ಸಾಧಕರಿಗೆ ಲಕ್ಷ್ಮೀ ಭಾಸ್ಕರ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Aug 23, 2024, 01:07 AM IST
ಮಂಗಳೂರಿನಲ್ಲಿ ಸಾಧಕರಿಗೆ ಲಕ್ಷ್ಮೀ ಭಾಸ್ಕರ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಪದಾಧಿಕಾರಿಗಳಿಂದ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇದಿಗೆ ಪ್ರತಿಷ್ಠಾನ ಮಂಗಳೂರು ಹಾಗೂ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಮಂಗಳೂರು ರೀಜನ್ ಸಹಯೋಗದಲ್ಲಿ ಲಕ್ಷ್ಮೀ ಭಾಸ್ಕರ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಕೇದಿಗೆ ಪ್ರತಿಷ್ಠಾನ ಮಂಗಳೂರು ವತಿಯಿಂದ ನಿವೃತ್ತ ಸೇನಾನಿ ವಿಕ್ರಂದತ್ತ ಅವರಿಗೆ ರಾಷ್ಟ್ರ ಸೇವಾ ನಿಷ್ಠ, ಸಂಘಟಕ ಸುಧಾಕರ ರಾವ್ ಪೇಜಾವರ ಅವರಿಗೆ ಸಮಾಜ ಸೇವಾ ನಿಷ್ಠ, ಕಲಾವಿದ ಸೂರ್ಯ ಆಚಾರ್ ವಿಟ್ಲ ಅವರಿಗೆ ಚಿತ್ರಕಲಾ ನಿಷ್ಠ, ಕೃಷಿಕ ದಯಾಪ್ರಸಾದ್ ಚೀಮುಳ್ಳು ಅವರಿಗೆ ಕೃಷಿ ಕ್ಷೇತ್ರ ನಿಷ್ಠ, ಕಲಾವಿದ ಎಲ್ಲೂರು ರಾಮಚಂದ್ರ ಭಟ್ ಅವರಿಗೆ ಯಕ್ಷಗಾನ ಕಲಾನಿಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.ಹಿರಿಯ ಸೇನಾನಿ ರಾಮ ಶೇಷ ಶೆಟ್ಟಿ, ಚಂದ್ರಹಾಸ ಕೊಂಚಾಡಿ, ದೇವಿಪ್ರಸಾದ್ ಕೊಂಚಾಡಿ, ಸುನಿಲ್ ಕೊಂಚಾಡಿ (ಶ್ರೀಮೂಕಾಂಬಿಕಾ ಚೆಂಡೆ ತಂಡದ) ಸಹೋದರರಿಗೆ ವಿಶಿಷ್ಟವಾದ್ಯ ಕಲಾ ನಿಪುಣ ವಿಶೇಷ ಸನ್ಮಾನ ನೀಡಲಾಯಿತು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಸಾಧಕರನ್ನು ಸನ್ಮಾನಿಸಿದರು. ಕೇದಿಗೆ ಪ್ರತಿಷ್ಠಾನ ಅಧ್ಯಕ್ಷ ಡಾ. ಕೇದಿಗೆ ಅರವಿಂದ ರಾವ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಸೀನಿಯರ್ ಚೇಬರ್ ಇಂಟರ್ ನ್ಯಾಶನಲ್‌ನ ಚಿತ್ರಕುಮಾರ್ ಅವರು ಮಹಿಳೆಯೊಬ್ಬರಿಗೆ ಹೊಲಿಗೆ ಯಂತ್ರ ವಿತರಿಸಿದರು. ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಪದಾಧಿಕಾರಿಗಳಿಂದ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದರು.

ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸೀನಿಯರ್ ಚೇಬರ್ ಇಂಟರ್ ನ್ಯಾಶನಲ್ ಮಂಗಳೂರು ರೀಜನ್ ಅಧ್ಯಕ್ಷ ದತ್ತಾತ್ರೇಯ ಬಾಳ, ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಫರ್ನಾಂಡಿಸ್ ಶುಭ ಹಾರೈಸಿದರು. ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಇದ್ದರು. ಹರೀಶ ಎ. ವಂದಿಸಿದರು. ಅರೆಹೊಳೆ ಸದಾಶಿವ ರಾವ್ ನಿರೂಪಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ