ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆಯಿಂದ ಆಯೋಜಿಸಿದ್ದ ಆಯುರ್ವೇದ ಶೈಕ್ಷಣಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಭರತ ನೆಲದ ನಮ್ಮ ಸನಾತನ ಧರ್ಮ ನಮಗೆ ನೀಡಿರುವಂತಹ ಆಯುರ್ವೇದ ಉಳಿಸುವುದು, ಅದನ್ನು ಮತ್ತಷ್ಟು ಬೆಳೆಸುವ ಶಕ್ತಿ ಇರುವುದು ಇಂದಿನ ಆಯುರ್ವೇದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದರು.ನಮ್ಮ ಆಯುರ್ವೇದದಲ್ಲಿ ಪ್ರತಿಯೊಂದಕ್ಕೂ ಚಿಕಿತ್ಸೆಗಳಿವೆ. ಆದರೆ, ಜನರು ಇದನ್ನು ಬಿಟ್ಟು 100 ವರ್ಷದ ಹಿಂದೆ ಬಂದಿರುವಂತಹ ಇಂಗ್ಲಿಷ್ ಔಷಧಿಗಳಿಗೆ ಮಾರು ಹೋಗುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿ ನಮ್ಮ ಜನ ಈ ಆಯುರ್ವೇದ ಶಾಸ್ತ್ರವನ್ನು ಅನುಸರಿಸಿದಾಗ ಮಾತ್ರ ಅವರ ಜೀವನಶೈಲಿ ಬದಲಾಗಲು ಸಾಧ್ಯ ಎಂದರು.
ಆಯುರ್ವೇದ ತಜ್ಞ ಡಾ.ಎನ್. ನಾಗೇಶ್ ಮಾತನಾಡಿ, ಇಂತಹ ಆಯುರ್ವೇದ ಶೈಕ್ಷಣಿಕ ಸಮ್ಮೇಳನವು ಪ್ರತಿ ಜಿಲ್ಲೆಗಳಲ್ಲೂ ನಿರಂತರವಾಗಿ ಆಯೀಜಿಸಿ ನಡೆಸುತ್ತ ಬಂದರೆ ನಮ್ಮ ಜನರಿಗೆ ಆಯುರ್ವೇದದ ಮಹತ್ವ ತಿಳಿಸಲು ಸಾಧ್ಯ ಎಂದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ ಮಾತನಾಡಿ, ಆಯುರ್ವೇದದ ತತ್ವಗಳನ್ನು, ಅದರ ಚಿಕಿತ್ಸೆಗಳನ್ನು ಪಡೆದುಕೊಂಡವರ ಬಾಳು ಇಂದಿಗೂ ಬಂಗಾರದಂತಿದೆ. ಈ ಸಮಾರಂಭಕ್ಕೆ ಇಷ್ಟೊಂದು ವಿದ್ಯಾರ್ಥಿಗಳು ಭಾಗವಹಿಸಿರುವುದನ್ನು ಕಂಡಾಗ ಆಯುರ್ವೇದ ಶಾಸ್ತ್ರವು ನಮ್ಮೊಟ್ಟಿಗೆ ಇಂದಿಗೂ ಜೀವಂತವಾಗಿದೆ ಎಂದು ಭಾಸವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಶ್ರೀಚಿಕ್ಕತಿಮ್ಮಯ್ಯ, ಮೈಸೂರಿನ ಆಯುರ್ವೇದ ಕಾಲೇಜಿನ ನಿವೃತ್ತ ಸ್ಥಾಯಿ ವೈದ್ಯಾಧಿಕಾರಿ ಡಾ.ಎಂ.ಎಸ್. ಮಧುಮತಿ, ಕಾರ್ಯಕ್ರಮದ ಆಯೋಜಕ ಡಾ.ಅವಿನಾಶ್ ಮತ್ತು ಡಾ.ನಿವೇಶ್, ಡಾ.ಸೃಜನ, ಡಾ. ಶಿವಲೀಲಾ, ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.