ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ಪಟ್ಟಣದ ನ್ಯಾಯಾಲಯದ ಮುಂಭಾಗ ತಾಲೂಕು ವಕೀಲರ ಸಂಘದ ವತಿಯಿಂದ ಬುಧವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಯಳಂದೂರುಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ಪಟ್ಟಣದ ನ್ಯಾಯಾಲಯದ ಮುಂಭಾಗ ತಾಲೂಕು ವಕೀಲರ ಸಂಘದ ವತಿಯಿಂದ ಬುಧವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರು ಪ್ರತಿಭಟನೆ ನಡೆಸಿದರು.ಹಿರಿಯ ವಕೀಲ ಬಸವಟ್ಟಿ ಮಹದೇವಸ್ವಾಮಿ ಮಾತನಾಡಿ, ಸನಾತನ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ನ್ಯಾಯಾಧೀಶರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಸಂವಿಧಾನ ವಿರೋಧಿಯಾಗಿದೆ. ಮುಖ್ಯನಾಯಾಧೀಶರಾದ ಬಿ.ಆರ್. ಗವಾಯಿ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸನಾತನ ಧರ್ಮ ಎಂದರೆ ಚತುರ್ವಣ ವ್ಯವಸ್ಥೆಯೇ, ಮನುಧರ್ಮ ಶಾಸ್ತ್ರವೇ, ಸುಪ್ರೀಂ ಕೋರ್ಟ್ ಈ ಹಿಂದೆಯೇ ಹಿಂದು ಧರ್ಮವು ಧರ್ಮವೇ ಅಲ್ಲ ಇದೊಂದು ಜೀವನ ವಿಧಾನ ಎಂದು ಹೇಳಿದೆ.
ಪ್ರತಿ ಧರ್ಮಕ್ಕೂ ಧರ್ಮಗುರು ಉಂಟು. ಹಿಂದು ಧರ್ಮದ ಹೆಸರಿನಲ್ಲಿ ಕೆಲವರು ಸಮಾಜ ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಸಂವಿಧಾನ ಪ್ರಕಾರ ಮನುಷ್ಯ ಮನಷ್ಯನಾಗಿ ನೋಡುವುದೇ ಧರ್ಮವಾಗಿದೆ. ಈ ಕೃತ್ಯ ಸಂವಿಧಾನ ವಿರೋಧಿ, ದೇಶ ದ್ರೋಹಿ ಕೃತ್ಯ, ನ್ಯಾಯಾಂಗ ನಿಂದನೆ ಕೆಲಸವಾಗಿದೆ. ಆತನ ವಿರುದ್ಧಶಿಕ್ಷೆಯಾಗಬೇಕು. ಆತನನ್ನು ದೇಶದಿಂದ ಗಡೀಪಾರು ಮಾಡಬೇಕು. ಉಗ್ರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಎಂ. ರಾಜಣ್ಣ ಮಾತನಾಡಿ, ತಾಲೂಕು ವಕೀಲರ ಸಂಘದ ವತಿಯಿಂದ ಈ ಕೃತ್ಯವನ್ನು ಖಂಡಿಸಿ ನಾವು ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟಿಸುತ್ತಿದ್ದೇವೆ. ಇದು ಘೋರ ಅಪರಾಧವಾಗಿದೆ. ಕಾನೂನಿನ ಚೌಕಟ್ಟು ಅರಿತ ವ್ಯಕ್ತಿ ಈ ಕೃತ್ಯ ಮಾಡಿರುವುದು ಅತ್ಯಂತ ದುರಂತವಾಗಿದೆ. ಇದನ್ನು ಖಂಡಿಸಿ ಈತನ ವಿರುದ್ಧ ಕಾನೂನು ಕರಮ ವಹಿಸಬೇಕು ಎಂದು ನಾವು ತಹಸೀಲ್ದಾರ್ ಮೂಲಕ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದರು.ವಕೀಲರ ಸಂಘದ ಉಪಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಕುಮಾರಸ್ವಾಮಿ, ಪಿ. ನಾಗರಾಜು, ಅಂಬಳೆ, ಸಿ.ಎಂ. ಮಹದೇವಸ್ವಾಮಿ, ಅಂಬಳೆ ಸಿದ್ದರಾಜು, ಕೆ.ಬಿ. ಶಶಿಧರ್, ಸಿ.ಎನ್. ನಾಗರಾಜು, ಶಾಂತರಾಜು, ಎಂ. ರವೀಶ್, ಮಹದೇಶ್‌ಕುಮಾರ್, ಸಂಪತ್ತು, ಎಂ.ಎನ್. ನಾಗರಾಜು, ಅಶ್ವಿನ್‌ಕುಮಾರ್, ಶ್ರೀನಿವಾಮೂರ್ತಿ, ಸಿ. ನಂಜುಂಡಸ್ವಾಮಿ, ಎಂ. ಕುಮಾರಸ್ವಾಮಿ, ನಾಗರತ್ನ, ಚಂದನ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.