ವಿಶ್ವೇಶ್ವರಯ್ಯನವರ ಆದರ್ಶಗಳು ನಮ್ಮೆಲ್ಲರಿಗೆ ಸ್ಫೂರ್ತಿಯಾಗಲಿ: ಶಾಸಕ ಲಕ್ಷ್ಮಣ ಸವದಿ

KannadaprabhaNewsNetwork | Published : Oct 7, 2024 1:35 AM

ಸಾರಾಂಶ

ಜಗತ್ತಿನ ತಂತ್ರಜ್ಞಾನದಲ್ಲಿ ಎಂಜಿನಿಯರ್ ಗಳ ಪಾತ್ರ ಹಿರಿದಾಗಿದೆ. ನಾಡಿನ ಮತ್ತು ದೇಶದ ಶ್ರೇಷ್ಠ ಎಂಜಿನಿಯರ್ ಗಳು ಮಾಡಿದ ಕಾರ್ಯಗಳು ಸಾರ್ವಜನಿಕರಿಗೆ ಚಿರಸ್ಥಾಯಿಯಾಗಿ ಇಂದಿಗೂ ಉಳಿದುಕೊಂಡಿವೆ. ತಮ್ಮ ಕೆಲಸದಲ್ಲಿ ಬದ್ಧತೆ, ದೂರ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡಬೇಕು. ಅವಕಾಶ ಸಿಕ್ಕಾಗ ವಿದೇಶಗಳಿಗೆ ಭೇಟಿ ನೀಡಿ ಎಂಜಿನಿಯರ್‌ಗಳ ಕೌಶಲ್ಯವನ್ನು ಅಧ್ಯಯನ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಜಗತ್ತಿನ ತಂತ್ರಜ್ಞಾನದಲ್ಲಿ ಎಂಜಿನಿಯರ್ ಗಳ ಪಾತ್ರ ಹಿರಿದಾಗಿದೆ. ನಾಡಿನ ಮತ್ತು ದೇಶದ ಶ್ರೇಷ್ಠ ಎಂಜಿನಿಯರ್ ಗಳು ಮಾಡಿದ ಕಾರ್ಯಗಳು ಸಾರ್ವಜನಿಕರಿಗೆ ಚಿರಸ್ಥಾಯಿಯಾಗಿ ಇಂದಿಗೂ ಉಳಿದುಕೊಂಡಿವೆ. ತಮ್ಮ ಕೆಲಸದಲ್ಲಿ ಬದ್ಧತೆ, ದೂರ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡಬೇಕು. ಅವಕಾಶ ಸಿಕ್ಕಾಗ ವಿದೇಶಗಳಿಗೆ ಭೇಟಿ ನೀಡಿ ಎಂಜಿನಿಯರ್‌ಗಳ ಕೌಶಲ್ಯವನ್ನು ಅಧ್ಯಯನ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಶನಿವಾರ ಸಂಜೆ ಅಥಣಿ ತಾಲೂಕು ಅಭಿಯಂತರರು ಹಾಗೂ ಗುತ್ತಿಗೆದಾರರ ಸಂಘದ ವತಿಯಿಂದ ಹಮ್ಮಿಕೊಂಡ ಎಂಜಿನಿಯರ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನದಲ್ಲಿ ಬಹಳ ಪರಿಣತಿ ಪಡೆದವರು ಅಭಿಯಂತರರು, ಅಥಣಿಯಲ್ಲಿ ಮೂರು ದೊಡ್ಡ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿ ಇದುವರೆಗೂ ಕೂಡ ಜನೋಪಯೋಗಿ ಕೊಡುಗೆ ನೀಡಿರುವುದು ಅಥಣಿ ಭಾಗದ ಅಭಿಯಂತರರು ಮತ್ತು ಗುತ್ತಿಗೆದಾರರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹಿರಿಯ ಎಂಜಿನಿಯರ್ ಬಿ.ಆರ್. ರಾಠೋಡ ಮಾತನಾಡಿ ಸರ್ ಎಂ.ವಿಶ್ವೇಶ್ಬರಯ್ಯ ಅವರ ಕೊಡುಗೆ ಅಪಾರ. ಅವರ ಮಹಾನ್ ಕಾರ್ಯಗಳನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಭಾರತ ದೇಶದ ಭಾರತ ರತ್ನ ಪ್ರಶಸ್ತಿ ಕೂಡ ಪಡೆದ ಪ್ರಮುಖರು, ಬೆಳಗಾವಿ ಜಿಲ್ಲೆಗೆ ಅಭಿಯಂತರ ಎಸ್.ಜಿ. ಬಾಳೆಕುಂದ್ರಿ ಅಪಾರ ಕೊಡುಗೆ ಕೊಟ್ಟಿದ್ದಾರೆ. ಎಂಜಿನಿಯರ್ ಗಳ ವಿಚಾರಶೀಲತೆ, ನಾವೀಣ್ಯತೆ, ನಿರ್ಮಾಣ ಕಾರ್ಯ, ನಿರ್ವಹಣೆ, ಮಾದರಿಯವಾದದ್ದು, ಗುತ್ತಿಗೆದಾರರು ಸಹ ಸಾರ್ವಜನಿಕರಿಗೆ ಅನುಕೂಲ ಆಗುವ ಸೇವೆ ಮಾಡುತ್ತಿದ್ದಾರೆ ಎಂದರು.

ನಿವೃತ್ತ ಅಭಿಯಂತರ ಅರುಣ ಯಲಗುದ್ರಿ ಮಾತನಾಡಿ, ಸರಳತೆ ಪ್ರಾಮಾಣಿಕತೆ ಕ್ರಿಯಾಶೀಲತೆಗೆ ಹೆಸರುವಾಸಿಯಾದ ವಿಶ್ವೇಶ್ವರಯ್ಯನವರು, ಇತ್ತೀಚೆಗೆ ಅಭಿಯಂತರರು ಇರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸುಧಾರಣೆ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಸಂಘದ ಅಧ್ಯಕ್ಷ ನಾಗರಾಜ್ ಬಿ.ಎಸ್. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಪ್ರಸಕ್ತ ವರ್ಷದಲ್ಲಿ ಸೇವೆಗಿಂತ ನಿವೃತ್ತಿ ವಿವಿಧ ಇಲಾಖೆಯ ಅಭಿಯಂತರರಿಗೆ ಸಂಘದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೆಸ್ಕಾಂ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಕಿರಣ ಸಣ್ಣಕ್ಕಿ, ಶಿವರುದ್ರ ಘೂಳಪ್ಪನ್ನವರ, ಚಿದಾನಂದ ಗುರುಸ್ವಾಮಿ, ನಾಗರಾಜ ಬಿ.ಎಸ್, ಜಿ .ಎಮ್. ಹಿರೇಮಠ,ವೀರಣ್ಣ ವಾಲಿ, ಮಲ್ಲಿಕಾರ್ಜುನ ಮಗದುಮ, ಶೇಖರ ಕರಬಸಪ್ಪಗೋಳ, ರಾಜು ಆಲಬಾಳ, ಪ್ರವೀಣ ಹುಣಸಿಕಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಭಿಯಂತರರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಮಗದುಮ್‌ ಸ್ವಾಗತಿಸಿದರು. ವೀರಣ್ಣ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂಗಮೇಶ ಹಚ್ಚಡದ ನಿರೂಪಿಸಿದರು. ಸತೀಶ ಮಾಳಿ ವಂದಿಸಿದರು.

ಮೈಸೂರು ಮಹಾರಾಜರ ಕಾಲದಲ್ಲಿ ಕನ್ನಂಬಾಡಿ ಅಣೆಕಟ್ಟು ನಿರ್ಮಾಣದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಅವರ ಪಾತ್ರ ಮಹತ್ತರವಾದದ್ದು, ಅವರು ಕಾರ್ಯನಿರ್ವಹಿಸಿದ ದಿನಗಳು ಇಂದಿಗೂ ತಮ್ಮ ಚಾಪ ಮಾಡಿಸಿವೆ, ಅವರ ದೂರದೃಷ್ಟಿ ಮತ್ತು ಬದ್ಧತೆಯಿಂದ ದೇಶದಲ್ಲಿಯೇ ಶ್ರೇಷ್ಠರಾದವರು.ದೇಶಕಂಡ ಶ್ರೇಷ್ಠ ಎಂಜಿನಿಯರ್ ಸರ್. ಎಂ ವಿಶ್ವೇಶ್ವರಯ್ಯ ಆದರ್ಶಗಳನ್ನು, ಅವರ ವಿಚಾರಧಾರೆಗಳನ್ನು ಮೆಲುಕು ಹಾಕುವುದೇ ದಿನಾಚರಣೆಯ ಉದ್ದೇಶವಾಗಿದೆ.

-ಶಾಸಕ ಲಕ್ಷ್ಮಣ ಸವದಿ ಶಾಸಕ ಅಥಣಿ ಮತಕ್ಷೇತ್ರ

Share this article