ಹನೂರು: ಮಲೆ ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಮೆಂದಾರೆ ಗ್ರಾಮದ ಸೋಲಿಗ ಸಮುದಾಯದ ಮಹಿಳೆಯರು ಹಾಗೂ ಪುರುಷರಿಗೆ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಕೇಂದ್ರಕ್ಕೆ ಮೆಂದಾರೆ ಗ್ರಾಮದ ಸೋಲಿಗ ಆದಿವಾಸಿ ನಿವಾಸಿಗಳು ಮತದಾನ ಮಾಡಲು ಬಂದಾಗ ನಿವಾಸಿಗಳಿಂದ ಕಲ್ಲು, ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದರಿಂದ ಘಟನೆಯಲ್ಲಿ ಮಾದಯ್ಯ ಶಿವಕುಮಾರ್ ಸಣ್ಣಯ್ಯ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸೋಲಿಗ ಸಮುದಾಯದ ಮುಖಂಡರು ಮಲೆ ಮಾದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಣಯಿಸಿದ್ದು ಈ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸೋಲಿಗ ಸಮುದಾಯ ರಾಜ್ಯ ಕಾರ್ಯದರ್ಶಿ ಮುತ್ತಯ್ಯ ತಿಳಿಸಿದ್ದಾರೆ. ದೂರು ದಾಖಲು: