ಧಾರವಾಡ:
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಭಾದ ಅಧ್ಯಕ್ಷ ದತ್ತ ನೀರಲಗಿ, ಈ ಮೊದಲು ಸುಲಭಾ ಅವರು ಪ್ರತಿ ವರ್ಷ ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡುತ್ತಿದ್ದರು. ಇದೀಗ ಅವರ ಪ್ರಥಮ ಸ್ಮರಣೆ ಹಿನ್ನೆಲೆಯಲ್ಲಿ ಸಂಗೀತ, ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರಮಿಸಿದವರಿಗೆ ಅವರ ಹೆಸರಿನ ಪ್ರಶಸ್ತಿ ಮಂದುವರಿಸಿದ್ದೇನೆ ಎಂದರು.
ಡಾ. ಶಾಂತಾರಾಮ ಹೆಗಡೆ, ಡಾ. ಅಶೋಕ ಹುಗ್ಗಣ್ಣವರ, ಪಂ. ಶ್ರೀಕಾಂತ ಕುಲಕರ್ಣಿ, ವಿದೂಷಿ ಸುಜಾತಾ ಗುರುವ, ವೈಷ್ಣವಿ ಹಾನಗಲ್, ಡಾ. ಶ್ರೀಧರ ಮತ್ತು ಶ್ರುತಿ ಕುಲಕರ್ಣಿ ದಂಪತಿ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಬಿ.ಎಂ. ಕೇದಾರನಾಥ, ಮಾಯಾ ಚಿಕ್ಕೆರೂರ, ಸಂಜೀವ ಪೋತದಾರ, ಡಾ. ರಾಚಯ್ಯ ಹಿರೇಮಠ ಹಾಗೂ ಅಲ್ಲಮಪ್ರಭು ಕಡಕೋಳ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ತಲಾ ₹ 10 ಸಾವಿರ ಹಾಗೂ ಪ್ರಮಾಣ ಪತ್ರವನ್ನು ಈ ಪ್ರಶಸ್ತಿ ಒಳಗೊಂಡಿದೆ ಎಂದು ಹೇಳಿದರು.ಡಾ. ಶಶಿಧರ ನರೇಂದ್ರ ಉದ್ಘಾಟಿಸಲಿದ್ದು, ಪದ್ಮಶ್ರೀ ಪಂ. ವೆಂಕಟೇಶಕುಮಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಭಾರತಿದೇವಿ ರಾಜಗುರು, ಡಾ. ಶೈಲಶ್ರೀ ಮತ್ತು ಆನಂದ ಹರಿದಾಸ ವಹಿಸುತ್ತಾರೆ. ಸಮಾರಂಭದಲ್ಲಿ ಸುಜಾತಾ ಗುರುವ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.