ಪೊಲೀಸರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಿ: ಆರಕ್ಷಕ ನಿರೀಕ್ಷಕ ಭರತ್‌ಗೌಡ

KannadaprabhaNewsNetwork |  
Published : Jan 02, 2026, 02:30 AM IST
ಪೊಟೊ-1ಕೆಎನ್‌ಎಲ್‌ಎಮ್‌1-ನೆಲಮಂಗಲ  ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತರಾದ  ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಧನರಾಜ್ ಅವರ ಬೀಳ್ಕೊಡುಗೆ  ಸಮಾರಂಭದಲ್ಲಿ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ನರೇಂದ್ರಬಾಬು, ರಾಜು, ರವಿ, ಪಿಎಸ್ಐ ನಂಜಯ್ಯ, ಎಎಸ್‌ಐ ಬಿ.ಎಸ್.ರಘು, ಕುಮಾರ್, ಸಿಬ್ಬಂದಿ ಚನ್ನೇಗೌಡ, ಶಿವಶಂಕರ್, ಬಸವರಾಜು, ಚಂದ್ರು, ಪ್ರದೀಪ್, ಮಹದೇವ್‌ಮತ್ತಿತರರು ಉಪಸ್ಥಿತರಿದರು.‌ | Kannada Prabha

ಸಾರಾಂಶ

ಸರ್ಕಾರಿ ಸೇವೆಯಲ್ಲಿ ವಯೋ ನಿವೃತ್ತಿ ಎಂಬುದು ಸಾಮಾನ್ಯವಾದದ್ದು, ಸೇವೆಯಲ್ಲಿ ಮಾಡಿದ್ದ ಕಾರ್ಯ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಸದಾ ಜಾಗೃತವಾಗಿರಬೇಕಾಗಿರುವ ಇಲಾಖೆಗೆ ನಿವೃತ್ತರಾಗುತ್ತಿರುವ ಧನರಾಜ್ ಅವರ ಸಹಕಾರವೂ ಅಗತ್ಯವಾಗಿದೆ. ಅವರ ಅನುಭವವನ್ನು ಸದಾಕಾಲ ಇಲಾಖೆಗೆ ಹಂಚಿಕೊಳ್ಳಬೇಕು. ಪ್ರಾಮಾಣಿಕ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ದಕ್ಷತೆಯಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ನೆಲಮಂಗಲ

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಷ್ಟು ಕಾಲ ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಸದಾ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ ಎಂದು ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಭರತ್‌ಗೌಡ ತಿಳಿಸಿದರು.

ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಗ್ರಾಮದ ಬಳಿಯ ಹಾಲಿಡೇ ಫಾರ್ಮ್ ಹೋಟೆಲ್ ಸಭಾಂಗಣದಲ್ಲಿ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಧನರಾಜ್ ಅವರಿಗೆ ಬೀಳ್ಕೊಡುಗೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಸೇವೆಯಲ್ಲಿ ವಯೋ ನಿವೃತ್ತಿ ಎಂಬುದು ಸಾಮಾನ್ಯವಾದದ್ದು, ಸೇವೆಯಲ್ಲಿ ಮಾಡಿದ್ದ ಕಾರ್ಯ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಸದಾ ಜಾಗೃತವಾಗಿರಬೇಕಾಗಿರುವ ಇಲಾಖೆಗೆ ನಿವೃತ್ತರಾಗುತ್ತಿರುವ ಧನರಾಜ್ ಅವರ ಸಹಕಾರವೂ ಅಗತ್ಯವಾಗಿದೆ. ಅವರ ಅನುಭವವನ್ನು ಸದಾಕಾಲ ಇಲಾಖೆಗೆ ಹಂಚಿಕೊಳ್ಳಬೇಕು. ಪ್ರಾಮಾಣಿಕ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ದಕ್ಷತೆಯಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಅಭಿನಂದನೆ:

ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಧನರಾಜ್ ಅವರನ್ನು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ‌.ಕೆ.ಬಾಬ, ಡಿವೈಎಸ್‌ಪಿ ಜಗದೀಶ್ ಸೇರಿ ನೆಲಮಂಗಲ ಉಪವಿಭಾಗದ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಭಿನಂದಿಸಿದರು.

ನಂತರ ಪಿಎಸ್‌ಐ ಧನರಾಜ್ ಮಾತನಾಡಿ, ಸಾರ್ವಜನಿಕರ ಸೇವೆ ಮಾಡಲು ಪೊಲೀಸ್ ಇಲಾಖೆ ನಮಗೆ ನೀಡಿರುವ ದೊಡ್ಡ ಅವಕಾಶ ಇದಾಗಿದೆ. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಕೇವಲ ಒಬ್ಬರು, ಇಬ್ಬರಿಂದ ಸಾಧ್ಯವಾಗಲ್ಲ, ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನ, ಸಿಬ್ಬಂದಿಯ ಸಹಕಾರದಿಂದ ಮಾತ್ರ ನಾವು ಏನು ಬೇಕಾದರೂ ಸಾಧನೆ ಮಾಡಬಹುದಾಗಿದೆ ಎಂದರು.

ಸಂದರ್ಭದಲ್ಲಿ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ನರೇಂದ್ರಬಾಬು, ರಾಜು, ರವಿ, ಪಿಎಸ್ಐ ನಂಜಯ್ಯ, ಎಎಸ್‌ಐ ಬಿ.ಎಸ್.ರಘು, ಕುಮಾರ್, ಸಿಬ್ಬಂದಿ ಚನ್ನೇಗೌಡ, ಶಿವಶಂಕರ್, ಬಸವರಾಜು, ಚಂದ್ರು, ಪ್ರದೀಪ್, ಮಹದೇವ್‌ ಮತ್ತಿತರರು ಉಪಸ್ಥಿತರಿದರು.‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳವಳ್ಳಿಯಲ್ಲಿ ಕೋರೆಗಾಂವ್ ವಿಜಯೋತ್ಸವ ಆಚರಣೆ
ಶಿಲ್ಪಿ ಜಕಣಾಚಾರಿ ಎಂದೆಂದಿಗೂ ಅಮರ