ಶಿಗ್ಗಾಂವಿಯನ್ನು ಬೊಮ್ಮಾಯಿ ಕಪಿಮುಷ್ಟಿಯಿಂದ ತಪ್ಪಿಸಿ-ಅಜ್ಜಂಪೀರ ಖಾದ್ರಿ

KannadaprabhaNewsNetwork |  
Published : Nov 05, 2024, 01:30 AM IST
ಪೋಟೋ ಇದೆ. | Kannada Prabha

ಸಾರಾಂಶ

ಶಿಗ್ಗಾಂವಿ ಕ್ಷೇತ್ರ ಕಳೆದ ೧೭ ವರ್ಷಗಳಿಂದ ಬೊಮ್ಮಾಯಿ ಅವರ ಕಪಿಮುಷ್ಟಿಯಲ್ಲಿದ್ದು, ಅದನ್ನು ತಪ್ಪಿಸಿ, ಕಾಂಗ್ರೆಸ್ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಋಣ ತೀರಿಸಿ ಎಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿದರು.

ಶಿಗ್ಗಾಂವಿ: ಶಿಗ್ಗಾಂವಿ ಕ್ಷೇತ್ರ ಕಳೆದ ೧೭ ವರ್ಷಗಳಿಂದ ಬೊಮ್ಮಾಯಿ ಅವರ ಕಪಿಮುಷ್ಟಿಯಲ್ಲಿದ್ದು, ಅದನ್ನು ತಪ್ಪಿಸಿ, ಕಾಂಗ್ರೆಸ್ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಋಣ ತೀರಿಸಿ ಎಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿದರು.ತಾಲೂಕಿನ ಹುಲಗೂರಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಶಿಗ್ಗಾಂವಿ ಕ್ಷೇತ್ರದ ಪ್ರತಿ ಬೂತ್‌ಗಳಲ್ಲಿ ಓಡಾಡಿ ಪಕ್ಷದ ಸಂಘಟನೆ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರ ಮಾತು ಕೇಳಿ ನಾಮಪತ್ರ ವಾಪಸ್ ಪಡೆದಿದ್ದೇನೆ, ನನಗೆ ನೀವು ಬೇಕು. ಈ ಕ್ಷೇತ್ರದ ಮಕ್ಕಳ, ಸ್ವಾಭಿಮಾನದ ಚುನಾವಣೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಎಂಬ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪತ್ನಿ ಮೇಲೆ ಆರೋಪ ಮಾಡಿದ್ದಾರೆ. ಬಿಜೆಪಿಗೆ ಅವರ ಶಾಪ ತಟ್ಟುತ್ತದೆ. ಬಿಜೆಪಿಯವರು ಶೋಷಿತರ ವಿರೋಧಿಯಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಶಿಗ್ಗಾಂವಿ-ಸವಣೂರಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಯಾಸೀರ್‌ಖಾನ್ ಪಠಾಣ ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಣಬೇಕು. ಬೊಮ್ಮಾಯಿ ಮಾತಿಗೆ ಮರುಳಾಗದಿರಿ ಎಂದು ಹೇಳಿದರು. ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಈ ಚುನಾವಣೆ ಮೂಲಕ ಬಿಜೆಪಿಯ ಸುಳ್ಳಿನ ಸಾಮ್ರಾಟ ಮೋದಿ ಸುಳ್ಳುಗಳನ್ನು ಸೋಲಿಸಿ. ಒಂದು ಕೋಟಿ ಬಡ ಕುಟುಂಬಕ್ಕೆ, ಬಡವರಿಗೆ ಹಿತ ಮಾಡುವುದು ಅಭಿವೃದ್ಧಿ ಅಲ್ಲವೇ? ರಾಜ್ಯ ಹಸಿವು ಮುಕ್ತ ಆದರೆ ಅಭಿವೃದ್ಧಿ ಅಲ್ಲವೇ? ನಿಮ್ಮಲ್ಲಿ ಅಭಿವೃದ್ಧಿ ಎಂದರೆ ಏನು? ಸರ್ಕಾರದ ಖಜಾನೆ ತುಂಬೋದು ಜನಸಾಮಾನ್ಯರಿಂದ, ಬಡವರಿಂದ, ದುಡಿಯುವ ವರ್ಗ, ಭೂತಾಯಿಯಿಂದ ಉತ್ಪಾದನೆ ಮಾಡುವರು ನಮ್ಮವರು. ನಿಮಗೆ ಈಗ ಜೋಡೆತ್ತು ಸಿಕ್ಕಿವೆ, ಆರ್ಭಟದಿಂದ ಓಡಿಸಿ. ಬಿಜೆಪಿಯವರು ಹಿಂದೂ, ಮುಸ್ಲಿಂ ಎಂದು ಸಮಾಜವನ್ನೂ ಕೆಡಿಸುತ್ತಿದ್ದು, ಅವರಿಗೆ ಶಾಪ ತಟ್ಟುತ್ತದೆ. ವಕ್ಫ್ ಎಂದರೆ ಅದು ಮುಸ್ಲಿಂ ನೀಡಿದ ದಾನ, ಅದರ ಬಗ್ಗೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ, ರಾಜಕೀಯ ನಾಟಕ ಆಡುವುದನ್ನು ಬಿಡಿ, ಜನರು ಜಾಗೃತಿಯಾಗಿದ್ದು, ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ