ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಬಾಬು ಜಗಜೀವನ್‌ರಾಂ ಅವರ 118ನೇ ಜನ್ಮ ದಿನಾಚರಣೆಯ ಮೆರವಣಿಗೆ ವೇಳೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಅರ್ಪಿಸಿ ಮಾತನಾಡಿದರು.
ದೇಶಕ್ಕೆ ಸಂವಿಧಾನವನ್ನು ಡಾ ಬಿ.ಆರ್ ಅಂಬೇಡ್ಕರ್ ಜಾರಿಗೆ ತಂದರೆ, ಹಸಿರು ಕ್ರಾಂತಿಯ ಹರಿಕಾರ ಬಾಬು ಜನಜೀವನ್ ರಾಂ ಅವರು ದೇಶಕ್ಕೆ ಹಸಿರು ಕ್ರಾಂತಿಯನ್ನು ಮಾಡಲು ಹೋರಾಟ ಮಾಡಿದರು. ಈ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.ಈ ವೇಳೆ ತಹಶೀಲ್ದಾರ್ ಪರುಶುರಾಂ ಸತ್ತಿಗೇರಿ, ಮುಖ್ಯಾಧಿಕಾರಿ ಎಂ.ರಾಜಣ್ಣ, ಬಿಇಒ ಮಹೇಶ್, ವೈದ್ಯಾಧಿಕಾರಿ ಡಾ. ಮಾರುತಿ, ಎಇಇ ರಾಮಕೃಷ್ಣ, ಎಇಇ ಯಶ್ವಂತ್, ಪುರಸಭಾ ಉಪಾಧ್ಯಕ್ಷ ಎಂ.ಎಲ್. ದಿನೇಶ್, ಸದಸ್ಯ ದಯಾನಂದ್, ಬಾಬು ಜಗಜೀವನ್ ಆಚರಣ ಜಿಲ್ಲಾ ಸಮಿತಿ ಅಧ್ಯಕ್ಷ ಅರಕೆರೆ ಸಿದ್ದರಾಜು, ತಾಲೂಕು ಸಮಿತಿ ಅಧ್ಯಕ್ಷ ಆಟೋ ಶಂಕರ್, ಬೌಧ ಮಹಾ ಸಭಾದ ಕೆ.ಟಿ.ರಂಗಯ್ಯ , ಅರಕೆರೆ ಶಿವಯ್ಯ, ದಲಿತ ಸಂಘಟನೆಯ ಕುಬೇರಪ್ಪ, ರವಿಚಂದ್ರ ಸೇರಿದಂತೆ ಇತರ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ನಡೆದ ಡಾ.ಬಾಬುಜಗಜೀವನ ರಾಂ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿ, ಬಾಬು ಜಗಜೀವನ ರಾಮ್ ಅವರು ದೇಶದಲ್ಲಿ ಸಮಾನತೆ ಕಲ್ಪಿಸುವ ಹಾಗೂ ಸ್ವಾತಂತ್ರ್ಯ ಚಳವಳಿಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು.
ವಿಜಯ ಕಾಲೇಜಿ ಪ್ರಾಧ್ಯಾಪಕ ಜಯಕುಮಾರ್ ಉಪನ್ಯಾಸ ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಾದ ಅಶ್ವಿನಿ, ರಕ್ಷಿತಾ ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು.