ಕನ್ನಡಪ್ರಭ ವಾರ್ತೆ ವಿಜಯಪುರ
ಅನುದಾನಿತ ಶಾಲಾ ಶಿಕ್ಷಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ಪಿಂಚಣಿ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಭರವಸೆ ನೀಡಿದರು.ಬಬಲೇಶ್ವರ ಬಾಪೂಜಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲೆ ಮತ್ತು ಬಬಲೇಶ್ವರ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಕರ ದಿನೋತ್ಸವ ಪ್ರಯುಕ್ತ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಅನುದಾನಿತ ಶಾಲಾ ಶಿಕ್ಷಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ೨೦೦೬ ರಿಂದ ನೇಮಕವಾದ ಶಿಕ್ಷಕರಿಗೆ ಸರ್ಕಾರ ಒಪಿಎಸ್ ಪಿಂಚಣಿ ಕೊಟ್ಟಲ್ಲಿ ಎನ್‌ಪಿಎಸ್ ಪಿಂಚಣಿ ಸೌಲಭ್ಯ ನೀಡಿಲ್ಲ. ಹೀಗಾಗಿ ಅವರು ನಿವೃತ್ತಿಯಾದ ಮೇಲೆ ಹೇಗೆ ಜೀವನ ಸಾಗಿಸಬೇಕು. ಅವರಿಗೆ ನಾನು ಪಿಂಚಣಿ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಗುಣದಾಳ ಕಲ್ಯಾಣಿಶ್ವರ ಹಿರೇಮಠದ ಡಾ.ವಿವೇಕಾನಂದ ದೇವರು ಮಾತನಾಡಅವರು,ಶಾಲೆ ಶಿವಾಲಯ ವಿದ್ದ ಹಾಗೆ ಮಗುವೇ ದೇವರು ಗುರುಗಳೇ ಅರ್ಚಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಧಾರವಾಡ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಗುರು ದೇವೋಭವ ಎನ್ನುವಂತೆ ಶಿಕ್ಷಕರಿಂದ ಮಾತ್ರ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ವಿ.ಎನ್. ಬಿರಾದಾರ ಮಾತನಾಡಿ, ರಾಜ್ಯದಲ್ಲಿ ಕನ್ನಡ ಶಾಲೆಗಳ ಮಕ್ಕಳ ದಾಖಲಾತಿ ಕಡಿಮೆಯಾಗಿದೆ. ಸರ್ಕಾರ ಸಾಕಷ್ಟು ಸಹಾಯ ಮಾಡಿದರೂ ಮಕ್ಕಳ ದಾಖಲಾತಿಯಲ್ಲಿ ಬದಲಾವಣೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಅನುದಾನಿತ ಶಾಲೆಗಳ ರಾಜ್ಯಾಧ್ಯಕ್ಷ ಎನ್.ರಾಜಗೋಪಾಲ ಮಾತನಾಡಿ, ಸರ್ಕಾರ ಕನ್ನಡ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು. ಇಲ್ಲವೆಂದರೆ ಕನ್ನಡ ಶಾಲೆಗಳು ನಶಿಸಿ ಹೋಗುತ್ತವೆಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಬಸನಗೌಡ ಬಿರಾದಾರ, ಬಿಸ್ಮಿಲ್ಲಾ ರಹಿಮಾನ ಸಿಕ್ಕಲಗಾರ, ಬಸವರಾಜ ಮಾಡ್ಯಾಳ, ಎಚ್.ಎಂ. ಬೋರಾವತ, ಚಂದ್ರಶೇಖರ ಲಮಾಣಿ, ಕಮಲಾ ಕೊಟ್ಯಾಳ, ಎಂ.ಜಿ.ಚೌಧರಿ, ಪ್ರಕಾಶ ಕಟ್ಟಿಮನಿ, ನಾಗಪ್ಪ ಬೇನೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮತ್ತು ೨೦೨೩-೨೪ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದೇಶ ಸೇವೆಗೈದು ನಿವೃತ್ತರಾದ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.ಡಾ. ಸರ್ವಪಲ್ಲಿ ರಾಧಾಕೃಷ್ಣನರವರ ಭಾವಚಿತ್ರದ ಮೆರವಣಿ ಬಬಲೇಶ್ವರ ಮಹಾತ್ಮಾ ಗಾಂಧಿ ವೃತ್ತದಿಂದ ಮೆರವಣಿಗೆ ವಿದ್ಯಾರ್ಥಿನಿಯರು ಡೊಳ್ಳು ಕುಣಿತದ ವಾದ್ಯ ಮೇಳದೊಂದಿಗೆ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಗಣ್ಯರು ಸಾಗಿದರು.
ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತಪ್ಪ, ಶಿವಾನಂದ ಹಿರೇಕುರಬರ, ಟಿ.ರವಿಕುಮಾರ, ಎನ್.ಎಚ್.ನಾಗೂರ, ವಪ್ಪಾರಿ, ರಂಜಿತ ಬಾಬರ, ಅಶೋಕಗೌಡ ಮೇಲಾಶಂಕರ, ಸಂಗಪ್ಪ, ತಮಗೊಂಡ, ಶ್ರೀಶೈಲಗೌಡ ಬಿ.ಪಾಟೀಲ, ವಿ.ಎಸ್.ಕಳಸಗೊಂಡ, ವಿ.ಎಸ್.ಪಾಟೀಲ, ಗಿರೀಶ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ರೋಹಿಣಿ ಚವ್ಹಾಣ ಮುಂತಾದವರು ಇದ್ದರು.------------ಕೋಟ್............
ಸಾಹಿತಿ ಶಂ.ಗು.ಬಿರಾದಾರ ಅವರ ನಾವು ಎಳೆಯರು, ನಾವು ಗೆಳೆಯರು ಹೃದಯ ಹೂವಿನ ಹಂದರ ಎಂಬ ಕವಿತೆಯನ್ನು ಮಕ್ಕಳ ನಾಡಗೀತೆಯನ್ನಾಗಿ ಮಾಡಿ ಪ್ರತಿದಿನ ಮಕ್ಕಳು ಶಾಲೆಯಲ್ಲಿ ಅದನ್ನು ಹಾಡುವಂತಾಗಬೇಕು. ಇಂದಿನ ಮಕ್ಕಳಿಗೆ ಅಂತಹ ಗೀತೆಯ ಅವಶ್ಯಕತೆ ಇದೆ. ಈ ಗೀತೆಯನ್ನು ನಿರಂತರ ಶಾಲೆಯಲ್ಲಿ ಹಾಡುವಂತಾಗಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳತ್ತದೆ.- ಸಂಗಮೇಶ ಬಬಲೇಶ್ವರ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ