ಏಷ್ಯಾ, ಇಂಡಿಯಾ ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಬಿ.ಆರ್.ಪ್ರತೀಕ್ ಗೌಡಗೆ ಸ್ಥಾನ

KannadaprabhaNewsNetwork |  
Published : Oct 14, 2025, 01:00 AM IST
13ಕೆಎಂಎನ್ ಡಿ21 | Kannada Prabha

ಸಾರಾಂಶ

ಮದ್ದೂರು ತಾಲೂಕಿನ ಮೆಣಸಗೆರೆ ಗ್ರಾಮದ ಜ್ಞಾನಮುದ್ರ ವಿದ್ಯಾ ಮಂದಿರ ಐಸಿಎಸ್ಇ ಶಾಲೆಯ ವಿದ್ಯಾರ್ಥಿ ಬಿ.ಆರ್.ಪ್ರತೀಕ್ ಗೌಡ ವೈಜ್ಞಾನಿಕ ಸಂಶೋಧನಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ಪ್ರತಿಷ್ಠಿತ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ತಾಲೂಕಿನ ಮೆಣಸಗೆರೆ ಗ್ರಾಮದ ಜ್ಞಾನಮುದ್ರ ವಿದ್ಯಾ ಮಂದಿರ ಐಸಿಎಸ್ಇ ಶಾಲೆಯ ವಿದ್ಯಾರ್ಥಿ ಬಿ.ಆರ್.ಪ್ರತೀಕ್ ಗೌಡ ವೈಜ್ಞಾನಿಕ ಸಂಶೋಧನಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ಪ್ರತಿಷ್ಠಿತ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.

ದೊಡ್ಡಬಳ್ಳಾಪುರದ ಅನಿಬೆಸೆಂಟ್ ಪಾರ್ಕ್ ನಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ನಾನು ವಿಜ್ಞಾನಿ 2025 ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ 7 ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಆಪ್ಟಿಕಲ್ ಗ್ಲಾಸ್, ಮಿರರ್ ಹೋಲ್ಡರ್, ಟೆಲಿಸ್ಕೋಪ್ ಟ್ಯೂಬ್ ಪೈಂಟರ್, ಪೋಕಸರ್ ಮುಂತಾದ ಭಾಗಗಳನ್ನು ಬಳಸಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಟೆಲಿಸ್ಕೋಪನ್ನು ತಯಾರಿಸಿ, ಅತ್ಯಂತ ಕಡಿಮೆ ಅವಧಿಯಲ್ಲಿ ಅಂತಿಮ ಆಪ್ಟಿಕಲ್ ಅಲೈನ್ ಮೆಂಟ್ ಮತ್ತು ಕೊಲಿಮೇಷನನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣ್ ಕುಮಾರ್ ರವರು ಟೆಲಿಸ್ಕೋಪ್ ಅಸೆಂಬ್ಲಿ ಪ್ರಾಜೆಕ್ಟ್ ನಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರತೀಕ್ ಗೌಡಗೆ ಪ್ರಮಾಣ ಪತ್ರವನ್ನು ನೀಡಿ ವಿದ್ಯಾರ್ಥಿಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಈ ವಿಷಯದ ಕುರಿತು ವಿದ್ಯಾರ್ಥಿಗೆ ವಿಜ್ಞಾನ ಮತ್ತು ನವೀನತೆಗಳ ಬಗ್ಗೆ ಇರುವ ಗಾಢ ಆಸಕ್ತಿ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಬಿದರಹೊಸಹಳ್ಳಿಯ ರಾಜಣ್ಣ - ರೇಖಾ ದಂಪತಿಗಳ ಪುತ್ರ ಪ್ರತೀಕ್ ಗೌಡರ ಸಾಧನೆಗೆ ಜ್ಞಾನಮುದ್ರ ವಿದ್ಯಾಮಂದಿರ ಶಾಲೆ ಸಂಸ್ಥಾಪಕರಾದ ಡಾ.ಸೌಮ್ಯರಾಜೇಶ್ ಮತ್ತು ಶಿವಮ್ಮ ಶಿವಕುಮಾರ್, ಸಂಸ್ಥೆ ಆಡಳಿತ ಅಧಿಕಾರಿ ಪ್ರಭಾವತಿ, ಪ್ರಾಂಶುಪಾಲೆ ಕೆ.ಎಸ್.ಶ್ರುತಿ, ಕಚೇರಿ ಸಿಬ್ಬಂದಿ ವರ್ಗ, ಮುಖ್ಯ ಶಿಕ್ಷಕರು ಹಾಗೂ ಶಾಲಾ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ