ಆರೋಗ್ಯ ರಕ್ಷಣೆಗೆ ಆಯುರ್ವೇದದ ತ್ರಿಸೂತ್ರ: ಡಾ. ಗಣಪತಿ ಸಭಾಹಿತ

KannadaprabhaNewsNetwork |  
Published : Nov 03, 2026, 02:45 AM IST
ಆಯುರ್ವೇದ ಶಿಬಿರದಲ್ಲಿ ಡಾ. ಎಂ.ಎಸ್. ಅವಧಾನಿ ಮಾತನಾಡಿದರು. | Kannada Prabha

ಸಾರಾಂಶ

ಡಾ. ಎಂ.ಎಸ್. ಅವಧಾನಿ ಮಾತನಾಡಿ, ಪರ್ತಗಾಳಿ ಮಠಾಧೀಶ ವಿದ್ಯಾಧೀಶ ಶ್ರೀಗಳ ಜನ್ಮದಿನವನ್ನು ಗುರುವಂದನೆಯಾಗಿ ಜನಸಾಮಾನ್ಯರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.

ಕುಮಟಾ: ಉತ್ತಮ ಆರೋಗ್ಯ ರಕ್ಷಣೆಗೆ ಆಯುರ್ವೇದಲ್ಲಿ ಆಹಾರ, ನಿದ್ರೆ, ಬ್ರಹ್ಮಚರ್ಯ ಪಾಲನೆಯ ತ್ರಿಸೂತ್ರದ ಮಹತ್ವವನ್ನು ಸಾರಲಾಗಿದೆ. ಇಂದಿನ ವೈದ್ಯರು ರೋಗದ ಉಪಚಾರದಂತೆಯೇ ಜನಸಾಮಾನ್ಯರಿಗೆ ರೋಗ ಬಾರದಂತೆ ಆರೋಗ್ಯವಂತರಾಗಿ ಬದುಕಲು ಬೇಕಾದ ಮಾರ್ಗದರ್ಶನ ನೀಡಬೇಕು ಆಯುರ್ವೇದ ತಜ್ಞ ಡಾ. ಗಣಪತಿ ಜಿ. ಸಭಾಹಿತ ಆಶಿಸಿದರು.

ಪಟ್ಟಣದ ರಥಬೀದಿಯ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಸಭಾಗೃಹದಲ್ಲಿ ಭಾನುವಾರ ಗೌಡ ಸಾರಸ್ವತ ಬ್ರಾಹ್ಮಣ ಯುವ ಸೇವಾ ವಾಹಿನಿ ವತಿಯಿಂದ ಪರ್ತಗಾಳಿ ಮಠಾಧೀಶ ವಿದ್ಯಾಧೀಶತೀರ್ಥ ವಡೇರ ಸ್ವಾಮೀಜಿ ಗುರುವಂದನೆ(ಜನ್ಮದಿನ)ಪ್ರಯುಕ್ತ ಆಯೋಜಿಸಿದ್ದ ಉಚಿತ ಆಯುರ್ವೇದ ತಪಾಸಣೆ ಹಾಗೂ ಔಷಧ ವಿತರಣೆ ಶಿಬಿರ ಉದ್ದೇಶಿಸಿ ಮಾತನಾಡಿದರು.

ಡಾ. ಎಂ.ಎಸ್. ಅವಧಾನಿ ಮಾತನಾಡಿ, ಪರ್ತಗಾಳಿ ಮಠಾಧೀಶ ವಿದ್ಯಾಧೀಶ ಶ್ರೀಗಳ ಜನ್ಮದಿನವನ್ನು ಗುರುವಂದನೆಯಾಗಿ ಜನಸಾಮಾನ್ಯರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಪ್ರಶಂಸನೀಯವಾಗಿದೆ. ಆಯುರ್ವೇದದ ಹೆಸರಲ್ಲಿ ನಡೆಯುವ ತಪ್ಪು ಸಲಹೆ, ಮಾಹಿತಿಗಳಿಂದ ದೂರವಿರಬೇಕು ಎಂದರು.

ವೇದಿಕೆಯಲ್ಲಿ ದೇವಸ್ಥಾನದ ಅಧ್ಯಕ್ಷ ಲಕ್ಷ್ಮೀನಾರಾಯಣ ಶಾನಭಾಗ, ಜಿಎಸ್‌ಬಿ ಯುವ ಸೇವಾ ವಾಹಿನಿ ಗೌರವಾಧ್ಯಕ್ಷ ಅನಂತ ಶಾನಭಾಗ, ಅಧ್ಯಕ್ಷ ರಾಮನಾಥ ಶಾನಭಾಗ, ಸುರೇಶ ಭಟ್ ಇತರರು ಇದ್ದರು.

ಆಯುರ್ವೇದ ವೈದ್ಯರಾದ ಡಾ. ಜಗದೀಶ ಯಾಜಿ, ಡಾ. ಗಿರೀಶ ನಾಯಕ, ಡಾ. ಪ್ರಸನ್ನ ಎಸ್., ಡಾ. ಪ್ರವೀಣ ಜಿ.ಎನ್., ಡಾ. ವಾಹಿನಿ ನಾಯಕ, ಡಾ. ಸಹನಾ ಹೆಗಡೆ ಶಿರಸಿ, ಡಾ. ವೈಷ್ಣವಿ ಪಂಡಿತ ಇನ್ನಿತರರು ಶಿಬಿರ ನಡೆಸಿಕೊಟ್ಟರು. ಶಿಬಿರದ ಎಲ್ಲ ವೈದ್ಯರಿಗೆ ಹಾಗೂ ಶಿಬಿರಕ್ಕಾಗಿ ೪.೫ ಲಕ್ಷಕ್ಕೂ ಹೆಚ್ಚು ಮೊತ್ತದ ಔಷಧ ಉಚಿತವಾಗಿ ಪೂರೈಸಿದ ಕಂಪನಿಗಳ ಪ್ರತಿನಿಧಿಗಳಿಗೆ ಗೌರವಿಸಲಾಯಿತು. ನಿರ್ಮಲಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಜಿಎಸ್‌ಬಿ ಯುವ ಸೇವಾವಾಹಿನಿ ಉಪಾಧ್ಯಕ್ಷರಾದ ದರ್ಶನ ನಾಯಕ, ಮಹೇಶ ಪ್ರಭು, ಕಾರ್ಯದರ್ಶಿ ಕಮಲಾಕರ ಶಾನಭಾಗ ಇತರರು ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ