ಅಯ್ಯನಗುಡಿ ಜಾತ್ರೆ ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬ

KannadaprabhaNewsNetwork |  
Published : Feb 09, 2025, 01:31 AM IST
ಜಾತ್ರೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಅಯ್ಯನಗುಡಿ ಜಾತ್ರೆ ಕೇವಲ ಒಂದು ಹಬ್ಬವಲ್ಲ, ನಮ್ಮ ಸಂಸ್ಕೃತಿಯ ಜೀವಂತ ಚಿತ್ರ. ಹಳ್ಳಿಗಳ ಸಂಸ್ಕೃತಿ ಕೃಷಿಯಲ್ಲೂ, ಸಂಗೀತದಲ್ಲೂ, ದೇವರ ಭಕ್ತಿಯಲ್ಲೂ ಉಸಿರಾಡುತ್ತಿದೆ. ಈ ಪರಂಪರೆಯ ಉಳಿವಿಗೆ ನಮ್ಮೆಲ್ಲರ ಸಹಕಾರ ಅವಶ್ಯಕ ಎಂದು ಉಪನ್ಯಾಸಕ ಅಶೋಕ ಹಂಚಲಿ ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಅಯ್ಯನಗುಡಿ ಜಾತ್ರೆ ಕೇವಲ ಒಂದು ಹಬ್ಬವಲ್ಲ, ನಮ್ಮ ಸಂಸ್ಕೃತಿಯ ಜೀವಂತ ಚಿತ್ರ. ಹಳ್ಳಿಗಳ ಸಂಸ್ಕೃತಿ ಕೃಷಿಯಲ್ಲೂ, ಸಂಗೀತದಲ್ಲೂ, ದೇವರ ಭಕ್ತಿಯಲ್ಲೂ ಉಸಿರಾಡುತ್ತಿದೆ. ಈ ಪರಂಪರೆಯ ಉಳಿವಿಗೆ ನಮ್ಮೆಲ್ಲರ ಸಹಕಾರ ಅವಶ್ಯಕ ಎಂದು ಉಪನ್ಯಾಸಕ ಅಶೋಕ ಹಂಚಲಿ ಹೇಳಿದರು.

ಅಯ್ಯನಗುಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಲಿಂ.ಶ್ರೀಮಂತ ಶಂಕರರಾವ ನಾಡಗೌಡ ವೇದಿಕೆಯಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯ ಮೂಲ ಆಧ್ಯಾತ್ಮದಲ್ಲಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಹಳೆಯ ಕಾಲದಲ್ಲಿ ಎತ್ತುಗಳು ಕೃಷಿ ಮತ್ತು ಸಾರಿಗೆ ವ್ಯವಸ್ಥೆಯ ಕೊಂಡಿಯಾಗಿದ್ದವು. ರೈತರು ಪರಂಪರೆಯನ್ನು ಉಳಿಸಲು ಈ ಜಾತ್ರೆಯ ಮೂಲಕ ಎತ್ತುಗಳ ಮಹತ್ವವನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಹಳ್ಳಿಯ ಸಂಸ್ಕೃತಿಯನ್ನು ಜಾನಪದ ಗೀತೆಗಳು, ನಾಟಕಗಳು, ಕುಣಿತಗಳು ಪ್ರತಿಬಿಂಬಿಸುತ್ತವೆ. ಇದು ಯುವ ಪೀಳಿಗೆಗೆ ನಾಡಿನ ಮೂಲ ಪರಂಪರೆಯನ್ನು ಪರಿಚಯಿಸಲು ಸಹಾಯಕವಾಗುತ್ತದೆ ಎಂದರು.ಎಂ.ಜಿ.ಎಮ್.ಕೆ ಶಾಲೆಯ ಪ್ರಚಾರ್ಯ ಡಾ.ಸುರೇಶ ಹರನಾಳ ಮಾತನಾಡಿ, ಅಯ್ಯನಗುಡಿ ಉತ್ಸವ ಉತ್ತರ ಕರ್ನಾಟಕದ ಇತಿಹಾಸ, ಸಂಪ್ರದಾಯ ಮತ್ತು ಜನಪದ ಸಂಸ್ಕೃತಿಯ ಅಮೂಲ್ಯ ತಾಣವಾಗಿದೆ. ಇದು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿ ತುಂಬುವ, ಸಮುದಾಯವನ್ನು ಒಂದಿಗೆ ಕಟ್ಟಿ ಹಾಕುವ ಒಂದು ಮಹೋತ್ಸವ. ಎಲ್ಲರೂ ಮತ ಭೇದ, ಜಾತಿ ಭೇದವಿಲ್ಲದೆ ಎಲ್ಲರ ಕ್ಷೇಮಕ್ಕಾಗಿ ಕೆಲಸ ಮಾಡುತ್ತಿರುವುದು ಗಮನಾರ್ಹ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸಂಸಾರದ ಸಾಮರಸ್ಯ ಹಾಗೂ ಹೊಂದಾಣಿಕೆ ಜೀವನದ ಅಂಶವಾಗಿದೆ. ಮಾನವ ಸಂಬಂಧಗಳು, ಕುಟುಂಬ, ಸ್ನೇಹಿತರು ಮತ್ತು ಸಮಾಜದೊಂದಿಗೆ ಹೊಂದಾಣಿಕೆ ಸಾಧಿಸಲು ನಾವು ಪರಸ್ಪರ ಗೌರವ, ಸಹಾನುಭೂತಿ, ಹಾಗೂ ತಾಳ್ಮೆ ಬೆಳೆಸಬೇಕು. ದೋಷಗಳನ್ನು ಒಪ್ಪಿಕೊಂಡು, ಮನ್ನಿಸುವ ಮನೋಭಾವ ಬೆಳೆಸಿದರೆ ಸಂಬಂಧಗಳಲ್ಲಿ ಶಾಂತಿ ತರುವ ಸಾಧ್ಯತೆ ಇದೆ ಎಂದು ಹೇಳಿದರು.ವೀರೇಶ್ವರ ಕಾಲೇಜಿನ ಪ್ರಚಾರ್ಯ ಡಾ.ಡಿ.ಆರ್.ಮಳಖೇಡ ಹಾಗೂ ಪ್ರಾಸ್ತಾವಿಕವಾಗಿ ಡಾ.ಬಲವಂತ ಉಣ್ಣಿಭಾವಿ ಮಾತನಾಡಿ, ನಾಡಗೌಡ ಮನೆತನದವರು ವರ್ಷದಲ್ಲಿ ಐದು ಜಾತ್ರೆಗಳನ್ನು ಮಾಡುವದರ ಮೂಲಕ ಭಕ್ತಿ ಭಾವ ಮೆರಯುತ್ತಾರೆ. ಅದಕ್ಕೆ ಅವರಿಗೆ ದೇವರು ಅಧಿಕಾರ ಮತ್ತು ಐಶ್ವರ್ಯ ನೀಡಿದ್ದಾನೆ ದಾನೆ. ಈ ಜಾತ್ರೆ ಭಾವೈಕ್ಯತೆ ಸಂಕೇತ, ಜಾತ್ಯಾತೀತ ಸಂಕೇತ, ಗಂಗಾಧರೇಶ್ವರ ಹಾಗೂ ಬಡೆಮಿಯಾ ಒಂದೇ ದೇವಸ್ಥಾನದಲ್ಲಿ ಇರುವುದು ರಾಜ್ಯದಲ್ಲಿಯೇ ವಿಷೇಶವಾಗಿದೆ ಎಂದರು.ಕಾರ್ಯಕ್ರಮದಲ್ಲಿ ನಾಗಬೇನಾಳ ಶಾಲೆ ಶಿಕ್ಷಕ ಮೋಹನ ಬಾಬು ಸೇರಿ ಸ್ತಬ್ದ ಚಿತ್ರಗಳಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಮತ್ತು ನಾಲತವಾಡ ಪ್ರೀಮಿಯರ್ ಲೀಗ್ ನಲ್ಲಿ ವಿಜೇತ ತಂಡಕ್ಕೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.ಈ ವೇಳೆ ಬಸವರಾಜ ನಾಡಗೌಡ, ಪ.ಪಂ ಸದಸ್ಯ ಪೃಥ್ವಿರಾಜ ನಾಡಗೌಡ, ಬಿಜ್ಜೂರ ಗ್ರಾಪಂ ಅಧ್ಯಕ್ಷೆ ಶರಣಮ್ಮ ಹೊಸಮನಿ, ತಾಲೂಕಾ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಬಿಜ್ಜೂರ ಗ್ರಾಪಂ ಉಪಾಧ್ಯಕ್ಷ ಲಕ್ಮಣ ರಬ್ಲರ್, ಅಬ್ದುಲ್ ಗನಿ ಖಾಜಿ, ಉಮರಫಾರುಕ್ ಮೂಲಿಮನಿ, ಹಣಮಂತ ಕುರಿ ಹಾಗೂ ಇನ್ನಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ