ಆ್ಯಂಬುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಗಣೇಶ ನಾಯ್ಕ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆ ಮಾಡಿಸಿ ಮಗು ಹಾಗೂ ತಾಯಿ ಜೀವ ಉಳಿಸಿದ್ದಾರೆ.

ಅಂಕೋಲಾ:

ಹೆರಿಗೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆ್ಯಂಬುಲೆನ್ಸ್‌ನಲ್ಲಿಯೇ ತಾಯಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ತಾಲೂಕಿನ ಹೊನ್ನೆಬೈಲದಲ್ಲಿ ನಡೆದಿದೆ.ತಾಲೂಕಿನ ಹೊನ್ನೆಬೈಲ್‌ದ ಕಲಾವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಆಟೋರಿಕ್ಷಾ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿಯ ಮಧ್ಯೆ ಪ್ರಸವ ವೇದನೆ ಹೆಚ್ಚಾಗಿದೆ. ಇದರಿಂದ ಹತ್ತಿರದಲ್ಲಿದ್ದ ಮನೆಗೆ ಕರೆದುಕೊಂಡು ಉಪಚರಿಸಲು ಮುಂದಾಗಿದ್ದರು. ತೀವ್ರ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಸಂಗತಿಯನ್ನ (ಉಪವಿಭಾಗ) ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಗಣೇಶ ನಾಯ್ಕ ಅವರಿಗೆ ದೂರವಾಣಿ ಮೂಲಕ ತಿಳಿಸಿ ತುರ್ತು ಸಹಾಯದ ಕೋರಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಗ್ಯಾಧಿಕಾರಿ ಗಣೇಶ ನಾಯ್ಕ, ಆ್ಯಂಬುಲೆನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ವೇಳೆ ಪ್ರಸನ ವೇದನೆ ಇನ್ನುಷ್ಟು ಹೆಚ್ಚಾಗಿದೆ. ಆಗ ಗಣೇಶ ನಾಯ್ಕ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆ ಮಾಡಿಸಿ ಮಗು ಹಾಗೂ ತಾಯಿ ಜೀವ ಉಳಿಸಿದ್ದಾರೆ.

Share this article