ಉಡುಪಿ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಜನೆ ಆಡಿಯೋ ಬಿಡುಗಡೆ

KannadaprabhaNewsNetwork | Published : Apr 1, 2025 12:45 AM

ಸಾರಾಂಶ

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 125 ದಿನಗಳ ಅಖಂಡ ಹರಿ ನಾಮ ಸಂಕೀರ್ತನೆಯ ಸುಸಂದರ್ಭದಲ್ಲಿ ಸದ್ಗುರು ಪ್ರಾತಃಸ್ಮರಣೀಯ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವ ಹಾಗೂ ನೂತನ ವಿಶ್ವಾವಸು ನಾಮ ಸಂವತ್ಸರದ ಯುಗಾದಿಯ ಪರ್ವಕಾಲದಲ್ಲಿ ಭಾನುವಾರ ರಾತ್ರಿ ‘ಅಮ್ಕಾ ಸೌಭಾಗ್ಯ ಧನ’ ಮತ್ತು ‘ರಜತ ಪೀಠ ವಾಸ ಶ್ರೀ ಲಕ್ಷ್ಮೀ ವೆಂಕಟೇಶ’ ಎಂಬ ಎರಡು ಸಂಕೀರ್ತನೆಯು ಆಡಿಯೋ ಹಾಗೂ ಕರಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 125 ದಿನಗಳ ಅಖಂಡ ಹರಿ ನಾಮ ಸಂಕೀರ್ತನೆಯ ಸುಸಂದರ್ಭದಲ್ಲಿ ಸದ್ಗುರು ಪ್ರಾತಃಸ್ಮರಣೀಯ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವ ಹಾಗೂ ನೂತನ ವಿಶ್ವಾವಸು ನಾಮ ಸಂವತ್ಸರದ ಯುಗಾದಿಯ ಪರ್ವಕಾಲದಲ್ಲಿ ಭಾನುವಾರ ರಾತ್ರಿ ‘ಅಮ್ಕಾ ಸೌಭಾಗ್ಯ ಧನ’ ಮತ್ತು ‘ರಜತ ಪೀಠ ವಾಸ ಶ್ರೀ ಲಕ್ಷ್ಮೀ ವೆಂಕಟೇಶ’ ಎಂಬ ಎರಡು ಸಂಕೀರ್ತನೆಯು ಆಡಿಯೋ ಹಾಗೂ ಕರಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.

ಶ್ರೀ ದೇವಳದ ಆಡಳಿತ ಮೊಕ್ತೇಸರ ವಿಠ್ಠಲದಾಸ ಶೆಣೈ ಅವರು ಈ ಕೃತಿಗಳನ್ನು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ದೇವಳದ ಪ್ರಧಾನ ಅರ್ಚಕರಾದ ವೇದ ಮೂರ್ತಿ ವಿನಾಯಕ ಭಟ್ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಮಾಡಿದರು.ಈ ಸಂದರ್ಭ ದೇವಳದ ಭಜನಾ ಮಂಡಳಿ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಗಿಂಡಿ ನರ್ತನ ಕಲಾವಿದ ನಾಡಾ ಸತೀಶ್ ನಾಯಕ್, ಶಿಕ್ಷಣ ಅಧಿಕಾರಿ ಅಶೋಕ್ ಕಾಮತ್, ಅಲೆವೂರು ಗಣೇಶ್ ಕಿಣಿ, ವಿವೇಕಾನಂದ ಶೆಣೈ, ಲೋಹಿತಾಕ್ಷ ಪಡಿಯಾರ ಮತ್ತು ಸಂಕೀರ್ತನೆಗಳ ಪ್ರಾಯೋಜಕರಾದ ಅನಂತ ವೈದಿಕ ಕೇಂದ್ರದ ಪ್ರಧಾನ ನಿರ್ದೇಶಕ ಚೇಂಪಿ ರಾಮಚಂದ್ರ ಅನಂತ ಭಟ್, ವಿದ್ವಾನ್ ಹರಿಪ್ರಸಾದ್ ಶರ್ಮ ದೇವಳದ ವೈದಿಕರು ಹಾಗೂ ಭಕ್ತ ಮಹಾಜನರು ಉಪಸ್ಥಿತರಿದ್ದರು.ಕಟಪಾಡಿಯ ಸತ್ವಿಜಯ ಭಟ್ ರಚಿಸಿ ರಾಗ ಸಂಯೋಜನೆ ಮಾಡಿರುವ ‘ಸುಧೀಂದ್ರ ತೀರ್ಥ ಗುರು ಶತ ನಮನ ಪಾದ ಸೇವನ, ಆಮ್ಕಾ ಸೌಭಾಗ್ಯ ಧನ’ ಮತ್ತು ‘ರಜತ ಪೀಠ ವಾಸ ಶ್ರೀ ಲಕ್ಷ್ಮೀ ವೆಂಕಟೇಶ’ ಎಂಬ ಕೃತಿಗಳನ್ನು ಮೈಸೂರಿನ ಹೆಸರಾಂತ ಗಾಯಕ ಉಪ್ಪುಂದ ರಾಜೇಶ ಪಡಿಯಾರ್ ಹಾಡಿದ್ದಾರೆ. ಸತ್ವಿಜಯ ಭಟ್ ಅವರನ್ನು ದೇವಳದ ವತಿಯಿಂದ ಪ್ರಸಾದ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

Share this article