ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ

KannadaprabhaNewsNetwork |  
Published : Mar 06, 2025, 12:31 AM IST
ದಲ್ಲಾಳಿಗಳ ನಿಯಂತ್ರಣಕ್ಕೆ ಆಗ್ರಹ | Kannada Prabha

ಸಾರಾಂಶ

ರೈತರು ಕೃಷಿ ಉತ್ಪನ್ನ ಗಳನ್ನು ದಾಸ್ತಾನು ಮಾಡಲು ಅವಕಾಶ ನೀಡುತ್ತಿಲ್ಲ. ಕುರಿ, ಮೇಕೆ ಮಾರಾಟ ಮಾಡುವ ಸಂದರ್ಭದಲ್ಲಿ ₹5 ಸುಂಕದ ಬದಲಿಗೆ ಹೆಚ್ಚುವರಿಯಾಗಿ ₹15-₹20 ವಸೂಲಿ ಮಾಡಲಾಗುತ್ತಿದೆ. ಜೊತೆಗೆ ತರಕಾರಿ ಮಾರಾಟದ ಸಂದರ್ಭದಲ್ಲಿ ಶೇ 10ರಷ್ಟು ವಸೂಲಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಅಧಿಕಾರಿಗಳನ್ನು ಒತ್ತಾಯಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಮಂಜುನಾಥ್‌ಗೆ ಈ ಕುರಿತು ಮನವಿ ಸಲ್ಲಿಸಲಾಯಿತು. ರೈತರು ಕೃಷಿ ಉತ್ಪನ್ನ ಗಳನ್ನು ದಾಸ್ತಾನು ಮಾಡಲು ಅವಕಾಶ ನೀಡುತ್ತಿಲ್ಲ. ಕುರಿ, ಮೇಕೆ ಮಾರಾಟ ಮಾಡುವ ಸಂದರ್ಭದಲ್ಲಿ ₹5 ಸುಂಕದ ಬದಲಿಗೆ ಹೆಚ್ಚುವರಿಯಾಗಿ ₹15-₹20 ವಸೂಲಿ ಮಾಡಲಾಗುತ್ತಿದೆ. ಜೊತೆಗೆ ತರಕಾರಿ ಮಾರಾಟದ ಸಂದರ್ಭದಲ್ಲಿ ಶೇ 10ರಷ್ಟು ವಸೂಲಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿ, ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ರೈತರು ದೂರಿದರು.

ರೈತರಿಗೆ ಅನ್ಯಾಯ:

ತೊಗರಿ ಖರೀದಿ ಮಾಡುವ ನಗರದ ಮಿಲ್‌ಗೆ ತೊಗರಿ ಬೆಳೆ ನೀಡಿದಾಗ ಶೇ 35ರಷ್ಟು ಕಡಿತ ಮಾಡಲಾಗುತ್ತಿದೆ. ಬೇಳೆ ಹಿಂತಿರುಗಿಸುವಾಗ 3ನೇ ದರ್ಜೆಯ ಬೇಳೆ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ನಿಗ್ರಹಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯ ಮುಂಭಾಗದಲ್ಲಿ ಸುಂಕ ವಸೂಲಿ ಮಾಡುವ ಬಗ್ಗೆ ಯಾವುದೇ ನಾಮಫಲಕ ಅಳವಡಿಸಿಲ್ಲ. ಇದರಿಂದ ರೈತರನ್ನು ದಲ್ಲಾಳಿಗಳು ವಂಚಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಮಧ್ಯವರ್ತಿಗಳ ಕಾರುಬಾರು

ಮಾರುಕಟ್ಟೆ ಪ್ರತಿ ಭಾನುವಾರ ಆವರಣದಲ್ಲಿ ಜಾನುವಾರುಗಳ ವ್ಯಾಪಾರ ಇಲ್ಲಿ ನಡೆಯುತ್ತದೆ. ಆದರೆ, ನೀರಿನ ವ್ಯವಸ್ಥೆ ಇಲ್ಲ. ಮಾರುಕಟ್ಟೆಯ ವ್ಯವಹಾರಗಳು ದಲ್ಲಾಳಿಗಳ ಮೂಲಕವೇ ನಡೆಯುತ್ತದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಬೇಡಿಕೆಗಳ ಮನವಿ ಪತ್ರವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಮಂಜುನಾಥ್‌ ರವರಿಗೆ ಮನವಿ ಪತ್ರಿ ಸಲ್ಲಿಸಿದರು. ಈ ವೇಳೆ ತಾಲೂಕು ಸಂಚಾಲಕ ರವೀಂದ್ರರೆಡ್ಡಿ, ನಾಗಭೂಷಣ್ ರೆಡ್ಡಿ, ಮಂಜುನಾಥ್‌, ಅಂಜನ್‌ ರೆಡ್ಡಿ, ಗಂಗರಾಜು, ನಂಜುಂಡಪ್ಪ, ಲಕ್ಷ್ಮೀನಾರಾಯಣರೆಡ್ಡಿ, ಶಾನ್ವಾಜ್‌ ಭಾಷಾ ಪಾಲ್ಗೊಂಡಿದ್ದರು.

ಫೋಟೋ...ಗೌರಿಬಿದನೂರು ಎಪಿಎಂಸಿ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ