ಕನ್ನಡಪ್ರಭ ವಾರ್ತೆ ಮೈಸೂರು
ಈ ಕ್ರೀಡಾಪಟುಗಳು ಮೈಸೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಲಿದ್ದು, ಈಗಾಗಲೇ ಪುಷ್ಪಲತಾ ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಸ್ಪರ್ಧೆ 2023- 24 ರಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಪುಷ್ಪಲತಾ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕು ಅರುವೆನಹಳ್ಳಿ ಗ್ರಾಮದ ನಂಜಪ್ಪ ಮತ್ತು
ಕಲಾವತಿ ದಂಪತಿಯ ಪುತ್ರಿ. ಬಿಂದುಶ್ರೀ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದು ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಬಸವರಾಜಪುರ ಗ್ರಾಮದ ಬಿ.ಎಸ್. ಕುಮಾರಸ್ವಾಮಿ ಮತ್ತು ತ್ರಿವೇಣಿ ಅವರ ಪುತ್ರಿ ಆಗಿದ್ದಾರೆ. ಈ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ವಿಜಯಮ್ಮ, ಕಾಲೇಜಿನದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಸಿ.ಎಸ್. ಮೋಹನ್ ಕುಮಾರ್ ಮತ್ತು ಡಾ.ಕೆ.ಎಸ್. ಭಾಸ್ಕರ್ ಹಾಗೂ ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರ ವರ್ಗದವರು ವಿದ್ಯಾರ್ಥಿನಿಯರು ಅಭಿನಂದಿಸಿ ಶುಭ ಹಾರೈಸಿದ್ದಾರೆ.