ಬಾಬಾಸಾಹೇಬ ಅಂಬೇಡ್ಕರ್ ವಿಶ್ವಮಾನವ: ತಹಸೀಲ್ದಾರ್ ತೆನ್ನೆಳ್ಳಿ

KannadaprabhaNewsNetwork | Published : Apr 15, 2024 1:15 AM

ಸಾರಾಂಶ

ಅಂಬೇಡ್ಕರ್‌ ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಶಿಕ್ಷಣ ಪಡೆದು ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ.

ಅಂಬೇಡ್ಕರ್‌ ಪುತ್ಥಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಚಾಲನೆಕನ್ನಡಪ್ರಭ ವಾರ್ತೆ ಯಲಬುರ್ಗಾ

ಡಾ. ಬಾಬಾಸಾಹೇಬ ಅಂಬೇಡ್ಕರ್‌ ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಶಿಕ್ಷಣ ಪಡೆದು ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ ಎಂದು ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ ಹೇಳಿದರು.

ಇಲ್ಲಿನ ಚಲವಾದಿ ಕಾಲನಿ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ೧೩೩ನೇ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ತಾಲೂಕಾಡಳಿತ ಹಾಗೂ ಛಲವಾದಿ ಮಹಾಸಭಾ ವತಿಯಿಂದ ಅಂಬೇಡ್ಕರ್‌ ಪುತ್ಥಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ದಲಿತರು ಶಿಕ್ಷಣವಂತರಾದಾಗ ಮಾತ್ರ ಅಸ್ಪೃಶ್ಯತೆ ಎಂಬ ರೋಗದಿಂದ ಮುಕ್ತರಾಗಲು ಸಾಧ್ಯ ಎಂದರು.

ಸಿಪಿಐ ಮೌನೇಶ್ವರ ಪಾಟೀಲ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಕೇವಲ ಒಂದೇ ಜನಾಂಗಕ್ಕೆ ಸಿಮೀತವಾಗಿಲ್ಲ, ಭಾರತ ಸಂವಿಧಾನ ರಚಿಸುವ ಮೂಲಕ ವಿಶ್ವಮಾನವರಾಗಿದ್ದಾರೆ. ಅಂಥವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವರ್ಗರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ತಾಪಂ ಸಂತೋಷ ಪಾಟೀಲ ಬಿರಾದಾರ ಮಾತನಾಡಿ, ನಾಡಿನಲ್ಲಿ ಉನ್ನತ ಸ್ಥಾನಕ್ಕೇರಬೇಕಾದರೆ ಮೊದಲು ನಮಗೆ ಶಿಕ್ಷಣ ಅವಶ್ಯ. ಡಾ. ಅಂಬೇಡ್ಕರ್‌ ಶಿಕ್ಷಣದಿಂದ ಮೇಲೆ ಬಂದು ಭಾರತದ ಸಂವಿಧಾನ ರಚಿಸುವ ಮೂಲಕ ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳಾದ ವಿ.ಕೆ. ಬಡಿಗೇರ, ಪ್ರಾಣೇಶ ಹಾದಿಮನಿ, ನಿಂಗನಗೌಡ ಪಾಟೀಲ, ಪಿಎಸ್‌ಐ ವಿಜಯಪ್ರತಾಪ, ಎಫ್.ಎಂ. ಕಳ್ಳಿ, ರವಿ ಬಾಗಲಕೋಟಿ, ಮಹಾಂತೇಶ ಮಠದ, ಕೆ.ಎಚ್. ಛೇತ್ರದ, ದೇವೇಂದ್ರಪ್ಪ, ಹನುಮಂತಗೌಡ ಪಾಟೀಲ ಹಾಗೂ ಛಲವಾದಿ ಮಹಾಸಭಾದ ಅಧ್ಯಕ್ಷ ಅಂದಪ್ಪ ಹಾಳಕೇರಿ, ಸಮಾಜದ ಮುಖಂಡರಾದ ಸಿದ್ದಪ್ಪ ಕಟ್ಟಿಮನಿ, ಶಂಕರ್ ಜಕ್ಕಲಿ, ರಮೇಶ ಛಲವಾದಿ, ನಾಗರಾಜ ಆಲೂರ, ಗಣೇಶ ಕುಡಕುಂಟಿ, ಶಶಿಧರ ಹೊಸ್ಮನಿ, ಅರುಣ ಶರಣದವರ್, ನಾಗರಾಜ ಬಿನ್ನಾಳ, ಪ್ರಕಾಶ ಛಲವಾದಿ, ಮಹಾಂತೇಶ ಛಲವಾದಿ, ಯಲ್ಲಪ್ಪ ಲಮಾಣಿ, ನಾಗರಾಜ ನರಗುಂದ ಸೇರಿದಂತೆ ಮತ್ತಿತರರು ಇದ್ದರು.

Share this article