ರ್‍ಯಾಪಿಡೋ ಬೈಕ್‌ ಸೇವೆಗೆ ಆಟೋ ಚಾಲಕರ ವಿರೋಧ

KannadaprabhaNewsNetwork |  
Published : Feb 14, 2025, 12:30 AM ISTUpdated : Feb 14, 2025, 12:31 AM IST
ಪೋಟೋ: 13ಎಸ್‌ಎಂಜಿಕೆಪಿ04 | Kannada Prabha

ಸಾರಾಂಶ

ಶಿವಮೊಗ್ಗ: ದ್ವಿಚಕ್ರ ವಾಹನದಿಂದ ಪ್ರಯಾಣ ಸೇವೆ ಒದಗಿಸಲು ಅವಕಾಶವಿಲ್ಲದಿದ್ದರೂ ಶಿವಮೊಗ್ಗ ನಗರದಲ್ಲಿ ರ್‍ಯಾಪಿಡೋ ಬೈಕ್‌ ಸೇವೆ ಒದಗಲಿಸು ಆಗಮಿಸಿದ್ದ ರ್‍ಯಾಪಿಡೋ ಬೈಕ್ ಸವಾರರ ವಿರುದ್ಧ ಆಟೋ ಚಾಲಕರು ತಿರುಗಿ ಬಿದ್ದಿದ್ದಾರೆ.

ಶಿವಮೊಗ್ಗ: ದ್ವಿಚಕ್ರ ವಾಹನದಿಂದ ಪ್ರಯಾಣ ಸೇವೆ ಒದಗಿಸಲು ಅವಕಾಶವಿಲ್ಲದಿದ್ದರೂ ಶಿವಮೊಗ್ಗ ನಗರದಲ್ಲಿ ರ್‍ಯಾಪಿಡೋ ಬೈಕ್‌ ಸೇವೆ ಒದಗಲಿಸು ಆಗಮಿಸಿದ್ದ ರ್‍ಯಾಪಿಡೋ ಬೈಕ್ ಸವಾರರ ವಿರುದ್ಧ ಆಟೋ ಚಾಲಕರು ತಿರುಗಿ ಬಿದ್ದಿದ್ದಾರೆ.ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿ ಬುಧವಾರ ರ್‍ಯಾಪಿಡೋ ಬೈಕ್ ವೊಂದು ಸಾರ್ವಜನಿಕರಿಗೆ ಬಾಡಿಗೆ ಸೇವೆ ನೀಡುತ್ತಿದ್ದುದನ್ನು ಕಂಡು ಸ್ಥಳೀಯ ಆಟೋ ಚಾಲಕರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗಾಗಲೇ ಆಟೋಗಳಿಗೆ ಪ್ರಯಾಣಿಕರಿಲ್ಲದೇ ನಾವು ಕಂಗಾಲಾಗಿದ್ದೇವೆ. ಪೆಟ್ರೋಲ್, ಡೀಸೆಲ್, ಬಿಡಿಭಾಗಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ಜೀವನ ನಿರ್ವಹಣೆಗೆ ಕಷ್ಟ ಸಾಧ್ಯವಾಗುತ್ತಿದೆ. ಬಾಡಿಗೆಯೇ ಕಡಿಮೆಯಾಗಿದ್ದು, ಇದರ ನಡುವೆ ಈ ರೀತಿ ಬಾಡಿಗೆ ಬೈಕ್ ಟ್ಯಾಕ್ಸಿಗಳು ಬಂದರೆ ಇನ್ನಷ್ಟು ತೊಂದರೆಯಾಗಲಿದೆ ಎಂದು ದುರ್ಗಿಗುಡಿ ಆರ್.ಎಂ.ಎಸ್. ಆಟೋ ನಿಲ್ದಾಣದ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಈಗಾಗಲೇ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇವು ಕಾರ್ಯನಿರ್ವಹಿಸುತ್ತಿವೆ. ಅಂತೆಯೇ ನಾವು ಶಿವಮೊಗ್ಗದಲ್ಲಿ ಕನಿಷ್ಠ ದರದಲ್ಲಿ ಸಾರ್ವಜನಿಕರಿಗೆ ಬಾಡಿಗೆ ಸೇವೆ ನೀಡುತ್ತಿದ್ದೇವೆ. ಆರಂಭದ ಎರಡು ಕಿ.ಮೀ.ವರೆಗೆ 20 ರು., ನಂತರದ ಎರಡು ಕಿ.ಮೀ.ವರೆಗೆ 30 ರು. ಬಾಡಿಗೆ ನಿಗದಿ ಮಾಡಿ ಓಡಿಸಲಾಗುತ್ತಿದೆ. ಇದರಿಂದ ನಮ್ಮಂತಹ ನಿರುದ್ಯೋಗಿ ಯುವಕರಿಗೆ ಕೆಲಸ ಸಿಕ್ಕಂತಾಗಿದ್ದು, ಜೀವನ ನಿರ್ವಹಣೆಗೆ ಅನುಕೂಲವಾಗಿದೆ. ಸಾರ್ವಜನಿಕರಿಗೂ ಒಳ್ಳೆಯದಾಗಿದೆ. ಆನ್‌ಲೈನ್‌ನಲ್ಲಿ ಗ್ರಾಹಕರು ಬುಕ್ ಮಾಡಿದ್ದರು. ಅದರ ಅನುಸಾರ ನಾನು ಇಲ್ಲಿಗೆ ಬಾಡಿಗೆ ಸೇವೆ ನೀಡಲು ಬಂದಿದ್ದೇನೆ ಎಂದು ಓಲಾ ರ್‍ಯಾಪಿಡೋ ಬೈಕ್ ಸವಾರ ತಿಳಿಸಿದ್ದಾನೆ.

ಆದರೂ ಬಾಡಿಗೆ ಮಾಡುವ ರ್‍ಯಾಪಿಡೋ ಬೈಕ್‌ಗಳು ತಮ್ಮದೇ ಖಾಸಗಿ ವೈಟ್ ಬೋರ್ಡ್ ಬೈಕ್‌ಗಳಲ್ಲಿ ಸೇವೆ ನೀಡುತ್ತಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ಇದಕ್ಕೆ ಶಿವಮೊಗ್ಗ ನಗರದಲ್ಲಿ ಅವಕಾಶವಿಲ್ಲ ಎಂದು ಹೇಳಿ ಇಬ್ಬರು ರ್‍ಯಾಪಿಡೋ ಚಾಲಕರನ್ನು ಜಯನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪೊಲೀಸರು ಸಾರಿಗೆ ಅಧಿಕಾರಿಗಳಿಂದ ಖಾಸಗಿ ವೈಟ್ ಬೋರ್ಡ್ ವಾಹನಗಳಿಗೆ ಈ ಸೇವೆ ಸಲ್ಲಿಸಲು ಅವಕಾಶವಿಲ್ಲವೆಂದು ತಿಳಿಸಿದಾಗ ಎರಡೂ ವಾಹನಗಳನ್ನೂ ಠಾಣಾಧಿಕಾರಿಗಳು ವಶಕ್ಕೆ ಪಡೆದು ಆಟೋ ಚಾಲಕರಿಗೆ ಲಿಖಿತ ದೂರು ನೀಡುವಂತೆ ಹೇಳಿ ಕಳಿಸಿದ್ದಾರೆ.ನಗರದಲ್ಲಿ ರ್‍ಯಾಪಿಡೋ ವಾಹನಗಳಿಗೆ ಅನುಮತಿ ನೀಡಿದಲ್ಲಿ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸುವುದಾಗಿ ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ