ವಾರದ ಬಳಿಕ ಚಿಕ್ಕಮಗಳೂರಿಗೆ ಬಂದ ಆಟೋ ಗ್ಯಾಸ್

KannadaprabhaNewsNetwork |  
Published : Apr 06, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಬರೋಬ್ಬರಿ ಒಂದು ವಾರದ ಬಳಿಕ ಆಟೋ ಗ್ಯಾಸ್ (ಎಲ್ ಪಿಜಿ) ಬಂಕ್ ಗೆ ಬಂದಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಆಟೋಗಳಿಗೆ ಗ್ಯಾಸ್‌ ಹಾಕುವ ಕೆಲಸ ಮಾಡಬೇಕಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆಯಲ್ಲಿ ವಿತರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬರೋಬ್ಬರಿ ಒಂದು ವಾರದ ಬಳಿಕ ಆಟೋ ಗ್ಯಾಸ್ (ಎಲ್ ಪಿಜಿ) ಬಂಕ್ ಗೆ ಬಂದಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಆಟೋಗಳಿಗೆ ಗ್ಯಾಸ್‌ ಹಾಕುವ ಕೆಲಸ ಮಾಡಬೇಕಾಯಿತು.

ನಗರದಲ್ಲಿ ಮೂರು ಆಟೋ ಗ್ಯಾಸ್ ಬಂಕ್ ಗಳಿದ್ದು, ಈ ಪೈಕಿ ಒಂದು ಸರ್ಕಾರಿ ಸ್ವಾಮ್ಯ ಮತ್ತು ಎರಡು ಖಾಸಗಿ ಬಂಕ್ ಇವೆ. ಬಹುತೇಕ ಒಂದು ವಾರದಿಂದ ಆಟೋ ಗ್ಯಾಸ್ ವಿತರಣೆ ಇಲ್ಲದೇ ಬಂದ್ ಆಗಿದ್ದವು.

ಒಂದು ವಾರದ ಬಳಿಕ ಭಾನುವಾರ ಚಿಕ್ಕಮಗಳೂರು ನಗರದ ಪಾರ್ವತಿಪುರದ ಇಂಡಿಯನ್ ಗ್ಯಾಸ್ ಬಂಕ್ ಗೆ ಸುಮಾರು ಮೂರು ಟನ್ ನಷ್ಟು ಗ್ಯಾಸ್ ಬಂದಿತ್ತು. ಹಲವು ದಿನಗಳ ಬಳಿಕ ನಗರಕ್ಕೆ ಗ್ಯಾಸ್ ಬಂದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ಆಟೋಗಳು ಸಾಲುಗಟ್ಟಿ ನಿಂತಿದ್ದವು. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆಯಲ್ಲಿ ಇಂಧನ ಹಾಕಬೇಕಾಯಿತು.

ಕಿಲೋಮೀಟರ್ ಗಟ್ಟಲೆ ಸಾಲು:

ನಗರದ ಮೂಡಿಗೆರೆ ರಸ್ತೆಯಲ್ಲಿ ಇರುವ ಬಂಕ್ ನಲ್ಲಿ ಗ್ಯಾಸ್ ಪೂರೈಕೆಯಾಗಿದ್ದರಿಂದ ಸುಮಾರು ಎರಡು ಕಿ.ಮೀ ಉದ್ದದಷ್ಟು ಆಟೋಗಳು ಸಾಲುಗಟ್ಟಿ ನಿಂತುಕೊಂಡ ದೃಶ್ಯ ಕಂಡು ಬಂತು.

₹700 ಗ್ಯಾಸ್ ನಿಗದಿ:

ನಗರದಲ್ಲಿ ಸರಿ ಸುಮಾರು 3 ಸಾವಿರ ಎಲ್ ಪಿಜಿ ಗ್ಯಾಸ್ ಆಟೋಗಳಿವೆ. ಭಾನುವಾರ ಕೇವಲ ಮೂರು ಟನ್ ಗ್ಯಾಸ್ ಬಂದಿದ್ದರಿಂದ ಪ್ರತಿ ಆಟೋಗೆ ಕೇವಲ ₹700 ಮೊತ್ತದ ಗ್ಯಾಸ್ ಹಾಕಲಾಯಿತು. ಈ ಪ್ರಕಾರ ನಗರದ ಸುಮಾರು‌ 400 ರಿಂದ 450 ಆಟೋಗೆ ಮಾತ್ರ ಭಾನುವಾರ ಗ್ಯಾಸ್ ಹಾಕಲು ಸಾಧ್ಯವಾಯಿತು.ಅರ್ಧ ಟ್ಯಾಕ್ ಗ್ಯಾಸ್:

ಪ್ರತಿ ಆಟೋ ಸುಮಾರು ₹1600 ಮೊತ್ತದ 16 ಕೆ.ಜಿ‌ ಎಲ್ ಪಿಜಿ ಸಂಗ್ರಹಿಸುವ ಸಾಮರ್ಥ್ಯ ವಿದ್ದರೂ ಅರ್ಥಕ್ಕಿಂದ ಕಡಿಮೆ ಪ್ರಮಾಣದ ಗ್ಯಾಸ್ ಹಾಕಲಾಯಿತು. ಈ ಗ್ಯಾಸ್ ನಿಂದ ಆಟೋಗಳು ಗರಿಷ್ಠ ಒಂದುವರೆ ದಿನದಿಂದ ಎರಡು ದಿನ ಮಾತ್ರ ಓಡಿಸಬಹುದಾಗಿದೆ ಎಂದು ಆಟೋ ಚಾಲಕರು ತಿಳಿಸಿದ್ದಾರೆ.

21 ಟನ್ ಗ್ಯಾಸ್ ಅಗತ್ಯ:

ನಗರದಲ್ಲಿ ಒಂದು ಬಾರಿ ಕೇವಲ ₹700 ಮೊತ್ತದ ಗ್ಯಾಸ್ ನೀಡುವುದಕ್ಕೆ ಕನಿಷ್ಠ 21 ಟನ್ ನಷ್ಟು ಗ್ಯಾಸ್ ಅಗತ್ಯವಿದೆ. ಭಾನುವಾರ ಕೇವಲ ಶೇ. 15 ರಿಂದ 20 ರಷ್ಟು ಮಾತ್ರ ಆಟೋಗಳಿಗೆ ಗ್ಯಾಸ್ ಲಭ್ಯವಾಗಿದೆ‌‌. ನಿರಂತರವಾಗಿ ಗ್ಯಾಸ್ ಬಂದರಷ್ಟೇ ಆಟೋಗಳಿಗೆ ಗ್ಯಾಸ್ ಸಮಸ್ಯೆ ಪರಿಹಾರವಾಗಲಿದೆ ಆಟೋ ಚಾಲಕರು ಹೇಳುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಭಾರತ ರಾಜಕಾರಣದಲ್ಲಿ ಪ್ರಾತಃ ಸ್ಮರಣೀಯರು
ಶೀಘ್ರ ಬಾಬು ಜಗಜೀವನರಾಮ್‌ ಭವನ ಕಾಮಗಾರಿ ಪೂರ್ಣ