ಅತ್ತೂರು ಬಸಿಲಿಕಾ ಮಹೋತ್ಸವ: ಹರಿದು ಬಂದ ಭಕ್ತ ಸಾಗರ

KannadaprabhaNewsNetwork |  
Published : Jan 28, 2025, 12:45 AM IST
ಬೆಳಕು ಮತ್ತು ಅಲಂಕಾರಗಳಿಂದ ಆಕರ್ಷಕವಾಗಿ ಸಿಂಗಾರಗೊಂಡಿದ ಕಾರ್ಕಳ  ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾ | Kannada Prabha

ಸಾರಾಂಶ

ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೆಳಕು ಮತ್ತು ಅಲಂಕಾರಗಳಿಂದ ಆಕರ್ಷಕವಾಗಿ ಸಿಂಗಾರಗೊಂಡಿದ್ದವು. ಸರ್ವಧರ್ಮ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ವಿಧಿಗಳಲ್ಲಿ ವಿಭಿನ್ನ ಧರ್ಮಗಳ ಜನರು ಭಾಗವಹಿಸಿದರು. ಭಕ್ತರು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಿ, ತಮ್ಮ ಬಿನ್ನಹಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವ ಹಿನ್ನೆಲೆ ಸೋಮವಾರ ಸಾವಿರಾರು ಭಕ್ತರು ಆಗಮಿಸಿದ್ದು, ಹರಕೆ ಹಾಗೂ ಬಿನ್ನಹಗಳನ್ನು ಸಲ್ಲಿಸಿದರು. ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಮತ್ತು ಯಕ್ಷಗಾನದ ಪ್ರದರ್ಶನ ದಿನದ ಮುಖ್ಯ ಆಚರಣೆಯಾಗಿತ್ತು.

ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೆಳಕು ಮತ್ತು ಅಲಂಕಾರಗಳಿಂದ ಆಕರ್ಷಕವಾಗಿ ಸಿಂಗಾರಗೊಂಡಿದ್ದವು. ಸರ್ವಧರ್ಮ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ವಿಧಿಗಳಲ್ಲಿ ವಿಭಿನ್ನ ಧರ್ಮಗಳ ಜನರು ಭಾಗವಹಿಸಿದರು. ಭಕ್ತರು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಿ, ತಮ್ಮ ಬಿನ್ನಹಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದರು.ಈ ವರ್ಷದ ಮಹೋತ್ಸವದ ವಿಷಯ ‘ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ’ (ರೋಮಾ 5:5) ಆಗಿದ್ದು, ಮೂರು ಬಲಿಪೂಜೆಗಳು ನಡೆದವು. ಪ್ರಮುಖ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಶ್ರೇಷ್ಠಗುರು ಮೊನ್ಸಿಜ್ಞೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅರ್ಪಿಸಿದರು. ಪ್ರಭುವಿನಲ್ಲಿ ಭರವಸೆ ಇರಿಸಿ ಬದುಕನ್ನು ಆಶಾದಾಯಕವಾಗಿ ಬದುಕಬೇಕು. ಕ್ರಿಸ್ತನಲ್ಲಿ ಒಂದಾಗಿ ಭರವಸೆಯ ಯಾತ್ರಾರ್ಥಿಗಳಾಗಿ ನಮ್ಮ ಹೆಜ್ಜೆಯನ್ನಿಡುತ್ತಾ ಸಾಗಬೇಕೆಂದು ಬೋಧಿಸಿದರು.ನಸುಕಿನಿಂದಲೇ ವಿವಿಧ ಸ್ಥಳಗಳಿಂದ ಭಕ್ತರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಂಜೆ ಸಂತ ಲಾರೆನ್ಸ್ ಅವರ ಜೀವನ ಆಧಾರಿತ ‘ಲಾರೆನ್ಸ್ ಮಹಾತ್ಮೆ’ ಯಕ್ಷಗಾನ ಪ್ರದರ್ಶಿಸಲಾಯಿತು.ಪುಷ್ಕರಣಿಗೆ ಭೇಟಿ, ಮೊಂಬತ್ತಿ ಬೆಳಗುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಬಲಿಪೂಜೆ, ಪಾಪ ನಿವೇದನೆ ಸಂಸ್ಕಾರ ಮತ್ತು ಪುಷ್ಪತೀರ್ಥದಲ್ಲಿ ಭಾಗವಹಿಸಲು ಭಕ್ತಸಾಗರ ಮುಗಿಬಿದ್ದಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ
ಚನ್ನಬಸವ ಶ್ರೀ ಇಡೀ ಮನುಕುಲ ಪ್ರೀತಿಸುವ ಗುಣದವರು