ಕಾಣದ ಕೈಗಳಿಂದ ನನ್ನ - ಜನರ ಬಾಂಧವ್ಯಕ್ಕೆ ಧಕ್ಕೆ ತರುವ ಪ್ರಯತ್ನ: ನಿಶಾ ಯೋಗೇಶ್ವರ್

KannadaprabhaNewsNetwork |  
Published : Nov 02, 2026, 02:15 AM IST
ನಿಶಾ ಯೋಗೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ನನ್ನ ಮತ್ತು ಜನರ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರಲು ಯಾರಿಗೂ ಅಧಿಕಾರ ಇಲ್ಲ. ಸಮಾಜಕ್ಕಾಗಿ ಮಿಡಿಯುವ ಮನಸ್ಸುಗಳೆಲ್ಲ ಸೇರಿಕೊಂಡು ಜೊತೆ ಜೊತೆ ಫೌಂಡೇಷನ್ ಮೂಲಕ ಸಮಾಜ ಮುಖಿ ಕೆಲಸ ಮಾಡುತ್ತಿದ್ದೇವೆ.

- ಜನರು ಪಟ್ಟಾಭಿಷೇಕ ಮಾಡಿದ ರಾಜನನ್ನು ಬೀದಿಗೂ ತಂದು ಬಿಡುತ್ತಾರೆ

- ನನಗೆ ವೈಯಕ್ತಿಕ ಮತ್ತು ರಾಜಕೀಯವಾಗಿ ಯಾರೂ ವೈರಿಗಳಿಲ್ಲ. ನಾನು ಸಾಧಾರಣ ಮಹಿಳೆ

- ನಮ್ಮ ಸಮಾಜ ಸೇವೆ ಕಾರ್ಯಕ್ಕೆ ತಾಲೂಕು ಆಡಳಿತ, ಅಧಿಕಾರಿಗಳು ಹಾಗೂ ಶಾಸಕರಿಂದ ಅಡ್ಡಿ ಆಗಬಾರದು ಕನ್ನಡಪ್ರಭ ವಾರ್ತೆ ರಾಮನಗರ

ನನ್ನ ಮತ್ತು ಜನರ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಕಾಣದ ಕೈಗಳು ಮಾಡುತ್ತಿವೆ. ಆ ಕಾರಣಕ್ಕಾಗಿಯೇ ನಾವು ಆಯೋಜನೆ ಮಾಡುತ್ತಿರುವ ಸಮಾಜ ಮುಖಿ ಕಾರ್ಯಗಳಿಗೆ ತಡೆಯೊಡ್ಡುತ್ತಿದ್ದಾರೆ. ಜನರು ಒಬ್ಬ ವ್ಯಕ್ತಿಯನ್ನು ರಾಜನಾಗಿ ಪಟ್ಟಾಭಿಷೇಕ ಮಾಡುತ್ತಾರೆ, ಅದೇ ಜನರು ರಾಜನನ್ನು ಬೀದಿಗೆ ತಂದು ಬಿಡುತ್ತಾರೆ ಎಂಬುದನ್ನು ಮರೆಯಬಾರದು ಎಂದು ನಿಶಾ ಯೋಗೇಶ್ವರ್ ಅವರು ತಂದೆ ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಪರೋಕ್ಷ ಟಾಂಗ್ ನೀಡಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮತ್ತು ಜನರ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರಲು ಯಾರಿಗೂ ಅಧಿಕಾರ ಇಲ್ಲ. ಸಮಾಜಕ್ಕಾಗಿ ಮಿಡಿಯುವ ಮನಸ್ಸುಗಳೆಲ್ಲ ಸೇರಿಕೊಂಡು ಜೊತೆ ಜೊತೆ ಫೌಂಡೇಷನ್ ಮೂಲಕ ಸಮಾಜ ಮುಖಿ ಕೆಲಸ ಮಾಡುತ್ತಿದ್ದೇವೆ. ಆದರೆ, ಚನ್ನಪಟ್ಟಣ ತಾಲೂಕು ನಾಗವಾರದಲ್ಲಿ ಆರೋಗ್ಯ ತಪಾಸಣಾ ಶಿಬಿರಕ್ಕೆ ಅಡ್ಡಿ ಪಡಿಸಿರುವುದನ್ನು ನೋಡಿದರೆ ಕಾಣದ ಕೈಗಳಿಂದ ನನ್ನ ಧೃತಿಗೆಡಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

ನಾಗವಾರ ಸಾರ್ವಜನಿಕ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಅಕ್ಟೋಬರ್ 31ರಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ಅಕ್ಟೋಬರ್ 9ರಂದು ಅನುಮತಿ ಸಿಕ್ಕಿತ್ತು. ಆದರೆ, ಅ.30ರಂದು ಮಧ್ಯಾಹ್ನ ನೀತಿ ಸಂಹಿತೆ ನೆಪವೊಡ್ಡಿ ಶಿಬಿರಕ್ಕೆ ನೀಡಿದ್ದ ಅನುಮತಿ ರದ್ದು ಪಡಿಸಿದರು. ತಕ್ಷಣವೇ ಜಿಲ್ಲಾಧಿಕಾರಿ ಭೇಟಿಯಾಗಿ ಚರ್ಚೆ ನಡೆಸಿದಾಗ ಅವರು ಅನುಮತಿ ನೀಡಿದರು. ಅನುಮತಿ ರದ್ದು ಪಡಿಸಿದ ಹಿಂದೆ ಯಾರ ಕೈವಾಡ ಇದೆ ಎಂದು ಪ್ರಶ್ನಿಸಿದರು.--------------------------

...ಕೋಟ್ ...ನನಗೆ ರಾಜಕಾರಣಕ್ಕೆ ಬರುವ ಆಲೋಚನೆ ಇಲ್ಲ. ರಾಜಕಾರಣ ಮಾಡಲೇ ಬೇಕೆಂದರೆ ರಾಜ್ಯದಲ್ಲಿ 224 ಕ್ಷೇತ್ರಗಳಿವೆ. ಯಾವುದಾದರು ಒಂದು ಕ್ಷೇತ್ರಕ್ಕೆ ಹೋಗಿ ರಾಜಕಾರಣ ಮಾಡಬಹುದು. ನಾನು ಚನ್ನಪಟ್ಟಣದಲ್ಲಿ ಹುಟ್ಟಿ ಬೆಳೆದವಳು. ಇಲ್ಲಿನ ಜನರ ಕಷ್ಟ ಸುಖಗಳ ಅರಿವಿದೆ. ಆ ಉದ್ದೇಶದಿಂದ ಚನ್ನಪಟ್ಟಣದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆ.

- ನಿಶಾ ಯೋಗೇಶ್ವರ್ , ಶಾಸಕ ಸಿ.ಪಿ.ಯೋಗೇಶ್ವರ್ ಪುತ್ರಿ.--------------

1ಕೆಆರ್ ಎಂಎನ್ 3.ಜೆಪಿಜಿ

ನಿಶಾ ಯೋಗೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ