ಭಾರತ ಕಂಡ ಅಪ್ರತಿಮ ದೇಶ ಭಕ್ತ ಅಟಲ್ ಬಿಹಾರಿ ವಾಜಪೇಯಿ-ದೇವರಾಜ

KannadaprabhaNewsNetwork |  
Published : Dec 26, 2025, 02:15 AM IST
ಪಟ್ಟಣದ ಪಕ್ಷದ ಕಚೇರಿಯಲ್ಲಿ ನಡೆದ ಅಜಾತ ಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಕಾರ್ಯಕ್ರಮದಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಭಾರತ ಕಂಡ ಅಪ್ರತಿಮ ದೇಶ ಭಕ್ತ, ದೇಶದ ಸರ್ವಾಂಗೀಣ ಅಭಿವೃದ್ಧಿ ಹರಿಕಾರ, ಭಾರತ ರತ್ನ ದಿ. ಶ್ರೀ ಅಟಲ್ ಬಿಹಾರಿ ವಾಜಪೇಯ ಅವರ ಜನ್ಮ ದಿನಾಚರಣೆಯನ್ನು ಒಂದು ದಿನಕ್ಕೆ ಮೀಸಲಿಡದೇ ಅವರ ರಾಜಕೀಯ ಚಾಣಕ್ಯ ನೀತಿ ನಮ್ಮಲ್ಲಿ ಅಳವಡಿಸಿಕೊಂಡು ಸದಾ ಅವರನ್ನು ಸ್ಮರಿಸೋಣ ಎಂದು ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ರಟ್ಟೀಹಳ್ಳಿ:ಭಾರತ ಕಂಡ ಅಪ್ರತಿಮ ದೇಶ ಭಕ್ತ, ದೇಶದ ಸರ್ವಾಂಗೀಣ ಅಭಿವೃದ್ಧಿ ಹರಿಕಾರ, ಭಾರತ ರತ್ನ ದಿ. ಶ್ರೀ ಅಟಲ್ ಬಿಹಾರಿ ವಾಜಪೇಯ ಅವರ ಜನ್ಮ ದಿನಾಚರಣೆಯನ್ನು ಒಂದು ದಿನಕ್ಕೆ ಮೀಸಲಿಡದೇ ಅವರ ರಾಜಕೀಯ ಚಾಣಕ್ಯ ನೀತಿ ನಮ್ಮಲ್ಲಿ ಅಳವಡಿಸಿಕೊಂಡು ಸದಾ ಅವರನ್ನು ಸ್ಮರಿಸೋಣ ಎಂದು ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಪಕ್ಷದ ಕಚೇರಿಯಲ್ಲಿ ನಡೆದ ಅಜಾತ ಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ವಾಜಪೇಯಿ ಅವರು ನಮ್ಮಂತ ಕೆಳ ಮಟ್ಟದ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿ 1939ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರ್ಪಡೆಯಾಗಿ ಅನೇಕ ವರ್ಷಗಳ ಕಾಲ ಪ್ರಚಾರಕರಾಗಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಭಾರತ ದೇಶಕ್ಕೆ ಇಂಗ್ಲಿಷರಿಂದ ಮುಕ್ತಿ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿರುವುದು ಅತ್ಯಂತ ಹೆಮ್ಮೆ ಎನಿಸುತ್ತದೆ ಎಂದು ಅವರ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದರು.

ಅಟಲ್ ಬಿಹಾರಿ ವಾಜಪೇಯಿ ಅವರು 1957ರಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿ ನಂತರ ವಿದೇಶಾಂಗ ಸಚಿವರಾಗಿ ವಿಶ್ವ ಸಂಸ್ಥೇಯಲ್ಲಿ ನಮ್ಮ ರಾಷ್ಟ್ರೀಯ ಭಾಷೆ ಹಿಂದಿಯಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಗಮನಾರ್ಹ, 1980 ರಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷರಾಗಿ ನಂತರ 1996ರ ಅವಧಿಯ 13 ದಿನಗಳ ಪ್ರಥಮಬಾರಿ ಪ್ರಧಾನಿಯಾಗಿ ದೇಶದ ಜನರ ಮೆಚ್ಚುಗೆ ಗಳಿಸಿ 1999 ರಲ್ಲಿ ಕಾಂಗ್ರೆಸೇತರ ಪೂರ್ಣಾವಧಿ ಪ್ರಧಾನಿಯಾಗಿ ಇತಿಹಾಸ ನಿರ್ಮಿಸುವ ಮೂಲಕ ಸರ್ವ ಪಕ್ಷಗಳ ಹಾಗೂ ಎಲ್ಲ ಧರ್ಮಿಯರ ಅಜಾತ ಶತ್ರುವಾಗಿ ಹೊರಹೊಮ್ಮುವ ಮೂಲಕ ತಮ್ಮ ಆಡಳಿತಾವಧಿಯಲ್ಲಿ ಅನೇಕ ಬದಲಾವಣೆಗಳನ್ನು ತರುವ ಮೂಲಕ ಇತಿಹಾಸ ನಿರ್ಮಿಸಿದ ಮಹಾನ್ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿರುವುದು ನಮಗೆಲ್ಲ ಸ್ಫೂರ್ತಿದಾಯಕ ರಾಜಕಾರಣಿ ಎಂದರು.ತಮ್ಮ ಆಡಳಿತಾವಧಿಯಲ್ಲಿ ಪ್ರಮುಖ ಯೋಜನೆಗಳಾದ ಚತುಷ್ಪಥ ರಸ್ತೆ ನಿರ್ಮಾಣ, ಸರ್ವ ಶಿಕ್ಷಣ ಅಭಿಯಾನ, ವಿದೇಶಾಂಗ ನೀತಿ, ಭಾರತದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಯೋಜನೆಗಳು, ಭ್ರಷ್ಟಾಚಾರ ರಹಿತ ಆಡಳಿತ, ಆರ್ಥಿಕತೆಯ ದೂರ ದೃಷ್ಟಿ ಉಳ್ಳ ಚಾಣಕ್ಯ ನೀತಿ, ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರ ನಿರ್ಮಾಣ, ಗ್ರಾಮ ಸಡಕ್ ಯೋಜನೆ, 1999ರ ಕಾರ್ಗಿಲ್ ಯುದ್ಧದಲ್ಲಿ ದೇಶವನ್ನು ಮುನ್ನಡೆಸಿ ಗೆಲುವು ಸಾಧಿಸಿ ರಾಜಕೀಯ ಸ್ಥಿರತೆ ಕಾಪಾಡಿ 1999ರಿಂದ 2004ರ ವರೆಗೆ ಮೂರು ಬಾರಿ ದೇಶದ ಪ್ರಧಾನಿಯಾಗಿ ಸರ್ವ ಪಕ್ಷಗಳ ಅಜಾತ ಹೊರ ಹೊಮ್ಮಿದ ದೇಶ ಕಂಡ ಅದ್ಭುತ ನಾಯಕ ಅವರ ಸಾಧನೆಗಳನ್ನು ಪಟ್ಟಿ ಮಾಡಲಾರದಷ್ಟು ಬೆಳೆದು ನಮಗೆ ಸ್ಫೂರ್ತಿ ನಾಯಕ ಎಂದು ಅವರ ಸಾಧನೆಗಳನ್ನು ಕೊಂಡಾಡಿದರು.

1992ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, 1994ರಲ್ಲಿ ಅತ್ಯುತ್ತಮ ಸಂಸದೀಯ ಪ್ರಶಸ್ತಿ, 2015ರಲ್ಲಿ ಭಾರತ ರತ್ನ ಹೀಗೆ ಅವರು ಪಡೆದ ಸಾಧನೆಗೆ ಮೆಚ್ಚಿ ಉತ್ತಮ ಆಡಳಿತಗಾರ ಎಂದು ಡಿ. 25 ಸುಸಾಶನ್ ದಿವಸ ಎಂದು ಆಚರಿಸಲಾಗುತ್ತಿದೆ ಎಂದರು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸುಶೀಲ್ ನಾಡಿಗೇರ, ರವಿ ಮುದ್ದಣ್ಣನವರ, ಶ್ರೀನಿವಾಸ ಬೈರೋಜಿಯವರ, ಬಸಣ್ಣ ಬಾಗೋಡಿ, ಪ್ರಶಾಂತ ದ್ಯಾವಕ್ಕಳವರ, ರಾಜುಗೌಡ ಪಾಟೀಲ್, ರಾಘವೇಂದ್ರ ಹರವಿಶೆಟ್ಟರ್, ಪ್ರಕಾಶ ಕೊರವರ, ಬಸವರಾಜ ಕಟ್ಟಿಮನಿ, ವಿನಾಯಕ ಅಗಡಿ, ಸಂತೋಷ ಕಾಪ್ಸೀಕರ್, ಸುನೀಲ್ ಕಟ್ಟಿಮನಿ, ಸಿದ್ದಾರ್ಥ ಬಿದರಿ, ದೇವಿಂದ್ರಪ್ಪ ಗುತ್ತಲ್, ಶಶಿಗೌಡ ಪಾಟೀಲ್, ರಮೇಶ ತೋಟಗಂಟಿ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಲಾಸ್ ಒಡೆದು ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡ ವಿಜಯ ಭಂಡಾರಿ
ಗದಗ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್‌ಮಸ್, ಸಹಬಾಳ್ವೆ ಮೆರಗು!