ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ಸೋಮವಾರ ನಡೆದ ಪೌಷ್ಟಿಕ ಆಹಾರಗಳ ಪ್ರದರ್ಶನದಲ್ಲಿ ಮಾತನಾಡಿದರು.
ಆಧುನಿಕತೆ ನೆಪದಲ್ಲಿ ಬಂದಿರುವ ಫಿಜಾ ಬರ್ಗರಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಪೌಷ್ಟಿಕ ಆಹಾರ ಸೇವನೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಮಕ್ಕಳ ಭವಿಷ್ಯ ಮತ್ತು ರಾಷ್ಟ್ರ ಸದೃಢವಾಗಲು ಆರೋಗ್ಯವಂತ ಯುವಶಕ್ತಿ ಅವಶ್ಯಕ. ಹೀಗಾಗಿ ಬೇರೆ ಬೇರೆ ಆಹಾರಗಳಿಗೆ ಮಾರು ಹೋಗಿರುವ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಆಹಾರಗಳನ್ನು ರೂಢಿ ಮಾಡಬೇಕು ಎಂದರು.ಪಾಶ್ಚಾತ್ಯ ಮತ್ತು ಅಪೌಷ್ಟಿಕ ಆಹಾರಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಸ್ಥಳೀಯ ಗುಣಮಟ್ಟದ ಆಹಾರ ಪದ್ಧತಿ, ಸಿರಿಧಾನ್ಯ ಹೆಚ್ಚು ಬಳಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು.
7 ವರ್ಷದಿಂದ 12 ವರ್ಷದ ಮಕ್ಕಳ ನಡುವೆ ಪೌಷ್ಟಿಕ ಮತ್ತು ಸಮತೋಲನದ ಆಹಾರ ನೀಡಿದರೆ ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳು ಬಲಿಷ್ಟರಾಗುತ್ತಾರೆ ಎಂದರು.
ಪ್ರಾಕೃತಿಕವಾಗಿ ಬೆಳೆಯುವ ದ್ವಿದಳ, ಏಕದಳ ಕಾಳುಗಳು, ತರಕಾರಿಗಳು ಸೇರಿದಂತೆ ಪ್ರಾದೇಶಿಕತೆಗೆ ಮತ್ತು ಕಾಲಮಾನಕ್ಕೆ ತಕ್ಕಂತೆ ಬೆಳೆಯುವ ಆಹಾರಗಳ ಕಡೆ ಗಮನ ಹರಿಸಿದರೆ ಉತ್ತಮ ಆರೋಗ್ಯದ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಯೋಗೇಶ್, ರಿಜಿಸ್ಟ್ರಾರ್ ಸುಬ್ಬರಾಯ, ಯೋಗ ತರಬೇತುದಾರ ಲಕ್ಷ್ಮಣ್ ಮಾತನಾಡಿದರು. ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ನಡೆಯಿತು. ಪೌಷ್ಟಿಕ ಧಾನ್ಯ ಮತ್ತು ತರಕಾರಿಗಳಿಂದ ಸಿದ್ಧಪಡಿಸಿದ ವಿವಿಧ ರೀತಿಯ ಅಡುಗೆಗಳ ತಿಂಡಿ ತಿನಿಸುಗಳನ್ನು ಪ್ರದರ್ಶನದಲ್ಲಿಟ್ಟಿದ್ದರು. ನಂತರ ಅನ್ನಪ್ರಾಶಾನ ನಡೆಯಿತು.