ಕನ್ನಡಪ್ರಭ ವಾರ್ತೆ ಬೆಳಗಾವಿ
ಉತ್ಸವದಲ್ಲಿ ನೃತ್ಯ, ನಾಟಕ, ಸಂಗೀತ, ಇ-ಕ್ರೀಡೆ, ಫ್ಯಾಷನ್ ಶೋ, ಸಾಹಿತ್ಯ ಸ್ಪರ್ಧೆಗಳು, ಛಾಯಾಗ್ರಹಣ, ಪ್ರಶ್ನೋತ್ತರ, ಲಲಿತಕಲೆ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆದವು. ಬೆಳಗಾವಿ, ಬೆಂಗಳೂರು ಮತ್ತು ಸುತ್ತ-ಮುತ್ತಲಿನ ನಗರಗಳಿಂದ 3,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕ್ಯಾಂಪಸ್‌ನ್ನು ಉತ್ಸಾಹಭರಿತ ವಾತಾವರಣದಿಂದ ತುಂಬಿಸಿದರು.AURA 2K26 ನ ಪ್ರಮುಖ ಆಕರ್ಷಣೆಯೆಂದರೇ ಪ್ರಸಿದ್ಧ ಪ್ಲೇ ಬ್ಯಾಕ್ ಗಾಯಕ ಮೋಹಿತ್ ಚೌಹಾನ್ ಅವರ ಸಂಗೀತ ಕಚೇರಿ ಜಿಐಟಿ ಕ್ಯಾಂಪಸ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮವು ಭಾರೀ ಪ್ರೇಕ್ಷಕರನ್ನು ಆಕರ್ಷಿಸಿ ಉತ್ಸವಕ್ಕೆ ಅದ್ಧೂರಿ ಅಂತ್ಯ ನೀಡಿತು.ಸಾಮಾನ್ಯ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಬೆಳಗಾವಿಯ ಕೆಎಲ್‌ಎಸ್ ಡಾ.ಎಂ.ಎಸ್.ಶೇಶಗಿರಿ ಎಂಜಿನಿಯರಿಂಗ್ ಕಾಲೇಜಗೆ ದೊರೆಯಿತು. ಟ್ರೋಫಿಯನ್ನು ಮೋಹಿತ್ ಚೌಹಾನ್ ಮತ್ತು ಕೆಎಲ್‌ಎಸ್ ನಿರ್ವಹಣಾ ಮಂಡಳಿ ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ಕೆಎಲ್‌ಎಸ್‌ನ ಅಧ್ಯಕ್ಷ ಪಿ.ಎಸ್.ಸಾವ್ಕರ್, ಉಪಾಧ್ಯಕ್ಷರಾದ ಆರ್.ಬಿ.ಭಂಡಾರೆ, ಡಿ.ವಿ.ಕುಲಕರ್ಣಿ, ಕಾರ್ಯದರ್ಶಿಗಳಾದ ವಿ.ಎಂ.ದೇಶಪಾಂಡೆ, ಎಸ್.ವಿ.ಗಣಾಚಾರಿ, ಕೆಎಲ್‌ಎಸ್ ಅಧ್ಯಕ್ಷ ಎ.ಕೆ.ತಾಗರೆ, ಕೆಎಲ್‌ಎಸ್-ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಆರ್.ಕೆ.ಬೆಳಗಾವಂಕರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಪ್ರಾಂಶುಪಾಲ ಎಂ.ಎಸ್.ಪಾಟೀಲ, ಡೀನ್ ಎಸ್.ಪಿ.ದೇಶಪಾಂಡೆ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ.ಅಪೂರ್ವ ಅಧ್ಯಾಪಕ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು. AURA 2K26 ಪ್ರತಿಭೆ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ವೈವಿಧ್ಯದ ಅದ್ಭುತ ಉತ್ಸವವಾಗಿ ಹೊರಹೊಮ್ಮಿತು.