ನರಸಾಪುರ ಮತ್ತೊಂದು ಕೆಜಿಎಫ್‌ ಆಗುವುದನ್ನು ತಪ್ಪಿಸಿ

KannadaprabhaNewsNetwork |  
Published : Dec 10, 2024, 12:34 AM IST
೯ಕೆಎಲ್‌ಆರ್-೨ಕೋಲಾರ ತಾಲ್ಲೂಕು ಘಟಕದಿಂದ ನರಸಾಪುರದ ಅಂಬೇಡ್ಕರ್ ನಗರದಲ್ಲಿ ೨೦ನೇ ವರ್ಷದ ಕನ್ನಡ ರಾಜ್ಯೋತ್ಸವ ನಡೆಯಿತು. ಕನ್ನಡಸೇನೆ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಇದ್ದರು. | Kannada Prabha

ಸಾರಾಂಶ

ನರಸಾಪುರದ ಅಂಗಡಿ ಮುಂಟ್ಟುಗಳ ಮೇಲೆ ಪರಭಾಷಾ ನಾಮಫಲಕ ರಾರಾಜಿಸುತ್ತಿವೆ. ತಕ್ಷಣ ಮಾಲೀಕರು ಲೋಪ ತಿದ್ದಿಕೊಂಡು ಕನ್ನಡದಲ್ಲಿ ನಾಮಫಲಕ ಹಾಕುವ ಮೂಲಕ ಕನ್ನಡಧರ್ಮ ಎತ್ತಿಹಿಡಿಯಬೇಕು. ಇಲ್ಲದಿದ್ದರೆ ಗ್ರಾಪಂ ಮತ್ತು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಕನ್ನಡಸೇನೆಯಿಂದ ಪರಭಾಷಾ ನಾಮಫಲಕಗಳನ್ನು ತೆರವು ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ನರಸಾಪುರ ಹೋಬಳಿಯಲ್ಲಿ ಪರಭಾಷಿಗರ ಹಾವಳಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಇದಕ್ಕೆ ನಿಯಂತ್ರಣ ಹೇರುವ ಮೂಲಕ ಕನ್ನಡತನ ಉಳಿಸಬೇಕು. ತಪ್ಪಿದರೆ ನರಸಾಪುರ ಮತ್ತೊಂದು ಕೆಜಿಎಫ್ ಆಗಲಿದೆ ಎಂದು ಕನ್ನಡಸೇನೆ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಎಚ್ಚರಿಸಿದರು.ಕನ್ನಡಸೇನೆ ಕರ್ನಾಟಕ ಸಂಘಟನೆಯಿಂದ ನರಸಾಪುರ ಹೋಬಳಿ ಘಟಕ ಹಾಗೂ ಕೋಲಾರ ತಾಲೂಕು ಘಟಕದಿಂದ ನರಸಾಪುರದ ಅಂಬೇಡ್ಕರ್ ನಗರದಲ್ಲಿ ನಡೆದ ೨೦ನೇ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕನ್ನಡೇತರ ನಾಮಫಲಕ

ಗ್ರಾಮದ ಅಂಗಡಿ ಮುಂಟ್ಟುಗಳ ಮೇಲೆ ಪರಭಾಷಾ ನಾಮಫಲಕ ರಾರಾಜಿಸುತ್ತಿವೆ. ತಕ್ಷಣ ಮಾಲೀಕರು ಲೋಪ ತಿದ್ದಿಕೊಂಡು ಕನ್ನಡದಲ್ಲಿ ನಾಮಫಲಕ ಹಾಕುವ ಮೂಲಕ ಕನ್ನಡಧರ್ಮ ಎತ್ತಿಹಿಡಿಯಬೇಕು. ಇಲ್ಲದಿದ್ದರೆ ಗ್ರಾಪಂ ಮತ್ತು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಕನ್ನಡಸೇನೆಯಿಂದ ಪರಭಾಷಾ ನಾಮಫಲಕಗಳನ್ನು ತೆರವು ಮಾಡುವ ಕಾರ್ಯಕ್ರಮ ಆಯೋಜಿಸಲಾಗುತ್ತದೆಂದು ಹೇಳಿದರು.ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ತಮಟೆ ವಾದನ, ಗಾರಡಿಗೊಂಬೆ, ಹುಲಿವೇಷ, ಕೀಲುಕುದುರೆ ಮೇಳೈಸಿತ್ತು. ನರಸಾಪುರ ಠಾಣೆ ಎಎಸ್‌ಐ ನರೇಂದ್ರ, ಪೇದೆ ಮಲ್ಲೇಶ್‌ಗೆ ಸನ್ಮಾನ ನಡೆಯಿತು. ಆರ್‌ವಿ ಸೂಪರ್ ಮಾರ್ಕೆಟ್ ಮಾಲೀಕ ವಿಜಯಕುಮಾರ್ ಮತ್ತು ಖಾಜಿಕಲ್ಲಹಳ್ಳಿ ವೆಂಕಟೇಶ್ ಅನ್ನದಾನದ ವ್ಯವಸ್ಥೆ ಮಾಡಿದ್ದರು. ಕನ್ನಡಸೇನೆ ತಾಲೂಕು ಅಧ್ಯಕ್ಷ ಎನ್.ಸಿ.ಶಿವಚಂದ್ರಯ್ಯ, ನರಸಾಪುರ ಹೋಬಳಿ ಘಟಕದ ಅಧ್ಯಕ್ಷ ಚಳ್ಳಳ್ಳಿ ಎಂ.ನಾಗರಾಜ, ಡಾ. ಪರ್ಣಿಕಸ್ವಾಮಿ, ಮುಖಂಡರಾದ ಜಿ.ಸುನಿಲ್, ತಿರುಮಲೇಶ್, ಅಧ್ಯಕ್ಷ ಎಂ.ಕೃಷ್ಣಪ್ಪ, ಗಂಗಾಧರ್, ನಾಗೇಶ್,ವಿಜಯೇಂದ್ರ, ಅನಿಲ್, ಜಾಲಿ ಶ್ರೀನಿವಾಸ್, ಎಂ.ಲಕ್ಷ್ಮಣ್, ಸಲಹಾ ಸಮಿತಿ ಅಧ್ಯಕ್ಷ ತಿಮ್ಮರಾಯಪ್ಪ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಎಂ.ಶಂಕರ್, ತಾಲೂಕು ಉಪಾಧ್ಯಕ್ಷ ವಿಜಯ್ ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ