ಬೆಂಗಳೂರು : ಭ್ರಷ್ಟ ಅಧಿಕಾರಿಗಳ ವಿರುದ್ಧ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇರೆಗೆ ಏಳು ಸರ್ಕಾರಿ ಅಧಿಕಾರಿಗಳಿಗೆ ಸೇರಿದ 35 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ₹22.78 ಕೋಟಿಗಿಂತ ಮೌಲ್ಯದ ಹೆಚ್ಚು ಆಸ್ತಿ ಪತ್ತೆ ಹಚ್ಚಿದ್ದಾರೆ.
ಗುರುವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು ತಡರಾತ್ರಿಯವರೆಗೆ ಶೋಧ ಕಾರ್ಯ ನಡೆಸಿದರು. ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳಿಗೆ ಸೇರಿದ ಸ್ಥಳ ಮೇಲೆ ದಾಳಿ ನಡೆಸಲಾಗಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಗಳೂರು, ಮಂಗಳೂರು, ವಿಜಯಪುರ, ಯಾದಗಿರಿಯಲ್ಲಿ ಕಾರ್ಯಾಚರಣೆ ಕೈಗೊಂಡು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅಪಾರ ಪ್ರಮಾಣದಲ್ಲಿ ನಗದು ಸೇರಿ ಆಸ್ತಿಗಳು ಸಿಕ್ಕಿದೆ.
ಎಲ್ಲೆಲ್ಲಿ ದಾಳಿ?
1.ಎಚ್.ಆರ್.ನಟರಾಜ್, ಕಾನೂನು ಮಾಪನ ನಿರೀಕ್ಷಕ, ಬೆಂಗಳೂರು
ಒಟ್ಟು ಐದು ಸ್ಥಳಗಳಲ್ಲಿ ಶೋಧಕಾರ್ಯ. 2 ನಿವೇಶನ, 2 ವಾಸದ ಮನೆ, 9 ಎಕರೆ ಕೃಷಿ ಜಮೀನು ಸೇರಿ ₹3.13 ಕೊಟಿ ಮೌಲ್ಯದ ಸ್ಥಿರಾಸ್ತಿ ಪತ್ತೆ. ₹1.50 ಲಕ್ಷ ನಗದು, ₹21 ಲಕ್ಷ ಮೌಲ್ಯದ ಚಿನ್ನಾಭರಣ, ₹5 ಲಕ್ಷ ಮೌಲ್ಯದ ವಾಹನಗಳು, ₹54 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹81.50 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು ₹3.94 ಕೋಟಿ ಮೌಲ್ಯದ ಆಸ್ತಿ ಪತ್ತೆ.
2. ಟಿ.ವಿ.ಮುರುಳಿ, ಹೆಚ್ಚುವರಿ ನಿರ್ದೇಶಕ, ನಗರ ಯೋಜನೆ, ಬಿಡಿಎ
ಆರು ಸ್ಥಳಗಳಲ್ಲಿ ಪರಿಶೀಲನೆ. 3 ನಿವೇಶನ, 3 ವಾಸದ ಮನೆ ಸೇರಿ ₹3.16 ಕೋಟಿ ಮೌಲ್ಯದ ಸ್ಥಿರಾಸ್ತಿ ಲಭ್ಯವಾಗಿದೆ. ₹25.54 ಲಕ್ಷ ಮೌಲ್ಯದ ಚಿನ್ನಾಭರಣ, ₹5 ಲಕ್ಷ ಮೌಲ್ಯದ ವಾಹನಗಳು ಸೇರಿ ₹30.54 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು ₹3.47 ಕೋಟಿ ಮೌಲ್ಯದ ಆಸ್ತಿ ಪತ್ತೆ.
3. ಅನಂತಕುಮಾರ್, ಎಸ್‌ಡಿಎ, ಹೊಸಕೋಟೆ ತಾಲೂಕು ಕಚೇರಿ
ನಾಲ್ಕು ಸ್ಥಳಗಳ ಮೇಲೆ ಕಾರ್ಯಾಚರಣೆ. 1 ವಾಸದ ಮನೆ, 5 ಎಕರೆ ಕೃಷಿ ಜಮೀನು ಸೇರಿ ₹1.51 ಕೋಟಿ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ₹2.84 ಲಕ್ಷ ನಗದು, ₹21 ಲಕ್ಷ ಮೌಲ್ಯದ ಚಿನ್ನಾಭರಣ, ₹6 ಲಕ್ಷ ಮೌಲ್ಯದ ವಾಹನಗಳು, ₹15 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ ₹44.84 ಲಕ್ಷ ಮೌಲ್ಯದ ಚರಾಸ್ತಿ ಲಭ್ಯ. ಒಟ್ಟು ₹1.96 ಕೋಟಿ ಮೌಲ್ಯದ ಆಸ್ತಿ ಸಿಕ್ಕಿದೆ.
4. ಡಿ.ರಾಜಶೇಖರ್, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ತುಮಕೂರು
ಒಟ್ಟು 9 ಸ್ಥಳಗಳಲ್ಲಿ ಶೋಧ ಕಾರ್ಯ. 12 ನಿವೇಶನ, 4 ವಾಸದ ಮನೆ, 4 ಎಕರೆ ಕೃಷಿ ಜಮೀನು ಸೇರಿ ಒಟ್ಟು ₹3.89 ಕೋಟಿ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ₹11.66 ಲಕ್ಷ ನಗದು, ₹89.06 ಲಕ್ಷ ಮೌಲ್ಯದ ಚಿನ್ನಾಭರಣ, ₹37.92 ಲಕ್ಷ ಮೌಲ್ಯದ ವಾಹನಗಳು, ₹26.87 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹1.84 ಕೋಟಿ ಮೌಲ್ಯದ ಆಸ್ತಿ ಲಭ್ಯ. ಒಟ್ಟು ₹5.74 ಕೋಟಿ ಮೌಲ್ಯದ ಆಸ್ತಿ ಪತ್ತೆ.
5. ಎಂ.ಆರ್.ಮಂಜುನಾಥ್, ಸರ್ವೆ ಸೂಪರ್‌ವೈಸರ್, ಯುಪಿಓಆರ್ ಕಚೇರಿ, ಮಂಗಳೂರು
4 ಸ್ಥಳಗಳಲ್ಲಿ ಕಾರ್ಯಾಚರಣೆ. 9 ನಿವೇಶನ, 2 ವಾಸದ ಮನೆ ಸೇರಿ ಒಟ್ಟು ₹2.31 ಕೋಟಿ ಮೌಲ್ಯದ ಸ್ಥಿರಾಸ್ತಿ ಲಭ್ಯ. ₹23,600 ನಗದು, ₹17 ಲಕ್ಷ ಮೌಲ್ಯದ ಚಿನ್ನಾಭರಣ, ₹3.50 ಲಕ್ಷ ಮೌಲ್ಯದ ವಾಹನಗಳು, ₹5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹25.73 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು ₹2.56 ಕೋಟಿ ಮೌಲ್ಯದ ಆಸ್ತಿ ಪತ್ತೆ.
6. ರೇಣುಕಾ ಸತಾರ್ಲೆ, ಹಿಂದಿನ ಜಿಲ್ಲಾ ವ್ಯವಸ್ಥಾಪಕಿ, ಡಾ। ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಯಮಿತ, ವಿಜಯಪುರ
2 ಸ್ಥಳಗಳಲ್ಲಿ ಶೋಧನಾ ಕಾರ್ಯ. 3 ನಿವೇಶನ, 2 ವಾಸದ ಮನೆ ಸೇರಿ ₹1.55 ಕೋಟಿ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ₹10 ಲಕ್ಷ ನಗದು, ₹58.80 ಲಕ್ಷ ಮೌಲ್ಯದ ಚಿನ್ನಾಭರಣ, ₹28 ಲಕ್ಷ ಮೌಲ್ಯದ ವಾಹನಗಳು, ₹24 ಲಕ್ಷ ಬ್ಯಾಂಕ್ ಠೇವಣಿ, ₹35 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹1.55 ಕೋಟಿ ಮೌಲ್ಯದ ಚರಾಸ್ತಿ ಲಭ್ಯ. ಒಟ್ಟು ₹3.10 ಕೋಟಿ ಮೌಲ್ಯದ ಆಸ್ತಿ ಪತ್ತೆ.
7. ಉಮಾಕಾಂತ್ ಹಳ್ಳೆ, ತಹಶೀಲ್ದಾರ್, ಶಹಾಪುರ ತಾಲೂಕು, ಯಾದಗಿರಿ
4 ಸ್ಥಳಗಳಲ್ಲಿ ಶೋಧ. 2 ನಿವೇಶನ, 2 ವಾಸದ ಮನೆ ಸೇರಿ ₹91.18 ಲಕ್ಷ ಮೌಲ್ಯದ ಸ್ಥಿರಾಸ್ತಿ ಲಭ್ಯ. ₹7.44 ಲಕ್ಷ ನಗದು, ₹12.31 ಲಕ್ಷ ಮೌಲ್ಯದ ಚಿನ್ನಾಭರಣ, ₹11 ಲಕ್ಷ ಮೌಲ್ಯದ ವಾಹನಗಳು, ₹27.58 ಲಕ್ಷ ಬ್ಯಾಂಕ್ ಖಾತೆಗಳ ಬ್ಯಾಲೆನ್ಸ್, 1 ಬ್ಯಾಂಕ್ ಲಾಕರ್, ₹40 ಲಕ್ಷ ನೀಡಿ ಮಗನ ಎಂಬಿಬಿಎಸ್ ಸೀಟ್ ಪಡೆದಿರುವುದು, ₹9 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹1.07 ಕೋಟಿ ಮೌಲ್ಯ ಚರಾಸ್ತಿ ಲಭ್ಯ. ಒಟ್ಟು ₹1.98 ಕೋಟಿ ಮೌಲ್ಯದ ಆಸ್ತಿ ಪತ್ತೆ.