ಕನ್ನಡಪ್ರಭ ವಾರ್ತೆ, ಬಾಳೇಹೊನ್ನೂರು:
ರಂಭಾಪುರಿ ಪೀಠಾರೋಹಣ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿ ನಮಗೆ ನಮ್ಮ ಧರ್ಮದ ಬಗ್ಗೆ ಅರಿವು ಇಲ್ಲ ವಾಗಿದೆ. ಆದ್ದರಿಂದಲೇ ಇಂದು ಕೆಲವೊಂದು ಪರಿಸ್ಥಿತಿಗಳು ನಮಗೆ ಬಂದಿವೆ. ನಮ್ಮ ಧರ್ಮ ಯಾವ ರೀತಿ ಇದೆ, ಭವಿಷ್ಯದಲ್ಲಿ ಹೇಗೆ ಮುಂದುವರಿಯಬೇಕಿದೆ ಎಂದು ತಿಳಿದುಕೊಳ್ಳಬೇಕಿದೆ. ಧರ್ಮವನ್ನು ಪುನರ್ ಸಂಘಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆಧುನಿಕ ಭಾರತಕ್ಕೂ ಹಿಂದಿನ ಭಾರತಕ್ಕೂ ಬಹಳ ವ್ಯತ್ಯಾಸವಿದೆ. ಅದನ್ನು ಪುನಃ ಸಂಘಟಿಸಿ ಸಾಮಾಜಿಕ ಧರ್ಮ ಎಲ್ಲರಿಗೂ ಕೊಡಬೇಕಿದೆ. ವೀರಶೈವ ಪರಂಪರೆ ಇನ್ನೂ ದೊಡ್ಡಮಟ್ಟದಲ್ಲಿ ಬೆಳೆಯಬೇಕಿದ್ದು, ಭಾರತೀಯರಿಗೆ ಲಾಭ ಕೊಡುವ ಧರ್ಮ. ಭಾರತೀಯ ಮೂಲ ತತ್ವ ಎಲ್ಲಕ್ಕಿಂತ ಸರಳ. ಎಲ್ಲರಿಗೂ ಮುಟ್ಟುವಂತದ್ದಾಗಿದೆ. ಇದನ್ನು ರಕ್ಷಿಸಬೇಕಿದೆ ಎಂದರು. ಕರ್ನಾಟಕದಲ್ಲಿ ಧರ್ಮದ ಪರ ನಿಂತಿರುವ ಸಮುದಾಯ ವೀರಶೈವ.ಭಾರತೀಯ ಪರಂಪರೆ ಏಕತೆಯಲ್ಲಿ ವೈವಿಧ್ಯತಇದೆ. ದೇಶದ ವಿವಿಧೆಡೆ ಬೇರೆ ಬೇರೆ ರೀತಿಯಲ್ಲಿ ಪರಂಪರೆ ತೋರಿಸಿ ಕೊಡುತ್ತೇವೆ. ಆದರೆ ಎಲ್ಲರೂ ಒಂದೇ ಆಗಿದ್ದು, ಭಾರತಾಂಬೆಗೆ ಗೌರವ ಕೊಡುವ ಮೂಲಕ ಕನ್ನಡಾಂಬೆ ರಕ್ಷಣೆ ಮಾಡುತ್ತಿ ದ್ದೇವೆ ಎಂದರು. ಬಾಳೆಹೊನ್ನೂರು-ಚಿಕ್ಕಮಗಳೂರು ಹಾಗೂ ಮೈಸೂರಿಗೆ ಎಂದಿಗೂ ನಿಕಟ ಸಂಪರ್ಕ ಹೊಂದಿದೆ. ಈಗಾಗಲೇ ಸಚಿವರು (ಸೋಮಣ್ಣ) ಹೇಳಿದ್ದು, ಗುಂಡಿ ಬಿದ್ದ ರಸ್ತೆಯಲ್ಲೇ ಬರಬೇಕಾಗಿದೆ. ಇದು ಅಭಿವೃದ್ಧಿಯಾಗಬೇಕಿದೆ ಎಂದಿದ್ದಾರೆ. ಆ ಕೆಲಸದಲ್ಲಿ ನಾವು ಕೂಡ ಅವರೊಂದಿಗೆ ಕೈ ಜೋಡಿಸುತ್ತೇವೆ. ರಂಭಾಪುರಿ ಮಠ, ಶೃಂಗೇರಿ ಮಠ ಎರಡೂ ಕೂಡ ರಾಷ್ಟ್ರೀಯ ಮಠ ಗಳಾಗಿದ್ದು, ಇಂತಹ ಜಾಗದಲ್ಲಿ ನಾವು ಅಭಿವೃದ್ಧಿ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದರು.- -- (ಬಾಕ್ಸ್)--ಬದುಕಿಗೆ ಮಾರ್ಗದರ್ಶನದ ಗ್ರಂಥ ಧರ್ಮವಾಗಿರಬೇಕುಪ್ರಜಾಪ್ರಭುತ್ವ ಬಂದ ನಂತರ ಸಂವಿಧಾನವನ್ನೇ ನಾವು ಆಶಯ ಗ್ರಂಥವಾಗಿ ಸ್ವೀಕರಿಸಿದ್ದೇವೆ. ಇಂದು ರಾಷ್ಟ್ರಕ್ಕೆ ಮಾರ್ಗ ದರ್ಶನ ಮಾಡುವ ಗ್ರಂಥ ಸಂವಿಧಾನ. ಆದರೆ ಬದುಕಿಗೆ ಮಾರ್ಗದರ್ಶನ ಮಾಡುವ ಗ್ರಂಥ ಧರ್ಮವೇ ಆಗಿರಬೇಕು. ಧರ್ಮ ಇಲ್ಲ ದಿದ್ದರೆ, ಧರ್ಮದ ಜಾಗದಲ್ಲಿ ಅಧರ್ಮ ತಲೆ ಎತ್ತಿ ನಿಲ್ಲಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ಬದುಕಿಗೆ ಮಾರ್ಗದರ್ಶನ ಮಾಡಲು ಧರ್ಮ ಬೇಕಿದ್ದು, ಧರ್ಮ ಯಾವುದು ಎಂದು ತಿಳಿಸಲು ಧರ್ಮಪೀಠಗಳು ಬೇಕಿದೆ. ಈ ಹಿನ್ನೆಲೆಯಲ್ಲಿ ಭಾರತ ಧರ್ಮಾಧಾರಿತ ರಾಷ್ಟ್ರವಾಗಿದೆ. ಧರ್ಮ ಎಂದರೆ ಕೇವಲ ರಿಲಿಜಿಯನ್ ಅಲ್ಲ. ಇಂದು ರಿಲಿಜಿಯನ್ ಮತ್ತು ಧರ್ಮ ಎಂದು ಒಂದೇ ಭಾವಿಸಿರುವುದರಿಂದಲೇ ಸಾಕಷ್ಟು ಅಪಾಯ ತಲೆದೋರುತ್ತಿವೆ.ರಿಲಿಜಿಯನ್ ಒಂದು ಪುಸ್ತಕ, ಒಬ್ಬ ಪ್ರವಾದಿ, ಒಬ್ಬ ದೇವರು ಎಂಬ ತತ್ವ ಆದರಿಸಿದರೆ, ಧರ್ಮ ಎಂಬುದು ಸತ್ಯದ ತಳಹದಿ ಮೇಲೆ, ದಯೆ ಆಧಾರದ ಮೇಲೆ, ಸಕಲ ಜೀವಾತ್ಮಗಳಿಗೂ ಲೇಸನ್ನೆ ಬಯಸುತ್ತದೆ. ಉದಾತ್ತ ತತ್ವವನ್ನು ಧರ್ಮ ಹೊಂದಿದೆ. ಧರ್ಮಕ್ಕೆ ಆದಿ, ಅಂತ್ಯವೆಂಬುದಿಲ್ಲ. ಅದು ಸೃಷ್ಟಿ ಜೊತೆಗಿದ್ದು, ಅದರ ಜೊತೆ ಕೊನೆಗೊಂಡು, ಮತ್ತೆ ಹುಟ್ಟುತ್ತದೆ. ಇಂದು ಆದರ್ಶ ಮರೆತು ಧರ್ಮ ದೂರ ಮಾಡುವ ಕೆಲಸ ಧರ್ಮ ತಿಳಿದುಕೊಳ್ಳದವರಿಂದ ನಡೆದಿದೆ. ಅದರ ಆಪತ್ತನ್ನು ನಾವು ಗ್ರಹಿಸುತ್ತಿದ್ದೇವೆ ಎಂದರು. ಧರ್ಮ ನಾವೆಲ್ಲರೂ ಒಂದು ಎಂಬ ಭಾವನೆ ಪ್ರಕಟೀಕರಣಗೊಳಿಸುವ ಕೆಲಸ ಮಾಡಿತು. ಆದರೆ ಕೆಲವರು ವೈವಿಧ್ಯತೆ ಒಡಕಿಗೆ ಉಪಯೋಗಿಸಿಕೊಂಡು ಸಮಾಜ, ರಾಷ್ಟ್ರ ಒಡೆಯವ ಸಂಚಿಗೆ ಬಲಿಯಾಗುತ್ತಿರುವುದು ದುರ್ದೈವ. ಧರ್ಮ ಒಟ್ಟುಗೂಡಿಸಲು ಇರುವುದು. ಒಡೆಯಲು ಇರುವುದಲ್ಲ. ಇಂದು ನಮ್ಮನ್ನು ರಕ್ಷಿಸುವ ವೈದ್ಯರೇ ಭಯೋತ್ಪಾದಕರಾಗಿ, ಭಕ್ಷಿಸಬೇಕಿರುವ ಪ್ರಸಾದ ದಲ್ಲಿ ವಿಷ ಬೆರೆಸಿ ಕೊಲ್ಲುವ ಸಂಚು ಮಾಡುವ ಮನಃಸ್ಥಿತಿ ಬಂದಿರುವುದು ವಿಷಾದನೀಯ. ರಾಜ್ಯದ ಮುಖ್ಯಮಂತ್ರಿಗಳು ನಾನು ಸನಾತನ ಧರ್ಮದ ವಿರೋಧಿ ಎಂದು ಹೇಳಿದ್ದಾರೆ. ಸನಾತನ ಧರ್ಮ ಏನು ಎಂದು ಅರ್ಥವಾಗಿದ್ದರೆ ಅವರ ಬಾಯಿಯಿಂದ ಈ ಮಾತು ಬರುತ್ತಿರಲಿಲ್ಲ. ಸನಾತನ ಧರ್ಮದ ವಿರೋಧಿ ಎಂದರೆ ಅವರು ಸತ್ಯ, ಜ್ಞಾನ, ವಿವಿಧತೆ, ಏಕತೆ ಸೂತ್ರ ಗ್ರಹಿಸಿದ ಮನಃಸ್ಥಿತಿ ವಿರೋಧಿಯಾಗುತ್ತಾರೆ. ಮುಖ್ಯಮಂತ್ರಿಗಳು ಸನಾತನ ಧರ್ಮ ಎಂದರೆ ಏನು ಎಂಬುದನ್ನು ಪಂಚಪೀಠಗಳಿಂದ ಮಾರ್ಗದರ್ಶನ ಪಡೆಯಬೇಕು. ಸನಾತನ ಧರ್ಮ ಒಡಕಿಗೆ ದಾರಿ ಮಾಡಿದ್ದಲ್ಲ. ಅಸ್ಪೃಶ್ಯತೆ ಪೋಷಿಸಿಲ್ಲ. ಜಾತೀಯತೆ ಪ್ರತಿಪಾದಿಸಿದ್ದಲ್ಲ. ಸತ್ಯದ ಪ್ರತಿಪಾದನೆ ಧರ್ಮ ಒಳಗೊಂಡಿದೆ ಎಂದರು.
ಪೀಠಾರೋಹಣ ಶತಮಾನೋತ್ಸವ ಸಮಾರಂಭದಲ್ಲಿ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯ ಜಗದ್ಗುರು, ಶ್ರೀಶೈಲ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ, ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯ, ಕಾಶಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.