಸಾಮರ್ಥ್ಯ, ಹೆಚ್ಚು ಸ್ವಾವಲಂಬಿ ಮತ್ತು ಉತ್ತಮ ಜೀವನ ನಡೆಸುವುದಕ್ಕೆ ನೆರವಾಗಲಿದೆ ಎಂದು ಅವರು ಹೇಳಿದರು.

ಕೇಂದ್ರದ ಪ್ರಭಾರ ನಿರ್ದೇಶಕ ಕೆ. ಮಾರುತಿ ಕೃಷ್ಣಗೌಡ ಮಾತನಾಡಿ, ಶಿಬಿರಕ್ಕೆ ಆಗಮಿಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್, ಬಿಪಿಎಲ್‌ ಕಾರ್ಡ್ (ಇದ್ದಲ್ಲಿ), ಯುಡಿಐಡಿ, ವೈದ್ಯರ ಪ್ರಮಾಣಪತ್ರ ತರಬೇಕು. 60 ವರ್ಷ ಮೇಲ್ಪಟ್ಟವರಿಗೆ ಯುಡಿಐಡಿ ಅಗತ್ಯ ಇಲ್ಲ. ಶಿಬಿರದಲ್ಲಿ ದಾವಣಗೆರೆ ಮಾತ್ರವಲ್ಲದೇ ರಾಜ್ಯದ ಇತೆರ ಭಾಗದವರು ಭಾಗವಹಿಸಲು ಅವಕಾಶವಿದೆ. ಯಾವುದೇ ವಯೋಮಾನದ ಮಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೌಲ್ಯಮಾಪನಾ ಶಿಬಿರದಲ್ಲಿ ಯಾರಿಗೆ ಯಾವ ರೀತಿ ಸಾಧನಾ ಸಲಕರಣೆ ಬೇಕಾಗುತ್ತದೆಂದು ಗುರುತಿಸಲಾಗುವುದು. 15ರಿಂದ 1 ತಿಂಗೊಳಗೆ ಸಿಆರ್‌ಸಿ ಕೇಂದ್ರದಲ್ಲಿ ಶ್ರವಣ ಯಂತ್ರ, ವ್ಹೀಲ್‌ಚೇರ್, ಕ್ಲಚರ್, ಕಲಿಕಾ ಸಾಮಗ್ರಿ, ಬೆಲ್ಟ್, ಬ್ರೈಲಿ ಕಿಟ್ ಇತರೆ ಸಲಕರಣೆಗಳ ವಿತರಣೆ ಮಾಡಲಾಗುವುದು. ವಿಶೇಷಚೇತನರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಟ್ರಸ್ಟ್ ಅಧ್ಯಕ್ಷ ರಮಣ್‌ಲಾಲ್ ಪಿ.ಸಂಘವಿ, ಸಾಮಾಜಿಕ ಕಾರ್ಯಕರ್ತ ಗಣಪತಿ ಕಾಗಲ್ಕರ್, ಆದರ್ಶ ಸಿಂಗ್ ಇತರರು ಇದ್ದರು.

- - -

-24ಕೆಡಿವಿಜಿ3: ದಾವಣಗೆರೆಯಲ್ಲಿ ಗುರುವಾರ ಅಂಗವಿಕಲರ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಪೋಪಟಲಾಲ್ ಜೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಜಾನನ ಶಿಕ್ಷಕರ ಸಹಕಾರ ಸಂಘಕ್ಕೆ ₹9.34 ಲಕ್ಷ ಲಾಭ
ರಾಜ್ಯದ ಕಾಂಗ್ರೆಸ್ ಸಂಪೂರ್ಣ ದಿವಾಳಿ ಅಂಚಿನಲ್ಲಿ: ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್