ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈದ್ಯಕೀಯ ವಿದ್ಯಾರ್ಥಿಗಳಿಗೆ ನೇರ ಪ್ರಸಾರದಲ್ಲಿ ಶರೀರ ಛೇದನ ತೋರಿಸುವುದು ಶ್ರೇಷ್ಠ ಕಲಿಕೆಗೆ ಸಹಾಯಕವಾಗುತ್ತದೆ ಎಂದು ಡಾ.ಬಿ.ಎಸ್. ಪ್ರಸಾದ್ ತಿಳಿಸಿದರು.ನಗರದ ಎಂ.ಆರ್. ಎನ್. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಶರೀರ ಚಿಂತನ -2024ರ ನೇರ ಪ್ರಸಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಎನ್ ಸಿಐಎಸ್ಎಂನ ಅಧ್ಯಕ್ಷ ಡಾ.ಬಿ.ಎಸ್. ಪ್ರಸಾದ್ ಅವರು, ಕಾಲೇಜಿನಲ್ಲಿ ನಡೆಯುತ್ತಿರುವ ನೇರ ಪ್ರಸಾರದಲ್ಲಿ ಶರೀರ ಛೇದನ ಕಾರ್ಯಕ್ರಮ ಈ ಭಾಗದಲ್ಲಿ ಪ್ರಥಮವಾಗಿದ್ದು, ಕಾಲೇಜಿನ ಈ ಪ್ರಯತ್ನಕ್ಕೆ ಧನ್ಯವಾದ ಸಲ್ಲಿಸಿದರು.
ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮಾಜಿ ಸಚಿವ ಹಾಗೂ ಕಾರ್ಯಕ್ರಮದ ಮುಖ್ಯ ಪೋಷಕರಾದ ಡಾ.ಮುರುಗೇಶ ನಿರಾಣಿ, ಕಾಲೇಜಿನಲ್ಲಿ ಇಂತಜ ಚಟುವಟೆಕೆಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿ ಚಟುವಟಿಕೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಒಳ್ಳೆಯ ಭವಿಷ್ಯ ದೊರಕಲಿ ಎಂದು ಆಶಿಸಿದರು.=ಅಧ್ಯಕ್ಷತೆ ವಹಿಸಿದ್ದ ಟಿಐಇಐ ಅಧ್ಯಕ್ಷ ಮಾಧುರಿ ಮುಧೋಳ ಮಾತನಾಡಿ, ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಬೋಧನೆ ಮಾಡುವುದು ಅತಿ ಅವಶ್ಯಕ. ಅದರಲ್ಲೂ ದೇಹ ಕಾರ್ಯಚಟುವಟಿಕೆ ಬಗ್ಗೆ ದೇಹಛೇದನ ಮೂಲಕ ತಿಳಿಸಿಕೊಡುವುದು ಅವರ ಕಲಿಕೆಗೆ ಅತ್ಯಂಕ ಉಪಯುಕ್ತವಾಗಿದೆ. ಎಲ್ಲ ವಿದ್ಯಾರ್ಥಿಗಳು ಈ ಚಟುವಟಿಕೆಗಳ ಪ್ರಯೋಜನ ಪಡೆದಾಗ ಕಾಲೇಜಿನ ಇಂತಹ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ ಎಂದು ಹೇಳಿದರು.ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಶರೀರ ಛೇದನದ ನೇರ ಪ್ರಸಾರವನ್ನು ವಿಶೇಷ ಉಪನ್ಯಾಸಕರು ಹಾಗೂ ಖ್ಯಾತ ವೈದ್ಯ ಡಾ.ಮುರುಳೀಧರ್ ಬಡಿಗೇರ, ಡಾ. ಹರ್ಷವರ್ಧನ ಬ್ಯಾಳಿಹಾಳ, ಡಾ.ಬಿ.ಜಿ. ಕುಲಕರ್ಣಿ, ಡಾ.ರವಿರಾಜ ಕುರುಬೆಟ್ಟ ವಿಷಯ ವಿಶ್ಲೇಷಣೆಯ ಮೂಲಕ ಶರೀರಛೇದನ ಹಾಗೂ ನರಗಳ ಹಾಗೂ ಮೆದುಳಿನ ಕಾರ್ಯವನ್ನು ತಿಳಿಸಿಕೊಟ್ಟರು.
ರಾಷ್ಟ್ರೀಯ ಮಟ್ಟದ ಈ ಕಾರ್ಯಗಾರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಹ್ಲಾದ ಗಂಗಾವತಿ, ಕಾಲೇಜಿನ ಉಪನ್ಯಾಸಕರು ಹಾಗೂ ಹೊರ ರಾಜ್ಯಗಳ ಸುಮಾರು 50 ಕಾಲೇಜುಗಳ 1500 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಆಯುರ್ವೇದಕ್ಕೆ ಸಂಬಂಧಪಟ್ಟ ಕಾಗದ ಪ್ರಸ್ತುತತೆಯ ಸ್ಪರ್ಧೆ ನಡೆಸಲಾಯಿತು.ಡಾ.ರಜನಿ ದಡೇದ ಹಾಗೂ ಡಾ.ಅಂಜನಾ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಈಶ್ವರ ಪಾಟೀಲ ಸ್ವಾಗತಿಸಿದರು. ಡಾ.ದೀಪಾ ಗಂಗಾಲ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಡೀನ್/ ಆಡಳಿತಾಧಿಕಾರಿಯಾದ ಡಾ. ಶಿವಕುಮಾರ ಗಂಗಾಲ ವಂದಿಸಿದರು.