ಆಷಾಢ ಶುಕ್ರವಾರದ ಹಿನ್ನೆಲೆ: ಚಾಮುಂಡೇಶ್ವರಿ ದರ್ಶನ ಪಡೆದ ಸಂಸದ ಯದುವೀರ್

KannadaprabhaNewsNetwork |  
Published : Jul 03, 2025, 11:47 PM IST
6 | Kannada Prabha

ಸಾರಾಂಶ

2000 ರು. ಟಿಕೆಟ್, 300 ರು. ಟಿಕೆಟ್, ಸಾಮಾನ್ಯ ದರ್ಶನ ಭಾಗದಲ್ಲಿ ವೀಕ್ಷಣೆ ನಡೆಸಿದ್ದೇನೆ. ಬೆಟ್ಟದಲ್ಲಿ ಭಕ್ತಾದಿಗಳಿಗೆ ಅವ್ಯವಸ್ಥೆ ಆಗಿದೆ ಎಂದು ದೂರು ಕೇಳಿ ಬಂದಿತ್ತು. ಅದರ ಪ್ರಯುಕ್ತ ನಾನು ಒಬ್ಬ ಜನಪ್ರತಿನಿಧಿಯಾಗಿ ಭೇಟಿ ಮಾಡಿದ್ದೇನೆ. ಎಲ್ಲವನ್ನೂ ವೀಕ್ಷಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆ, ಮಾಡಿರುವ ವ್ಯವಸ್ಥೆಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶೀಲಿಸಿದರು.

ಚಾಮುಂಡಿಬೆಟ್ಟಕ್ಕೆ ಗುರುವಾರ ಭೇಟಿ ನೀಡಿ ಕಳೆದ ವಾರದ ಅವ್ಯವಸ್ಥೆಯ ಆರೋಪದ ಹಿನ್ನೆಲೆಯಲ್ಲಿ ಸಿದ್ಧತೆ ಪರಿಶೀಲಿಸಿದರು.

ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪ್ರತಿಯೊಂದನ್ನು ವೀಕ್ಷಿಸಿ, ಕೆಲವು ಸಲಹೆ ನೀಡಿದರು. ಭಕ್ತಾಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಒಂದಿಷ್ಟು ಕ್ರಮ ಕೈಗೊಳ್ಳುವಂತೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಅವರಿಗೆ ಸಲಹೆ ನೀಡಿದರು.

ಬಳಿಕ ಮಾತನಾಡಿದ ಅವರು, ಆಷಾಢ ಮಾಸದ ದರ್ಶನದಲ್ಲಿ ಅವ್ಯವಸ್ಥೆಯಾಗಿತ್ತು ಎಂಬ ವಿಚಾರ ಕೇಳಿ ಬಂದಿದ್ದರಿಂದ ಇಂದು ಭೇಟಿ ನೀಡಿದ್ದೇನೆ. ಎರಡನೇ ಶುಕ್ರವಾರದಲ್ಲಿ ಇಂತಹ ಅವ್ಯವಸ್ಥೆ ಮರುಕಳಿಸದಂತೆ ಸೂಚಿಸಿದ್ದೇನೆ ಎಂದರು.

2000 ರು. ಟಿಕೆಟ್, 300 ರು. ಟಿಕೆಟ್, ಸಾಮಾನ್ಯ ದರ್ಶನ ಭಾಗದಲ್ಲಿ ವೀಕ್ಷಣೆ ನಡೆಸಿದ್ದೇನೆ. ಬೆಟ್ಟದಲ್ಲಿ ಭಕ್ತಾದಿಗಳಿಗೆ ಅವ್ಯವಸ್ಥೆ ಆಗಿದೆ ಎಂದು ದೂರು ಕೇಳಿ ಬಂದಿತ್ತು. ಅದರ ಪ್ರಯುಕ್ತ ನಾನು ಒಬ್ಬ ಜನಪ್ರತಿನಿಧಿಯಾಗಿ ಭೇಟಿ ಮಾಡಿದ್ದೇನೆ. ಎಲ್ಲವನ್ನೂ ವೀಕ್ಷಿಸಿದ್ದೇನೆ. ಅಧಿಕಾರಿಗಳಿಗೂ ಕೆಲವು ಸೂಚನೆ ನೋಡಿದ್ದೇನೆ. ದರ್ಶನ ಸಂದರ್ಭದಲ್ಲಿ ಸರಿಯಾಗಿ ವ್ಯವಸ್ಥೆ ಮಾಡಿಲ್ಲ, ಧರ್ಮ ದರ್ಶನ, ಟಿಕೆಟ್ ಪಡೆದು ಹೋಗುವವರು ಎಲ್ಲರಿಗೂ ಒಂದು ಕಡೆ ಬಂದು ಸೇರಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ ಮತ್ತು ಪ್ರಸಾದ ವಿತರಣೆಯಲ್ಲೂ ಸರಿಯಾಗಿ ವಿತರಿಸುತ್ತಿಲ್ಲ ಎಂಬ ದೂರು ಕೇಳಿ ಬಂದಿತ್ತು ಎಂದರು.

ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.

ಬಳಿಕ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರು ಯದುವೀರ್ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಪ್ರಸಾದ ವಿತರಿಸಿದರು.ಆಷಾಢ ಶುಕ್ರವಾರ 2 ಸಾವಿರ ರು. ಟಿಕೆಟ್ ರದ್ದುಗೊಳಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಹಾಗೂ ವಿಐಪಿ ದರ್ಶನಕ್ಕೆ ನಿಗದಿ ಮಾಡಿರುವ 2 ಸಾವಿರ ರು. ಟಿಕೆಟ್ ವ್ಯವಸ್ಥೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ರಾಜ್ಯಾಧ್ಯಕ್ಷ ಬಿ. ಶಿವಣ್ಣ ಆಗ್ರಹಿಸಿದರು.

ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆಷಾಢ ಶುಕ್ರವಾರಗಳಂದು ಭಕ್ತರ ಸಂಖ್ಯೆ ಅಪಾರವಾಗಿರುತ್ತದೆ. ಚಾಮುಂಡಿಬೆಟ್ಟಕ್ಕೆ ಬರುವವರಿಗೆ ಸರಿಯಾದ ಮೂಲ ಸೌಕರ್ಯ ಇಲ್ಲ. ಶೌಚಾಲಯ ವ್ಯವಸ್ಥೆಯೂ ಅಸಮರ್ಪಕವಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಹಿಂದೆಂದೂ ದರ್ಶನಕ್ಕೆ 2 ಸಾವಿರ ಟಿಕೆಟ್ ನಿಗದಿ ಮಾಡಿದ ಇತಿಹಾಸವೇ ಇಲ್ಲ. ವಿಐಪಿ ಅಥವಾ ಜನಸಾಮಾನ್ಯರಾಗಲಿ ಎಲ್ಲರಿಗೂ ದರ್ಶನಾವಕಾಶ ಒದಗಿಸಬೇಕಾದುದು ದೇವಸ್ಥಾನದ ಕರ್ತವ್ಯ. ಹೀಗಿರುವಾಗ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಖಂಡಿಸಿದರು. ಪದಾಧಿಕಾರಿಗಳಾದ ನಾಗಸುಂದರ್, ಕುಮಾರ್, ಮಂಜುನಾಥ್, ಭಾಗ್ಯಮ್ಮ, ಸ್ವಾಮಿನಾಯಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು
ನಗರದಲ್ಲಿ ಮಹಿಳೆ ಮೇಲೆ ನಾಯಿ ಅಟ್ಟಹಾಸ, ವಿವಿಧೆಡೆ 50 ಹೊಲಿಗೆ