ಎಂಆರ್‌ಪಿಎಲ್- ಒಎನ್‌ಜಿಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ ವತಿಯಿಂದ ಎಂಆರ್‌ಪಿಎಲ್ ಉದ್ಯೋಗಿಗಳ ರಿಕ್ರಿಯೇಷನ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗೂ ನಿವೃತ್ತ ಉದ್ಯೋಗಿಗಳಿಗೆ ಅಭಿವಂದನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಎಂಆರ್‌ಪಿಎಲ್ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘದಿಂದ ಪುರಸ್ಕಾರ, ಸನ್ಮಾನಮೂಲ್ಕಿ: ಸಂಸ್ಥೆಯು ಕಾರ್ಮಿಕರಿಗೆ ಕೊಡುವ ಸವಲತ್ತುಗಳನ್ನು ಸರಿಯಾಗಿ ನೀಡಬೇಕು. ಕಾರ್ಖಾನೆಗಳು ಬೇಕು, ಜೊತೆಗೆ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಬೇಕು. ಸ್ಥಳೀಯರ ನ್ಯಾಯೋಚಿತ ಹೋರಾಟಗಳಿಗೆ ಸ್ಪಂದಿಸುವುದಾಗಿ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.ಎಂಆರ್‌ಪಿಎಲ್- ಒಎನ್‌ಜಿಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ ವತಿಯಿಂದ ಎಂಆರ್‌ಪಿಎಲ್ ಉದ್ಯೋಗಿಗಳ ರಿಕ್ರಿಯೇಷನ್ ಸಭಾಂಗಣದಲ್ಲಿ ಜರುಗಿದ ಎಂಆರ್‌ಪಿಎಲ್- ಒಎನ್‌ಜಿಸಿ ನಿರ್ವಸಿತ ಕುಟುಂಬಗಳ 10 ಮತ್ತು 12ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗೂ ನಿವೃತ್ತ ಉದ್ಯೋಗಿಗಳಿಗೆ ಅಭಿವಂದನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಂಗಳೂರು ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ವೈ. ವಿತರಿಸಿದರು.
ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಎಂಆರ್‌ಪಿಎಲ್ ನಿರ್ದೇಶಕ ನಂದಕುಮಾರ್ ವಿ. ಪಿಳ್ಳೈ ರೊನಾಲ್ಡ್ ಫರ್ನಾಂಡಿಸ್, ಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಜೋಗಿ, ಎಂಆರ್‌ಪಿಎಲ್ ಮಾನೇಜ್ಮೆಂಟ್ ಸ್ಟಾಫ್ ಅಸೋಸಿಯಶನ್ ಅಧ್ಯಕ್ಷ ಸಂಪತ್ ರೈ, ಉಪಾಧ್ಯಕ್ಷ ಡಾ.ಸಂಪತ್, ಎಂಆರ್‌ಪಿಎಲ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಎಂಆರ್‌ಪಿಎಲ್ - ಒಎನ್‌ಜಿಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘದ ಸದಸ್ಯರಾದ ರಘುರಾಮ್ ತಂತ್ರಿ, ಜಯೇಶ್ ಗೋವಿಂದ್, ಜಯಪ್ರಕಾಶ್, ರಾಜ್ ಕುಮಾರ್, ಶಶಿ, ದಾಮೋದರ್ ಶೆಟ್ಟಿ, ಕಿರಣ್ ಕುಮಾರ್, ಶಿವಾನಂದ, ಕುಮಾರ್ ಡಿ. ಅಂಚನ್, ಪ್ರಸನ್ನ ಕುಮಾರ್, ರತನ್, ಕಿಶೋರ್ ಶೆಟ್ಟಿ, ಗಿರೀಶ್, ಗಂಗಾಧರ್, ಜಯಲಕ್ಷ್ಮೀ ಶೆಟ್ಟಿ, ಸ್ಮಿತಾ ಭಂಡಾರಿ, ತೇಜೇಶ್, ಅವಿನಾಶ್, ಶರತ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಒಟ್ಟು 60 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತ ಉದ್ಯೋಗಿಗಳಾದ ಪುಷ್ಪರಾಜ್ ಅಡಪ್ಪ ಮತ್ತು ದಿಲೀಪ್ ಬಿ. ಆಳ್ವ ಅವರನ್ನು ಸನ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಗವದ್ಗೀತ ಸ್ಪರ್ಧೆಯಲ್ಲಿ ಪ್ರಥಮ ಪುರಸ್ಕಾರ ಪಡೆದ ಎಂಆರ್‌ಪಿಎಲ್ ಸಂಸ್ಥೆ ಉದ್ಯೋಗಿ ವಿನಯ್ ಭಟ್, ಹತ್ತನೇ ತರಗತಿಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸಾಧನೆಗೈದ ವಿದ್ಯಾರ್ಥಿ ಬಿಂದು ಎಂ. ಸುವರ್ಣ ಹಾಗೂ ಉತ್ತಮ ಸರ್ಕಾರಿ ಮಹಿಳಾ ಉದ್ಯೋಗಿ ರಾಷ್ಟ್ರಪ್ರಶಸ್ತಿ ಪಡೆದ ಪ್ರಮೀಳಾ ದೀಪಕ್ ಪೆರ್ಮುದೆ ಅವರನ್ನು ಸನ್ಮಾನಿಸಲಾಯಿತು. ಎಂಆರ್‌ಪಿಎಲ್- ಒಎನ್‌ಜಿಸಿ ಯೋಜನಾ ನಿರ್ವಸಿತರಾಗಿದ್ದು, ಉದ್ಯೋಗ ಹೊಂದಿರದ ಆರ್ಥಿಕ ದುರ್ಬಲರಾಗಿರುವ 5 ಕುಟುಂಬಗಳನ್ನು ಗುರುತಿಸಿ, ಅವರಿಗೆ ತಲಾ ಹತ್ತು ಸಾವಿರ ರು. ಆರ್ಥಿಕ ಸಹಾಯ ನೀಡಲಾಯಿತು.
ಎಂಆರ್‌ಪಿಎಲ್- ಒಎನ್‌ಜಿಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ ಅಧ್ಯಕ್ಷ ದಿನೇಶ್ ಬಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮೀಶ ಎಂ. ಅಂಚನ್ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಗುರುರಾಜ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಸುಧೀರ್ ಆಚಾರ್ಯ ವಂದಿಸಿದರು. ಶ್ರೀಶ ಎಂ. ಕರ್ಮರನ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಾಗೇಶ್ ಕುಲಾಲ್ ತಂಡದವರಿಂದ ‘ಪರಮಾತ್ಮೆ ಪಂಜುರ್ಲಿ’ ತುಳು ನಾಟಕ ಪ್ರದರ್ಶನ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.