ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಅ.೨೪, ೨೫ರಂದು ೨ನೇ ಅಂತಾರಾಷ್ಟ್ರೀಯ ಬೌದ್ದ ಸಮ್ಮೇಳನ ಆಯೋಜಿಸಲಾಗಿದ್ದು, ಎರಡು ದಿನಗಳ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಸಂವಾದಗೋಷ್ಠಿ, ಧಮ್ಮ ಕವಿಗೋಷ್ಠಿ, ಮಕ್ಕಳ ಮೈತ್ರಿ, ಮಹಿಳಾ ದುಂಡುಮೇಜಿನ ಸಭೆ, ರಾಜ್ಯದ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ದಸರಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕಳೆದ ವರ್ಷ ಮೈಸೂರಿನಲ್ಲಿ ಒಂದನೇ ಅಂತಾರಾಷ್ಟ್ರೀಯ ಬೌದ್ದ ಸಮ್ಮೇಳನ ನಡೆಸಲಾಗಿದ್ದು, ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು, ಎರಡನೇ ಕಾರ್ಯಕ್ರಮವಾಗಿ ಚಾಮರಾಜನಗರದಲ್ಲಿ ನಡೆಯುತ್ತಿದ್ದು ಪ್ರತಿವರ್ಷ ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ನಡೆಯಲಿದೆ ಎಂದರು.ಅ.೨೪ರಂದು ಬೆಳಿಗ್ಗೆ ೭ಕ್ಕೆ ರಾಮಸಮುದ್ರದ ಅಂಬೇಡ್ಕರ್ ಪುತ್ಥಳಿ ಮುಂಭಾಗ ಧಮ್ಮ ನಡಿಗೆ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡುವರು. ಕೊಲಂಬೋ ವಿವಿನಿಲಯದ ಶೀಲವಂತ ಮಹಾಥೋರೋ ಬಂತೇಜಿ, ಟಿ, ನರಸೀಪುರ ನಳಂದ ಬೌದ್ದವಿಹಾರದ ಬೋದಿರತ್ನ ಬಂತೇಜಿ ದೀಪ ಬೆಳಗಿಸುವರು, ಮನೋರಖ್ಖಿತಬಂತೇಜಿ, ಶಾಸಕ ಎ.ಆರ್.ಕೃಷ್ಣಮೂರ್ತಿ ಧಮ್ಮ ಧ್ಬಜಾರೋಹಣ ನೆರವೇರಿಸುವರು ಎಂದರು.
ಅ. ೨೫ರಂದು ರಂದು ಲಾವೋಸ್‌ನ ಪೂಜ್ಯ ಕ್ಯಾಂಡಿ ಸೌಟ ಬಂತೇಜಿ ರವರು ದಮ್ಮ ಸಾನಿಧ್ಯ ವಹಿಸಲಿದ್ದು, ಸಂಸದ ಸುನಿಲ್ ಬೋಸ್ ರವರು ಧ್ವಜರೋಹಣ ನೆರವೇರಿಸಲಿದ್ದಾರೆ.
ಅ.೨೫ರಂದು ಬೆಳಿಗ್ಗೆ ೧೧.೩೦ಕ್ಕೆ ಎರಡನೇ ದಿನದ ಸಮ್ಮೇಳನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಸಂಜೆ ೪ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡುವರು. ಬುದ್ದಪ್ರಜ್ಞ ವೇದಿಕೆಯಲ್ಲಿ ಮ.೨ಕ್ಕೆ ಯುವದುಂಡುಮೇಜಿನ ಸಭೆ ನಡೆಯಲಿದೆ. ಎರಡು ದಿನಗಳ ಸಮ್ಮೇಳನದಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆಯ ವಿವಿಧ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿವೆ ಎಂದರು.