ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕೋನಾಳ ಗ್ರಾಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ರಾಮ್ ವೃತ್ತ ಉದ್ಘಾಟನೆ ಮತ್ತು ಕೊಳವೆಬಾವಿಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ಕಾನೂನುಗಳು ಮತ್ತು ಕಾರ್ಮಿಕರ ಹಕ್ಕುಗಳನ್ನು ಅವರಿಗೆ ಲಭಿಸುವಂತೆ ವಿಶ್ವ ಮಟ್ಟದಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಪಂಚವಾರ್ಷಿಕ ಯೋಜನೆ ಮೂಲಕ ಕೃಷಿಗೆ ಹಸರೀಕರಣದ ಉತ್ತೇಜ ನೀಡಿದರು. ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಧೀಮಂತ ನಾಯಕ ಎಂದರು.ಮಾದಿಗ ಯುವ ಸೇನಾ ರಾಜಾಧ್ಯಕ್ಷ ನಂದಕುಮಾರ ಪಿ. ಕನ್ನೆಳ್ಳಿ ಮಾತನಾಡಿ, ಮಾದಿಗ ಸಮಾಜವು ಒಗ್ಗಟ್ಟಾಗಬೇಕಿದೆ. ಶಿಕ್ಷಣದಲ್ಲಿ ಸಾಕಷ್ಟು ಹಿಂದುಳಿದಿದ್ದೇವೆ. ಶಿಕ್ಷಣ ಪಡೆದರೆ ಸಮಾಜದ ಅಭಿವೃದ್ಧಿ ಸಾಧ್ಯ. ರಾಜಕೀಯ ಸಂಕುಲಕ್ಕೆ ಸಿಲುಕದೆ ಸ್ವಾಭಿಮಾನದಿಂದ ಬದುಕಬೇಕು ಎಂದರು.
ದೇವತ್ಕಲ್ ಪಿಡಿಓ ರಾಜು ಮೇಟಿ, ಪರಣ್ಣಗೌಡ ಶಾಂತಪುರ, ಅಂಬ್ರೇಶಗೌಡ ರೂಪಲಬಂಡಿ, ತಿರುಪತಿ, ಸೋಮಶೇಖರ ಬಂದೊಡ್ಡಿ, ಭೀಮು ಮ್ಯಾಗೇರಿ, ಬಾಬು ವಾಗಣಗೇರಿ, ನಾಗರಾಜ ಚನ್ನಪಟ್ಟಣ ಸೇರಿದಂತೆ ಇತರರಿದ್ದರು.