ಆಟೋ ಪಲ್ಟಿ : ಮಹಿಳೆ ಸಾವು, ಐವರಿಗೆ ಗಾಯ

KannadaprabhaNewsNetwork |  
Published : Oct 22, 2024, 12:00 AM IST
ಈರಮ್ಮ, ಮೃತಪಟ್ಟ ಮಹಿಳೆ. | Kannada Prabha

ಸಾರಾಂಶ

Auto overturns: Woman killed, five injured

ಸುರಪುರ:

ಕೃಷಿ ಕೂಲಿ ಕಾಮಿರ್ಕಕರನ್ನು ತುಂಬಿಕೊಂಡು ಅತಿವೇಗವಾಗಿ ಬಂದ ಆಟೋವೊಂದು ರಸ್ತೆಯ ಪಕ್ಕದಲ್ಲಿ ನಿಂತಿದ್ದ ವಾಹನ್ ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಸಾವುನ್ನಪ್ಪಿದ್ದು, ಐವರಿಗೆ ಗಾಯವಾದ ಘಟನೆ ಕೆಂಭಾವಿ-ಸುರಪುರರ ರಾಜ್ಯ ಹೆದ್ದಾರಿಯ ಮಾಲಗತ್ತಿ ಗ್ರಾಮದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದೆ. ಮಾಲಗತ್ತಿ ಗ್ರಾಮದ ಈರಮ್ಮ ಪ್ರಭಯ್ಯ ಹಿರೇಮಠ (45) ಮೃತಪಟ್ಟವರು. ಎಂದಿನಂತೆ ಮಾಲಗತ್ತಿ ಗ್ರಾಮದಿಂದ ಬೆಳಿಗ್ಗೆ 9.30ರ ಸುಮಾರಿಗೆ ದೇವರಗೋನಾಲಗೆ ಕೃಷಿ ಕೆಲಸಕ್ಕೆ ಮಹಿಳೆಯರು ಆಟೋದಲ್ಲಿ ತೆರಳಿದ್ದಾರೆ. ಆಟೋ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ಹೆದ್ದಾರಿಯಲ್ಲಿ ನಿಂತಿದ್ದ ಮಹೇಂದ್ರ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ನೆಲಕ್ಕುರುಳಿ ಈರಮ್ಮ ಸ್ಥಳದಲ್ಲೇ ಮೃತಪಟ್ಟರೆ, ನಾಗಮ್ಮ, ನೀಲಮ್ಮ, ಮಲ್ಲಮ್ಮ, ಚಂದ್ರಕಲಾ, ನೀಲಮ್ಮ ಚಂದ್ರಶೇಖರ ಅವರಿಗೆ ಗಾಯಗಳಾಗಿವೆ. ಸುರಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆಟೋ ಚಾಲಕ ಪರಾರಿಯಾಗಿದ್ದಾನೆ. ಸಂಬಂಧಿಕ ಗುರುಸ್ವಾಮಿ ನೀಡಿದ ದೂರಿನನ್ವಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21ವೈಡಿಆರ್13: ಈರಮ್ಮ, ಮೃತಪಟ್ಟ ಮಹಿಳೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ