ಅಮಾವಾಸ್ಯೆ ದೀಪದ ಬೆಳಕಿನಲ್ಲಿ ಶಿವ ದರ್ಶನದಿಂದ ಪುಣ್ಯ ಪ್ರಾಪ್ತಿ: ವಿ.ಎಸ್.ಕೃಷ್ಣಭಟ್‌

KannadaprabhaNewsNetwork |  
Published : Dec 03, 2024, 12:34 AM IST
 ನರಸಿಂಹರಾಜಪುರದ ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಅಗ್ರಹಾರದ ವೇ.ಬ್ರ. ವಿ.ಎಸ್‌.ಕೃಷ್ಣಭಟ್‌ ಛಾಲನೆ ನೀಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರಅಮಾವಾಸ್ಯೆ ದಿನದಂದು ದೀಪದ ಬೆಳಕಿನಲ್ಲಿ ಶಿವನನ್ನು ಕಂಡರೆ ಪುಣ್ಯ ಪ್ರಾಪ್ತವಾಗುತ್ತದೆ ಎಂದು ಅಗ್ರಹಾರದ ವೇ.ಬ್ರ.ವಿ.ಎಸ್‌.ಕೃಷ್ಣಭಟ್‌ ತಿಳಿಸಿದರು.

ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ 29 ನೇ ವರ್ಷದ ಲಕ್ಷ ದೀಪೋತ್ಸವ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅಮಾವಾಸ್ಯೆ ದಿನದಂದು ದೀಪದ ಬೆಳಕಿನಲ್ಲಿ ಶಿವನನ್ನು ಕಂಡರೆ ಪುಣ್ಯ ಪ್ರಾಪ್ತವಾಗುತ್ತದೆ ಎಂದು ಅಗ್ರಹಾರದ ವೇ.ಬ್ರ.ವಿ.ಎಸ್‌.ಕೃಷ್ಣಭಟ್‌ ತಿಳಿಸಿದರು.

ಭಾನುವಾರ ರಾತ್ರಿ ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ನಡೆದ 29 ನೇ ವರ್ಷದ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಶಂಕರಾಚಾರ್ಯರು ಹೇಳಿದಂತೆ ಹೃದಯದಲ್ಲಿ ಪರಮಾತ್ಮನನ್ನು ಇಟ್ಟುಕೊಂಡು ದೇವರ ಮೂರ್ತಿಯಲ್ಲಿ ಅವನ ನಿಜ ಸ್ವರೂಪ ಕಾಣಬೇಕು. ವಿಶೇಷವಾಗಿ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಶಿವನಿಗೆ ರುದ್ರಾಭಿಷೇಕ, ಪವಮಾನ ಅಭಿಷೇಕ, ಧೂಪ, ದೀಪ ಪಂಚಾಮೃತದಿಂದ ಅಭಿಷೇಕ ಮಾಡಬೇಕು ಎಂದರು.

ಶಿವ ಹಾಗೂ ವಿಷ್ಣು ಬೇರೆಯಲ್ಲ. ಶಿವನು ಸ್ತೋತ್ರ ಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯನಾಗಿದ್ದಾನೆ. ಕಾರ್ತಿಕ ಮಾಸದ ಕೃತಿಕಾ ನಕ್ಷತ್ರ ಹಾಗೂ ಅಮಾವಾಸ್ಯೆಯಂದು ದೇವರ ಕೆಲಸ ಮಾಡಲು ದಿನವನ್ನು ಮೀಡಲಾಗಿಡಬೇಕು ಎಂದರು.

ಭಾಗ್ಯ ನಂಡುಂಡಸ್ವಾಮಿ ಮಾತನಾಡಿ, 29 ನೇ ವರ್ಷದ ಲಕ್ಷ ದೀಪೋತ್ಸವ ಭಕ್ತರ ನೆರವಿನೊಂದಿಗೆ ಅದ್ಧೂರಿಯಾಗಿ ನಡೆಯುತ್ತಿದೆ. ಕಾರ್ತಿಕ ಮಾಸದಲ್ಲಿ ದೀಪ ಎಂದರೆ ಪಾಪ ಕಳೆದಂತೆ ಎಂಬಂತೆ ಕಾರ್ತಿಕ ಮಾಸ ಅಗ್ನಿ ದೇವರ ಅವತಾರ ಕಾಲವಾಗಿದ್ದು ಮಂಗಳ ಪರಂಪರೆ ಸಂಕೇತ ಹಾಗೂ ಅಭಿವೃದ್ಧಿ ಸಂಕೇತವಾಗಿದೆ ಎಂದರು.

ದೀಪೋತ್ಸವದ ಪ್ರಯುಕ್ತ ಉಮಾ ಮಹೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನಡೆಯಿತು. ಸಂಜೆ ಭಕ್ತರು ದೇವಾಲಯದ ಆವರಣದದಲ್ಲಿ ದೀಪ ಬೆಳಗಿಸಿದರು. ಪ್ರಧಾನ ಅರ್ಚಕ ಪ್ರಸನ್ನ ಐತಾಳ್‌ ಪೂಜೆ ನೆರವೇರಿಸಿದರು.

ನಂತರ ವೇದ ಘೋಷ, ಅಷ್ಟವಧಾನ ಸೇವೆ ನಡೆಯಿತು. ರಾಘ ಮಯೂರಿ ಅಕಾಡೆಮಿಯ ಮಕ್ಕಳಿಂದ ನಾಟ್ಯ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಎಚ್‌. ನಂಜಂಡಸ್ವಾಮಿ, ತಾಲೂಕು ಬ್ರಾಹ್ಮ ಣ ಮಹಾ ಸಭಾದ ಅಧ್ಯಕ್ಷ ಕೊನೋಡಿ ಗಣೇಶ್‌, ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷ ಜೆ.ಜಿ.ಸದಾಶಿವ ಭಟ್‌, ಉಮಾಮಹೇಶ್ವರ ದೇವಸ್ಥಾನದ ಕಾರ್ತಿಕ ಸೋಮವಾರ ಪೂಜಾ ಸಮಿತಿ ಅಧ್ಯಕ್ಷ ಶಿವಶಂಕರ್‌, ಶಿವಾಂಜನೇಯ ಸಮಿತಿ ಕಾರ್ಯದರ್ಶಿ ಸುರೇಶ್‌, ಲಲಿತಾ ಭಜನಾ ಮಂಡಳಿ ಕಾರ್ಯದರ್ಶಿ ಜ್ಯೋತಿಮಂಜುನಾಥ್‌ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ