ಗದಗ: ದೇಶ ಕಂಡ ಅಪ್ರತಿಮ ನಾಯಕ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಗುರುವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ವಾಜಪೇಯಿ ಅವರು ಅಭಿವೃದ್ಧಿಯ ಹರಿಕಾರರಾಗಿದ್ದರು ಎಂದರು.
ಹಿರಿಯ ಮುಖಂಡ ಎಂ.ಎಸ್. ಕರಿಗೌಡ್ರ ಮತ್ತು ಶ್ರೀಪತಿ ಉಡುಪಿ ಅಟಲ್‌ಜಿ ಕುರಿತು ಮಾತನಾಡಿದರು. ಪಕ್ಷದ ಹಿರಿಯರಾದ ಜಗನ್ನಾಥಸಾ ಭಾಂಡಗೆ, ಎಂ.ಎಂ. ಹಿರೇಮಠ, ಲಿಂಗರಾಜ ಪಾಟೀಲ ಮಲ್ಲಾಪುರ, ಬೂದಪ್ಪ ಹಳ್ಳಿ, ರವಿ ದಂಡಿನ, ಭೀಮಸಿಂಗ್ ರಾಠೋಡ, ಸಿದ್ದು ಪಲ್ಲೇದ, ಅಶೋಕ ಸಂಕಣ್ಣವರ, ನಿರ್ಮಲಾ ಕೊಳ್ಳಿ, ಸಂತೋಷ ಅಕ್ಕಿ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಮಹಾದೇವಪ್ಪ ಚಿಂಚಲಿ, ಶಂಕರ ಕಾಕಿ, ಶಾರದಾ ಸಜ್ಜನರ, ಶಶಿಧರ ದಿಂಡೂರ, ನಾಗರಾಜ ತಳವಾರ, ಕೆ.ಪಿ. ಕೋಟಿಗೌಡ್ರ, ರಮೇಶ ಸಜ್ಜಗಾರ, ರಾಚಯ್ಯ ಹೊಸಮಠ, ನಾಗರಾಜ ಮದ್ನೂರ, ಬಸವರಾಜ ಅಡ್ನೂರ, ಅಪ್ಪಣ್ಣ ಟೆಂಗಿನಕಾಯಿ, ಶಂಕರ ಕರಿಬಿಷ್ಟಿ, ವಿಜಯಲಕ್ಷ್ಮೀ ಮಾನ್ವಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ರವಿ ಮಾನ್ವಿ, ಪಾರ್ವತಿ ಪಟ್ಟಣಶೆಟ್ಟಿ, ಶ್ವೇತಾ ದಂಡಿನ, ಪ್ರೀತಿ ಶಿವಪ್ಪನಮಠ, ರೇಖಾ ಗವಳಿ, ಮೋಹನ ಕೋರಿ, ವಿನೋದ ಹಂಸನೂರ ಹಾಜರಿದ್ದರು.