ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಿದ ಡಾ. ವಿಜಯಕುಮಾರ್ ರವರು ಮಕ್ಕಳು ಸ್ವಚ್ಛತೆಯಿಂದ ಇದ್ದರೆ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆಯನ್ನು ನೀಡಿದರು. ಮತ್ತು ಮಕ್ಕಳು ಮೊಬೈಲ್ ಅಡಿಕ್ಷನ್‌ನಿಂದ ಅನುಭವಿಸುತ್ತಿರುವ ಕಾಯಿಲೆಗಳು ತೊಂದರೆಗಳ ಬಗ್ಗೆ ಸಲಹೆಗಳನ್ನು ನೀಡಿದರು. ಮಕ್ಕಳು ತಾಯಿ ತಂದೆ ಗುರುವನ್ನು ಅವಲಂಬಿಸಿದರೆ ಉತ್ತಮ ವ್ಯಕ್ತಿತ್ವವನ್ನು ಹೊಂದುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಲೋಕೇಶ್, ಚನ್ನರಾಯಪಟ್ಟಣ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಬಿ. ವಿ. ವಿಜಯ್ ರವರು ಮಕ್ಕಳಿಗೆ ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿಯನ್ನು ನೀಡಿದರು.ಕಾರ್ಯದರ್ಶಿಯಾದ ಜಡಿ ಕುಮುದ. ಸದಸ್ಯರಾದ ಶಿವನಂಜೇಗೌಡ, ರೂಪರವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಡಾ. ವಿಜಯಕುಮಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.