ಕನ್ನಡಪ್ರಭ ವಾರ್ತೆ ಪಾವಗಡ
ಒಂದು ತಿಂಗಳ ಹಿಂದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಆನ್‌ಲೈನ್ ಪ್ರಕ್ರಿಯೆ ಮೂಲಕ ಮತದಾನ ನಡೆಸಿದ್ದು, ಈ ಸಂಬಂಧ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಹೆಚ್ಚು ಮತ ಪಡೆಯುವ ಮೂಲಕ ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿ ಬಿ.ಸುಜಿತ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹಾಗೆಯೇ ನಗರ ಘಟಕದ ಅಧ್ಯಕ್ಷರಾಗಿ ನವೀನ್‌ಕುಮಾರ್ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಭಾನುವಾರ ಶಾಸಕ ಎಚ್.ವಿ.ವೆಂಕಟೇಶ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಮಾಜಿ ಅಧ್ಯಕ್ಷ ಜಿ ಮಹೇಶ್, ಹೊಸಹಳ್ಳಿ ಮಂಜುನಾಥ್,ಪಳವಳ್ಳಿ ಶಿವಕುಮಾರ್, ಕೃಷ್ಣಮೂರ್ತಿ, ಪ್ರಕಾಶ್ , ಬಾಲು,ಪಿ ಎಲ್ ಮಣಿ, ಓಂಕಾರ್ ನಾಯಕ, ಹನುಮೇಶ್,ಗೋವಿಂದ ಯಾದವ್,ಭಾನು ಸೇರಿ ಇನ್ನೂ ಮುಂತಾದ ಯುವ ಕಾರ್ಯಕರ್ತರು ಇದ್ದರು.