ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಉದ್ಘಾಟನೆ

KannadaprabhaNewsNetwork | Published : Mar 29, 2025 12:36 AM

ಸಾರಾಂಶ

ಅಂಬೇವಾಡಿಯಲ್ಲಿ ನಿರ್ಮಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಉದ್ಘಾಟಿಸಿದರು.

ದಾಂಡೇಲಿ: ಅಂಬೇವಾಡಿಯಲ್ಲಿ ನಿರ್ಮಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದಾಂಡೇಲಿಗೆ ಅಗತ್ಯವಿರುವ ನೂತನ ಬಸ್‌ನಿಲ್ದಾಣ ನಿರ್ಮಾಣ, ಗ್ರಾಮೀಣ ಭಾಗಕ್ಕೆ ಮಿನಿ ಬಸ್ ಸಂಚಾರ, ದಾಂಡೇಲಿ-ಬೆಂಗಳೂರು ಮಧ್ಯ ಪಲ್ಲಕ್ಕಿ ಬಸ್ ಸಂಚಾರ ಹಲವು ಬೇಡಿಕೆಗಳು ಈ ಭಾಗದ ಜನರದ್ದಾಗಿದ್ದು, ಈ ಬೇಡಿಕೆಗಳಿಗೆ ಕ್ರಮ ಕೈಗೊಳ್ಳಲಾಗುವುದು. ಆರ್‌ಟಿಒ ಇಲಾಖೆ ಜನಮುಖಿಯಾಗಿ ಕೆಲಸ ಮಾಡಿಕೊಡಬೇಕು. ಕೆಲಸ ವಿಳಂಬ ಮಾಡದೇ ವೇಗವಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ದಾಂಡೇಲಿ ತಾಲೂಕು ಘೋಷಣೆಯಾದ ನಂತರ ಪ್ರಾದೇಶಿ ಸಾರಿಗೆ ಕಚೇರಿಯ ಅವಶ್ಯಕತೆ ಮನಗಂಡು ತಾಲೂಕಿಗೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳ ಕಚೇರಿಯನ್ನು ತಂದಿರುವುದಾಗಿ ಹೇಳಿದ ಅವರು, ಮಂಜೂರು ಮಾಡಲಾಗಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಈಗ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇಂದಿನ ದಿನಮಾನದಲ್ಲಿ ರಾಜಕೀಯ ಮಾಡುವುದು ಕಷ್ಟವಾಗಿದೆ. ತಾಲೂಕು ಅಭಿವೃದ್ಧಿಗೆ ಹಲವಾರು ತೊಡಕುಗಳು ಇದ್ದರೂ ಪ್ರಮಾಣಿಕ ಪ್ರಯತ್ನ ಮಾಡಿ ಅಭಿವೃದ್ಧಿ ಮಾಡಿದ್ದೇನೆ ಎಂದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿದರು.

ಧಾರವಾಡದ ಅಪರ ಸಾರಿಗೆ ಆಯುಕ್ತ ಹಾಲಸ್ವಾಮಿ, ಬೆಂಗಳೂರು ಸಾರಿಗೆ ಆಯುಕ್ತ ಬಿ.ಪಿ.ಉಮಾಶಂಕರ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎಂ.ಪಿ.ಓಂಕಾರೇಶ್ವರಿ, ದಾಂಡೇಲಿ ಸಹಾಯಕ ಪ್ರಾದೇಶಿಕ ಕಚೇರಿ ಅಧಿಕಾರಿ ಮಲ್ಲಿಕಾರ್ಜುನಪ್ಪ ಕಪ್ಪರದ, ಹುಬ್ಬಳ್ಳಿಯ ಮುಖ್ಯ ಕಾಮಗಾರಿ ಅಭಿಯಂತರ ದೀವಾಕರ ಯರಗೊಪ್ಪ, ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ., ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೀಶ ಎ.ಎಂ., ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶೀಲ್ಲಾ ಕೋಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಜಾಧವ, ದಾಂಡೇಲಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಮೋಹನ ಹಲವಾಯಿ ಇದ್ದರು.

Share this article